________________
೧೬೪ ವೈಶಾಖ ( ಅಲ್ಲೀಗಂಟ ಅವನೇ ಯೇನು ಕ್ವಟ್ಟರೂ ಸೆಡೀದು... ಅಣ್ಣ ಚೇತರಿಸಿಕೊಂಡುದಕೆ ಸಂತೋಸ್ಟಾಗಿ ಸಿವುನಿ ಓಡಾಡುತ ಅಂಬಲಿ ಕಾಯ್ದೆ ತಂದು ಕುಡುಸುದ್ದು. ಆದಾದ ಮಾರನೆ ಜಿನಕೆ ಲಕ್ಕ ಕುಡ್ಲ ತಕ್ಕಂಡು ಕೆಲ್ಸಕ್ಕೆ ತಯಾರಾದ ಗಮ, ಸಿವುನಿ ಮುಂಚೋರಿ ಕದಕೆ ಅಡ್ಡಾಗಿ ನಿಂತು, “ನೀ ಕಂಡ್ಯಾ ವೋಗಕೂಡದು. ಇನ್ನಂದು ನಾಕು ಜಿನಾನಾರು ಸೊದಾರಿಸ್ಕೊ”- ಆಟ ಮಾಡಿದ್ದು. ಕಂಗೆ ಚಿಕ್ಕೋನಾಗಿದ್ದ, ತಾವಿನಿಂದಲೂವೆ ಇರೋಳೆ ಒಬ್ಬಳು ತಂಗಿ ಅಂತಾನ, ಸಿವುನಿ ಕಂಡರೆ ಪ್ರಾಣ ಬುಡುಸ್ಕತ್ತಿದ್ದ. ಈಗ ಅವಳ ಮಾತ ಯಂಗೆ ತಗುದಾಕೋದು?- ಕುಡ್ಗ ವಕ್ಕಡಿಕೀಟ್ಟು ತೆಪ್ಪುಗೆ ಕುಂತ. ಆದ್ರೆ ನಾಕು ಜಿನ ಕೇಮೆ ಇಲ್ಲದೆ ಕುಂತುಗೊಳೋದು ಲಕ್ಕನ ಜಾಯಮಾನಕ್ಕೆ ಬಂದದ್ದಲ್ಲ.... ಮುಂದೇ ಏಡೇ ಜಿನದಲ್ಲಿ ಸಿವುನಿ ಏಟೇಟು ತಡದೂವೆ, “ನೀ ತಡೀಬ್ಯಾಡ, ಬುಡು, ಕುಂತು ಕುಂತು ನನಗೆ ಸಿಬ್ರಿ ಆಗದೆ.” ಯೋಳಿ, ದಾಪುಗಾಲು ಆಕ್ಕ ಅಣ್ಣ ಹೊಂಟಿದ್ದ. ತಲೆಬಾಗ್ಲಲಿ ನ್ಯಾಡ ನಿಂತ ಸಿವುನಿ. “ಗಂಡಸು ಇಂಗಲ್ವ ಇರಬೇಕು!” ಅಂತ ಅಣ್ಣನ ಬಗ್ಗೆ ಹೆಮ್ಮೆಪಡ್ಡ ಇರೋನೂವೆ, ಅವಳ ಏಡು ಎದೆ ವಳುಗಡೇಲೂ ಲೊಳನೆ ಹಾಲು ತುಂಬಿಕೊಂಡ ಹಂಗಾಯ್ತು! ನಾಕು ವಾರ ಎಪ್ಪತ್ತು ಹಿಂಗೇ ಕಳಿತು. ಬುಧವಾರ ಕಳೆದಮ್ಯಾಲೆ ಬೇಸ್ತಾವಾರ ಬರಬೇಕಲ್ಲ...ಹಂಗೆ, ಇನ್ನೊಂದು ಬೇಸ್ತವಾರ ಬಂದಿತ್ತು. “ಈ ಜಿನ ನಾನೇ ಸಂತೆಗೆ ವೋಯ್ತಿನಿ ಕನವ್ವ, ವಸಿ ನೀನೆ ಮೊಗ ಸ್ವಾಡುಕೊ.” -ಸಿವುನಿ ಆಂದಾಗ, ಕಲ್ಯಾಣಿ ಬಾಣಂತಿಯಾಗಿ ಗುಡ್ಡಲ್ಲಿ ಒಬ್ಬಳೆ ಕುಂತು ಎಣ್ಣೆಂಗೂ ಬ್ಯಾಸರ ಆಗಿರಬೈದು, ಅಂದುಕy “ಅದಕೇನ, ವೋಗಿ ಬಾ, ನಾನು ಸ್ವಾಡುಕತ್ತೀನಿ ಮೊಗಾವ, ರುಕ್ಕಿಣದ್ವಾರು ಎಂಗಿದ್ರೂವೆ ಲಕ್ಕನ ಕಯ್ಲಿ ಯಾವತ್ತಾರು ಕಳುಸ್ತಾರಲ್ಲಗೆ ಇವೊತ್ತೂವೆ ಹಸೀನ ಹಾಲೇ ಕಳುಸಿ, ಮೊಗೀಗೆ ಅಂತಲೇಯ!- ಅತ್ತರೆ, ವಳೇಲಿ ಅದ್ರೆ ಉಯ್ತಿನಿ, ಮನಗುಸ್ತೀನಿ. ಆದ್ರೂವೆ, ನೀ ಮೋಗಕ್ಕೆ ಮುಂಚೆ ಸಮದಾಗಿ ಮೊಲೆ ಉಣ್ಣಿಸಿ ವೋಗು” ಎಂದಿದ್ದು. ಅವ್ವನ ಮಾತನಿ ಪರ್ಕಾರವೇ ಮನೆಗೆಲಸ ಮುಗಿಸಿ, ಮೊಗೀಗೆ ಮೊಲೆ ಉಣ್ಣಿಸಿ, ಸಿವುನಿ ದರುಮನಳ್ಳಿ ಬುಡುವಾಗ ಆಳುದ್ದ ವೊತ್ತಾಗಿತ್ತು. ಇವಳ ಜೊತೆ