________________
ಸಮಗ್ರ ಕಾದಂಬರಿಗಳು ೧೬೩ “ಯಾನೂ ಬೇಕಾಗಿಲ್ಕಿಲ್ಲ. ಮಾದಮ್ಮ ಮಾತಾಡುಸಿ ವೋಗಾವಾಂತ ಬಂದಿ” ಅಂದ್ದು ಸಿವುನಿ. ಗುಡ್ಡಕದವ ಇಂದುಕೆತಳ್ಳಿ, ತಾನೂ ವಳುಕ್ಕೋಗಿ ನಿಂತಿದ್ದ ದ್ಯಾವರಗುಡ್ಡ, “ವೋಟೇಯ...” ಅಂದ್ರು, ಮೊಖವ ಆನೆದಡಿ ಕಾಯ್ದಂಗೆ ಇಳಿಬುಟ್ಟ! ಸಿವುನಿ ಅಲ್ಲಿಂದ ನಡುದು ದ್ಯಾವಾಜಿ ಗುಡ್ಡು ತಾವಿಕೋದೆ, ಅವು ಇಲ್ಲಿಲ್ಲ. ಹುಚ್ಚಬೋರಿ ಗುಡ್ಗತ್ರ ವೋದ್ರೆ ಅವುಳೂ ಇಲ್ಲ!... ಇಪರೀತ ಸಿಟ್ರಿ ಆಗಿ, ಅಲ್ಲಿಂದ ಮುಂದ್ಯೋಯ್ತ ಇರೋನೂವೆ, ಎದುರುಗಂಡಿದ ಹುಚ್ಚುಬೋರಿ ಮಗಳು ಚೆಲುವಿ ಬತ್ತಾ ಇದ್ಲು. “ಯೆತ್ತಾಗಿ ಬಂದಿದ್ರಿ, ಅತ್ತಿಗೆ?... ನಮ್ಮ ಗುಡ್ಡ ತಾವು ನಿಂತಂಗಿತ್ತು... ಅವ್ವ ಕಂಬಳಕೋಗದೆ, ನಾ ಇಲ್ಲೆ ದೋಳ್ಳಪ್ಪಾರ ಅಟ್ಟಲಿಹಾಳೊತ್ತಿಗೆ ಕರುದಿದ್ರು, ವೋಗಿದ್ದೆ.” ಒಂದೆ ಉಸುರಗೆ ಯೋಳಿದ್ದು. ಚೆಲುವಿ. “ಯಾನೂ ಇಲ್ಲ. ನಮ್ಮಣ್ಣಂಗೆ ಜೊರ ಬಂದದೆ. ನಿಮ್ಮ ತಾವು ಮೆಣಸಿನಕಾಳಿದ್ರೆ ವಸಿ ಈಸುಗಂಡೋಗಾಗವ ಅಂತ ಬಂದಿ. ಆದ್ರೆ ನಿಮ್ಮವ್ವನೇ ಇಲ್ವಲ್ಲ... “ಸಿವುನಿ ಅಂತಿದ್ದಂಗೆ, “ಅವ್ವ ಇಲ್ಲಿದೆ ನಾನಿಲ್ವ?... ನಾಕು ಮೆಣಸಿನ ಕಾಳ ಕ್ವಡಕ್ಕೆ ಅವ್ವನ್ನೆಲ್ಯಾಳಬೇಕ?- ಬನ್ನಿ, ಬನ್ನಿ” ಅಂದು ಚಲುವಿಹುಲ್ಲೆ ಕರುವೆಆಗಿನೆ ಕಂಡುನೆಕ್ಕಂಡೋಗಿಗುಡ್ಡಕದವ ಬಿಚ್ಚಿ ವಳೇಕೋದ್ರೆ ನಿರುಕುಸ್ತಿದ್ದ ಸಿವುನಿ “ನಮ್ಮಣ್ಣಂಗೆ ಈವೆಣ್ಣು ಲಾಯಕ್ಕಾಗದೆ. ಗುಣದಲ್ಲೂ ವೋಟೆಯಅಪರಂಜಿ ಮುರುಕು... ಅವ್ವಂಗೂ ಇವುಳ ತರೋ ಅಪೇಕ್ಷೆ ಇರೋವಂಗದೆ. ಒಂದು ಜಿನ ದ್ಯಾವಾಜಿಯೂ ನಮ್ಮ ಗುಡ್ಡಿಗೆ ಬಂದು, ನಿಮ್ಮ ಹೈದಂಗೆ ನಮ್ಮ ಹುಚ್ಚುಖೋರಿ ಎಣ್ಣು ಚೆಲುವಿ ತಂದುಕೊಂಡರೆ ಯೆಂಗೆ?” ಅಂದಾಗ, “ಎಣ್ಣೆನೋ ವೈನಾಗದೆ, ಆದ್ರೆ ನಮ್ಮ ಕಯ್ಯಲಿ ಯಾನವ್ವ ಇದ್ದದು?-ಯೆಲ್ಲ ಆ ಬಿಸುಲು ಮಾರಮ್ಮ ತಾಯಿ ಇಚ್ಚೆ ಅಂದು ತನ್ನ ಮನವ ಬಿಚ್ಚಿಕಂಡಿದ್ದು...” – ಇಂಗೆ ಚಿಮಕುಸ್ತ ಇಲ್ದಾಗ, “ತಕ್ಕನ್ನಿ' ಅಂತ ಜ್ವರೀಕೆ ಬಂದ ಚಲುವಿ, ಏಡು ಮೆಣಸಿನ ಕಾಳ ಎಚ್ಚಾಗ ಕ್ವಟ್ಟಿತ್ತು. ಆದ ತಂದು ಕಸಾಯ ಮಾಡಿ ಅಣ್ಣಂಗೆ ಕುಡಿಸುದ್ದು. ಯೇನೇನ ಮಾಡುವೆ ಜೊರ ಮೂರು ಆಗಲು ಮೂರು ನಾತ್ರೆ ಕುಟ್ಟಿ ಬಜಾಯಿಸ್ತು. ನಾಕನೆ ಜಿನವೇ ಲಕ್ಕ ಎದ್ದು ಕುಂತು, “ಸಿವುನಿ, ವಸಿ ರಾಗಿ ಅಂಬಲಿ ಕಾಯಿಸೀಯ?” ಅಂದುದ್ದು.