ಪುಟ:ವೈಶಾಖ.pdf/೧೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೫೬ ವೈಶಾಖ ನನ್ನೆತ್ತೂ ಸಂತೋಸ ಪ್ಯಾಟೇ ವಾಸ ಜಂಖಾನ ಹಾಸ ನನ್ನೆತ್ತೂ ಉಪಾಸ ನಾನೂ ಉಪಾಸ -“ಇದೇನ ಇಂಗ ತಟ್ಟಾದು, ನನ್ನ ತೊಡೆಯೇನು ಮಧ್ಯೆ ಕೆಟ್ಟೋಯ್ತ? - ತಗಿ, ತಗಿ” ಅಂತು ಆ ಎಂಗಸು. ನಿಶಾ ಏರ ಕೆಲವುಏರ್ ಊಊಊ ಅಂತ ಎಲೆ ಮಕ್ಕಳಂಗೆ ಅಳಕ್ಕೆ ಸುರು ಮಾಡಿದ್ರು... ಮನೆ ಖಾಲಿ ಆಗೊವೋತೆ ನಾತ್ರೆಗೆ ಸುಮಾರು ವಯಸೇ ಆಗಿತ್ತು. ಸುನಿಕೊಪ್ಪಲ ಗೋಡು ಸಾಬು, ಅಂಗೇಯ ಇನ್ನು ಮೂರು ನಾಕಾಳ ಹೂರೀಕೆ ವೊ೦ಡಸಬೇಕಾದ್ರೆ ರಾಚ ತಾನು ಕಲತ ಬುದ್ದೀನೆಲ್ಲ ಯಚ್ಚ ಮಾಡಬೇಕಾಯ್ತು! “ಅಲ್ಲಿ ವೋಟೋಂದ ರುಸಿ ಅಂಗೆ ಕುಂತು ಅದ್ಯಾನ ಮಾಡ್ತಿದ್ದೀಲ ಲಕ್ಕ?... ಗಮ್ಮನೆ ಎದ್ದು ಬಂದು ಚಾಪೆ ಎಣಿಸಯಾದು ಕಂಡಿಪ್ಪಿ -ಕುಂತುಬುಟ್ಟ ಅಲ್ಲಿ ಗಡ್ಡದಯ್ಯನಂಗೆ!- ಬಾ, ಬಾ...” ದ್ಯಾವಾಜಿಯ ಈ ಮಾತು ಲಕ್ಕನ ಆಲೋಚ್ಛೆ ಜಾಡ ತಟಕ್ಕೆ ಕಡುದಾಕ್ಕು. “ಇಲ್ಲ ಕನತ್ತೆ, ಇವೊತ್ತು ನಂಗ್ಯಾಕೋ ಮನ್ಶಿಕಯ್ಯ ವಡುತ, ಕುಂತುಕಳಾಕು ಆಯುತಾ ಇಲ್ಲ. ಗುಡ್ಲು ವಳೀಕೋಗಿ ಬಿದ್ದು ಕತ್ತೀನಿ” ಅಂದು ಲಕ್ಕ ಎಲ್ಲೋಯ್ತು ಇಾಗ, ದ್ಯಾವಾಜಿ- “ಬಾರ್ ಅಪ್ಪಯ್ಯ. ಒಂದು ಕತೆ ಯೋಳಿಕೊಟ್ಟೆನು. ಅದ ಕ್ಯಾಳಿದಂಗೆ ನಿನ್ನ ಮಮ್ಮಿಕಯ್ಯ ವಡುತ ಗಿಡುತ ಯೆಲ್ಲ ಚಟ್ ಆಗೋದೆ” ಅಂತ ಆಸೆ ತೋರಿದ್ದು. ಅದಕ್ಕೆ ಕ- “ವೋಗತ್ತೆ, ನಿನ್ನ ಕತೆಯೂ ಬ್ಯಾಡ, ಯಾನೂ ಬ್ಯಾಡ, ಸದ್ಯೆ ನಾ ಗುಡ್ಡ ವಳೀಕೋಗಿ ಬಿದ್ದ ಕಂಡ್ರೆ ಸಾಕಾಗದೆ” ಅಂದು ಗುಡ್ಡು ವಳೀಕೆ ಅವನು ನುಸೀತಿದ್ದಂಗೆ, ದ್ಯಾವಾಜಿ- ಎಂಗಸರ ಕಡೀಕೆ ತಿರುಗಿ, “ಇದ್ಯಾನ ಇವತ್ತು ನಮ್ಮ ಲಕ್ಕ ಒಳ್ಳಿ ಬವಾಳಿ ಬಂದೋನಂಗೆ ಅಡ್ಡವನಲ್ಲ?... ಲೇ ಕಲ್ಯಾಣಿ, ನಿನ್ನ ಹೈದಂಗೆ ಬ್ಯಾಗ ಒಂದು ಎಣ್ಣ ಸ್ವಾಡು. ಈ ಗ್ಯಾನಗೆಟ್ಟಾಟ ಸಾಜವಾಗಿ ಬುಟೋಯ್ತದೆ!” ಅಂದು ಇನ್ನೊಟು ಹೊಗೆಸೊಪ್ಪು ತಗುದು ದವಡೆಗೆ ವತ್ತರಿಸಿದ್ದು. “ಯಾರನ್ನಾಕೆ ಉಡುಕ್ತ ವೋಗಬೇಕು?- ನಮ್ಮ ಹುಚ್ಚುಬೋರಿ ಎಣ್ಮು ಚಲುವೀನೆ ಇಲ್ವ?” - ಬೊಳ್ಳೆ ಎಡತಿ ಅವರ ಮಾತಿನ ಮದ್ಯಕೆ ಅಗ್ರಣೆ ಆಕಿದ್ದು...