ಪುಟ:ವೈಶಾಖ.pdf/೧೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೬೨ ವೈಶಾಖ “ಸಿವುನಿ, ಅಣ್ಣಂಗೆ ಜೋರು ಜೊರ ಬಂದದೆ. ಕುಂಡಿಮಾದಿ ಅಟ್ಟಲಿ ನಾಕು ಮೆಣಸಿನ ಕಾಳ ಈಸುಗಂಬಂದು ಕಸಾಯ ಕಾಯ್ದೆ ಕೂಡು.”- ಇತ್ತಲ್ಲಿ ಇದ್ದೋಳೆ ಕೂಗಿ ಯೋಳಿ,” ಮಠದ ಅಯೋರು ಕಂಬಳಕೆ ಯೋಳಿಕಳುಸಿ, ನಾ ವೋಯ್ತಾ ಇನ್ನಿ” ಅಂದು, ಗುಡ್ಡಿನ ಕದವ ಮುಂದುಕೆಳುದು ಕಲ್ಯಾಣಿ ಜ್ವರೀಕೆ ವೊಂಟ್ಟು. ಇತ್ತಲ್ಲಿ ಮೋಗೀಗೆ ನೀರುದ್ದ ಸಿವುನಿ, ತನ್ನ ಸ್ಯಾಲೆ ಸೆರುಗ್ನಲ್ಲೆ ಆ ಮೊಗೀಗೆ ಮಯ್ಯ, ತಲೆಗೂದ್ದು ಯಲ್ಲಾನು ವರುಸ್ತ, ಅದ್ರ ಗುಡೋಳೀಕೆ ತತ್ತುಗಂಬಂದು, ಚಂಡಿ ತಗುವ ಮೋಗೀಗೆ ಎದೆ ಕಚ್ಚುಸ್ತ, ಅಣ್ಣನ ಪಕ್ಕದಾಗೆ ಕುಂತು, ಅಣೆ ಮುಟ್ಟಿ “ಆಪ್ಟಿ, ಯೇಟೊಂದು ಜೊರ ಬಂದುಬುಟ್ಟಿದೆ?” ಅಂದು, ಹಾಲು ಕುಡೀತಿದ್ದಂಗೆ ತೊಡೆ ಮ್ಯಾಲೆ ನಿದ್ದೆ ಬಂದ ಮೊಗಾವ ನೆರುಕೆ ಮೊಗ್ಗಲೆ ಹಾಸ್ಯ ದುಪಟಿಮ್ಯಾಲೆ ಉಳ್ಳಾಕಿ, ಕುಂಡಿ ಮಾದಿ ಗುಡಿಲಿಗೆ ವೊಂಟು ಅಣ್ಣನ ಕಾಲುದಸೀಲಿ ಮಲ್ಕಚಾಚಿ ಮನಗಿದ್ದ ಬೊಡ್ಡನ ಕಾಲ ತುಣುದ್ದು. ಕೂಡ್ಲೆ ಆ ಚೋರದ ತಾಪದಾಗೂವೆ ಅಣ್ಣ ಮೊಖದ ತುಂಬ ವೊದ್ದಿದ್ದ ದುಪಟ ಸರುಸಿ, “ಯೇನಾಯ್ಕಣೆ ಸಿವುನಿ?- ಬೊಡ್ಡ ಯಾಕಂಗೆ ಅರಚುಗತ್ತು?” ಅಂತ ಕೇಳಿದ್ದ. ಸಿವುನಿಗೆ ಜೋಜಿಗೆ ಅನ್ನುಸಿತ್ತು. ಈ ನಾಯಿಗೂ ನಮ್ಮಣ್ಣಂಗೂ ಯಾವ ನಂಟು? ಅಂದುಕೊತ್ತ. “ಯಾನಿಲ್ಲ ಮನಕ್ಕಣ್ಣ, ಕುಂಡಿಮಾದಿ ಆಟೀಲಿ ವಸಿ ಮೆಣಸಿನ ಕಾಳ ತಂದು ನಿಂಗೆ ಕಸಾಯ ಕಾಬ್ರಿಕ್ತಡು ಅಂದ್ಲು ಅವ್ವ, ಅದುಕೆ ಕುಂಡಿಮಾದಿ ಅಟ್ಟಿಗೆ ವೋಯ್ತಿದ್ರೋಳು ಕಾಣೆ ಬೊಡ್ಡನ ಕಾಲ ತುಣದಿ, ಅದುಕೆ ವೋಟು ರಾವುಟ ಅದರು?- ನೀ ಮನಕ್ಕೊ” ಅಂದು ಸಿವುನಿ ಅಚ್ಚೆ ನಡುದ್ದು. ಕುಂಡಿಮಾದಿ ಅಗ್ಗೆ ಕೆಲುಸಕ್ಕೆ ವೊಂಟೋಗಿದ್ದು, ಸಾವಂತ್ರೀನೂ ವೋಂಟೋಗಿತ್ತು. ಕುಂಡಿ ಮಾದಿ ಗಂಡನೂವೆ ಗುಡ್ಡ ಕದ ಎಳುದು ಕಂಬಳಕೆ ವೋಂಡತಿದ್ದ ಕಂಡು ಸಿವುನಿ, ನಿಂತ ಕಾಲ ಮುಂದಕೆಳೆಯಾ ಸಮಯದಲ್ಲಿ, ಆ ದ್ಯಾವರಗುಡ್ಡ “ಯಾನು ಬೇಕಾಗಿತ್ತು?” ಕ್ಯಾಳ, “ಇವುನ ಕ್ಯಾಳಿ ಸುಕವೇನ?” -ಅಂದು, ಸಿವುನಿ ಮಾತಾಡದೆ ಮುಂದಾದ್ದು. ಆಗ ಆ ಗ್ರಾಸ್ತ್ರ, “ಯಾಕಮ್ಮಿ?... ಯಾಕ ಬಂದದ್ದು ?... ವಳೀಕೆ ಬಾ... ಅದ್ಯಾನು ಬೇಕಿದ್ರೂ ಯೋಳು, ಕೈಟೇನು” ಅಂತ ಕರೆಯೋದ?- ಕ್ವಾಪ ಬಂದು ಸಿಡಾರನೆ,