ವಿಷಯಕ್ಕೆ ಹೋಗು

ಪುಟ:ವೈಶಾಖ.pdf/೧೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಮಗ್ರ ಕಾದಂಬರಿಗಳು ೧೫೯ ರಾಜಕುಮಾರನೊಬ್ಬ ಕಾಡುಹಂದಿಯ ಬೆನ್ನುಹತ್ತಿ ತನ್ನ ಸಿಬ್ಬಂದಿಯಿಂದ ಬೇರ್ಪಟ್ಟು ಆ ಗುಹೆಯ ಬಳಿ ಬರುತ್ತಾನೆ. ಕಿಂಡಿಯಿಂದ ನೋಡಿದೊಡನೆಯೆ ಆ ರಾಜಕುಮಾರನಲ್ಲಿ ವಿಶ್ವಾಸ ಹುಟ್ಟಿ ತನ್ನ ದುಃಖದ ವೃತ್ತಾಂತವನ್ನು ಹೇಳಿಕೊಳ್ಳುತ್ತಾಳೆ, ರಾಜಕುಮಾರಿ. ಆಗ ಆ ರಾಜಕುಮಾರ ಅವಳಿಗೆ ಒಂದು ಉಪಾಯವನ್ನು ಹೇಳಿಕೊಡುವನು... ರಾಕ್ಷಸ ಬಂದೊಡನೆಯ, ಇನ್ನೇನು ತಾನು ಕೈಗೊಂಡ ವ್ರತ ಮುಗಿಯುತ್ತಿರುವದರಿಂದ ತಾನೇನೋ ಅವನಿಗೆ ಶರಣಾಗುವುದಾಗಿಯೂ ಆದರೆ ಆಗಿಂದಾಗ ಏಕಾಂಗಿಯಾಗಿ ಕಾಡಿನಲ್ಲಿ ಅಲೆಯುವಾಗ ಯಾರಿಂದಲಾದರೂ ಅವನ ಪ್ರಾಣಕೆ ಹಾನಿ ಸಂಭವಿಸಿದರೆ ತನ್ನ ಪಾಡೇನೆಂದು ಕೇಳಬೇಕೆಂಬುದೇ ಆ ಉಪಾಯ!- ಅದನ್ನು ಹೇಳಿಕೊಟ್ಟು, ದೂರದ ಮರವೊಂದನ್ನೇರಿ ರಾಜಕುಮಾರ ಅವಿತಿರುತ್ತಾನೆ... - ಆ ಸಂಜೆ ಆಹಾರ ಸಂಗ್ರಹಿಸಿ ಮರಳಿದ ರಾಕ್ಷಸ ಚಿಂತಾಕ್ರಾಂತಳಾಗಿದ್ದಂತೆ ಕಂಡ ರಾಜಕುಮಾರಿಯನ್ನು ಅದರ ಕಾರಣವೇನೆಂದು ಕೇಳುವನು. ಆಗ ರಾಜಕುಮಾರ ಹೇಳಿಕೊಟ್ಟಂತೆ ಅವಳು ನಟನೆ ಮಾಡಿ ಕಣ್ಣೀರಿಡುವಳು. ರಾಕ್ಷಸ ಅವಳ ಕಣ್ಣೀರನ್ನು ಒರಸುತ್ತ, ತನ್ನನ್ನು ಕೊಲ್ಲಲು ಇಡೀ ಭೂಮಂಡಲದಲ್ಲಿ ಯಾರಿಂದಲೂ ಶಕ್ಯವಿಲ್ಲವೆಂದು ಹೇಳಿ, ಸಪ್ತಸಾಗರದ ನಡುವೆ ಇರುವ ದ್ವೀಪದೊಳಗಿನ ಬುಡ ಬೆಳ್ಳಿ ನಡು ಚಿನ್ನ ಎಲೆ ಪಚ್ಚೆಗೊನೆ ಮುತ್ತು ಅನ್ನುವ ಬಾಳೆಕಂಬದಲ್ಲಿ ತನ್ನ ಪ್ರಾಣ ಜೋಪಾನವಾಗಿ ಅಡಗಿರುವುದೆಂದು ತಿಳಿಸುತ್ತಾನೆ... ಮಾರನೆಯ ದಿನ ರಾಕ್ಷಸರು ಆಹಾರಸಂಗ್ರಹಣೆಗೆ ತೆರಳಿದ ಸಮಯದಲ್ಲಿ, ಗುಹೆಯ ಬಳಿ ಬಂದ ರಾಜಕುಮಾರನಿಗೆ ರಾಕ್ಷಸನ ಜೀವನದ ರಹಸ್ಯವನ್ನು ಅವಳು ಅರಹುತ್ತಾಳೆ. ಒಡನೆಯೇ ಆ ದ್ವೀಪಕ್ಕೆ ತೆರಳಿ, ಆ ಬಾಳೆಕಂಬವನ್ನು ಕಡಿದುಹಾಕುವುದಾಗಿ ಶಪಥ ಮಾಡಿ ಹೊರಟ ರಾಜಕುಮಾರನಿಗೆ ದಾರಿ ಕ್ರಮಿಸಿದಂತೆ ಸಪ್ತಸಾಗರಗಳ ನಡುವಿನ ಆ ದ್ವೀಪಕ್ಕೆ ತಾನು ಹೋಗುವುದಾದರೂ ಹೇಗೆ? ಎಂಬ ಚಿಂತೆ ಆಕ್ರಮಿಸುತ್ತದೆ. ಕ್ರಮಕ್ರಮೇಣ ಅದು ತನ್ನಿಂದ ಸಾಧ್ಯವೇ ಇಲ್ಲವೆಂದು ಮನಗಂಡಾಗ, ಮಗ್ಗಳಾ ರಾಜಕುಮಾರಿಗೆ ಅಷ್ಟೆಲ್ಲ ಭರವಸೆಯಿತ್ತು ಅನರ್ಧ ಮಾಡಿದೆ. ತನ್ನಂಥ, ಪಾಷಂಡಿಯು ಇನ್ನು ಈ ಲೋದಲ್ಲಿ ಬದುಕಿರಬಾರದೆಂದು ನಿಶ್ಚಯಿಸಿ, ಖಡ್ಗವನ್ನು ಒರೆಯಿಂದ ಹಿರಿದು, ಸಮೀಪದಲ್ಲೆ ಕಾಣಿಸಿದ ಕಾಳಿಕಾಮ್ಮನ ಗುಡಿಯ ಮುಂದೆ ನಿಂತು, ಆ ತಾಯಿಗಾದರೂ ಪ್ರೀತಿಯಾಗಲಿ ಎಂದುಕೊಳ್ಳುತ್ತ, ತಲೆ ಕಡಿದುಕೊಳ್ಳಲು ಖಡ್ಗವನ್ನೆತ್ತಿದಾಗ, ಕಾಳಿಯು ಪ್ರತ್ಯಕ್ಷಳಾಗಿ ಕೆಲವು ಭಸ್ಮದ ಪೊಟ್ಟಣಗಳನ್ನೂ ಮಂತ್ರಾಕ್ಷತೆಯನ್ನೂ ಕೊಟ್ಟು,