________________
ವೈಶಾಖ ನಸುಕ್ಕಲ್ಲೆ ಗಂಗಪ್ಪ ಒಂದು ಬೀಡಿಕಟ್ಟು ಕ್ವಟ್ಟು ಹೈದ್ರ ಪುಸಿ ಮಾಡಿದ್ದ. - “ನಮ್ಮಾಳಿನ ಜತೆ ವಸಿ ನಮ್ಮ ತ್ವಾಟಕೆ ವೋಗ ಬಾಗ್ಲ. ಅಲ್ಲಿ ಅವು ತೆಂಗಿನ ಮರ ಅತ್ತಿ ಒಂದೇಟು ಕಾಯ ಕೀಳ್ತಾನೆ. ಕಾಯಿ ಮರದಿಂದ ಕೆಳೀಕೆ ಬೀಳಿದ್ದಂಗೇಯ ಆ ಕಾಯ್ಸಳ ವಟ್ಟೋರಿ ಗುಡ್ಡೆಮಾಡು. ಆಮ್ಯಾಕೆ ಗೋಮಿ ಚೀಲಗಳೆ ತುಂಬಿ ನಮ್ಮಾಳಿನ ಜ್ವತೆ ಅವನ್ನ ವೊತ್ತುಗಂಬಂದು ನಮ್ಮಟ್ಟಿ ಅಜಾರಕೆ ಅಕಿಬುಟ್ರೆ, ಇವೊತ್ತು ನಮ್ಮಪ್ಪೇಲೆ ನಿಂಗೂಟ... ಅದ್ಯಾಕ್ಲ ತಲೆ ಕೆರೀತ ನಿಂತೆ?... ಇವೊತ್ತು ಬಸವಜಯಂತಿ ಅಲ್ಲವೇನ್ದ? ಅದ್ರೆ ಒಬ್ಬಟ್ಟು ಪಾಯಸ್ಥ ಊಟ, ಅದರಾಗು ನನೆಡತಿ ಕಚ್ಚಿ ಅಡುಗೆ ಗಮ್ಮತ ನಿಂಗೆ ವೊಸದಾಗೇನು ಯೋಳಬೇಕಾಗಿಲ್ಲ. ಅಲ್ಲವೇನ್ದ? ... ಬುಳ್ಳಪ್ಪ ಅಟ್ಟಲಿ ಎಂಗಿದ್ರೂವೆ ಅಬ್ಬ ಮಾಡಕ್ಕಿಲ್ಲ, ನಿಂಗೊತ್ತಿಲ್ವಾ?ಈ ಜಿನಾನೆ ಹ್ವಾದ ಸಾಲ್ನಲ್ಲಿ ಅವ್ರಯ್ಯ ಬೆನ್ನುಪಣಿ ಆಗಿ ತೀರಿಕೋನಿಲ್ವ... ಅದುಕೆ?” ಇಂಗೆ ಇವಶ್ಚಿ ಆ ಹೈದ ವಪ್ಪಿಸ್ಟ... ಲಕ್ಕನ ಯೋಚ್ಛೆ ನಡದೇ ಇತ್ತು... ತ್ವಾಟದಲ್ಲಿ ತೆಂಗಿನ ಮರ ಅತ್ತಿದ ಗಂಗಪ್ಪ ಆಳು ಸುದ್ದ ಪಟಿಂಗತ ಅಮ್ಮ ಅಯ್ಯ ಯಾರೋ ಅವ ಯಾರೋ ಊರಲ್ಲಿ ಯಾರೂ ಆರೀರು, ಕೊಡಗಿನ ಸನಿವಾರಸಂತೇಲಿ ವೊಟ್ಟೆಗಿಲ್ಲೆ ಬೀದಿ ಬೀದಿ ಅಲೀತಿದ್ದಂತೆ, ಆಳಿಲ್ಲದೆ ಪಜೀತಿ ಪಡ್ತಿದ್ದ ಗಂಗಪ್ಪ ಗೋಳು ಕ್ವಾಡನಾಗ್ಗೆ ಅಮ್ಮ ಕೊಡಗಿನ ಭಾವ, ಇಲ್ಲೇ ಇಲ್ಲ ಅಲ್ಲು ಬೀರನೆ ಗಂಡಾಂತ, ಆ ಗೆಣೆಯನ್ನೆ ಸಾಗಾಕಿದ್ದ... “ಮುಟ್ಟಿಸಿಕೊಂಡುಬಿಟ್ಟೆಯಲ್ಲೊ ರಂಡೆಗಂಡ?... ಮತ್ತೆ ಬಾವಿ ನೀರು ಸೇದಿ, ಮೈ ಮೇಲೆ ಸುರಿದು, ಮಡಿ ಉಡೂ ಹಾಗೆ ಮಾಡಿದ್ಯಲ್ಲೊ, ಪಾಪಿ!” ಮಡಿ ಎಂಗಸೊಂದು ಮುಲದ್ದಾಗ, ಬಸವೇಶ್ವರನ ಗುಡಿ ತಿರುವಲ್ಲಿ ಲಕ್ಕ ಬೆಚ್ಚಬಿದ್ದ... ತೆಂಗಿನ ಕಾಯ್ದಳ ಮರದ ಮ್ಯಾಗ್ನಿಂದ ಕೆಡುತ್ತ ಇದ್ದಂಗೆ, ಹೈದ ಅಮ್ಮ ಒಂದೊಂದಾಗಿ ಅಗ್ನಿ ಆಕ್ಸಿ ಎತ್ತಿವಕ್ಕಡೆ ರಾಸಿ ಮಾಡ್ತಿದ್ದ. ಇನ್ನೂವೆ ಕೆಳಗೆ ಬಿದ್ದಿದ್ದ ಕಾಯ್ಸಳ ಆರುಸ್ತ ಇದ್ದಂಗೇಯ ಮರದ ಮ್ಯಾಗ್ನಿಂದ ಒಂದು ಇಡೀ ತಾರ ಕಾಯ್ದಳು ತಟಪಟ ಬೀಳಕ್ಕೆ ಸುರು ಆದೊ. ಹೈದ ಆಯ್ತಿದ್ದ ಜಾಕ್ಕೆ ಗುರಿ ಅಕಿ, ಮರದಮ್ಯಾಗ್ಯ ಕುಂತ ಆಳು ಆ ಹೈದನ ಮ್ಯಾಲೆ ಸರಾಗಿ ಬೀಳ್ತ ರ, ತಾರ ಮಚ್ಚಂದ ಕ್ಲಚ್ಚಿ ಕೆಡುವ, ತನ್ನ ಮುಂಡೈ ಇಂದ್ರೆ, ಆ ಚೋರಿ ಈ ಚೋರಿ, ಕಾಯ್ದಳು ದಪ್ಪಡಿ ದುಪ್ಪಡಿ ಬೀಳೋದ ಕಂಡು ಬೆಕ್ಕಸ ಬೆರುಗಾದ ಹೈದ, ಒಂದು ಪಕ್ಕಕ್ಕೆ ವೋಳ್ಳಿ ಬಿದ್ದ, ಅದ್ರೂವೆ ಒಂದು ಕಾಯಿ ಅಮ್ಮ ಬಲದ ತೋಳಿನ ಮ್ಯಾಲೆ, ಏಡು ಬಲದ ಮಂಡಿ ಮ್ಯಾಡೆ ಅಪ್ಪಳಿಸ್ಕೊ... ಅಯ್ಯೋ ಸತ್ತೆ ಸತ್ತೋದೆ,