ವಿಷಯಕ್ಕೆ ಹೋಗು

ಪುಟ:ವೈಶಾಖ.pdf/೧೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೬೬ ವೈಶಾಖ ವೈನಾಗಕ್ಕಿಲ್ವ?” ಅಂತ ತೀವಿತಿದ್ದು. ಹಿಂಗೇ ಹಾದಿ ಸಾಗಿತು. ಏಳು ಮೈಲಿ ನಡದು, ಅವರು ಹುಣಸೂರಿನ ಸೇತುವೆ ಸಮೀಪ ಕೆಳೀಕಿಳಿದು, ಲಕ್ಷ್ಮಣತೀರ್ಥ ಹೊಳೇಲಿ ಬೆವತಿದ್ದ ಮುಖ ತೊಳುದು, ನೀರು ಕುಡಿದು, ದಾವಾರಿಸಿಕೊಂಡು ಮ್ಯಾಕ್ಕೆ ಬಂದು, ಸೇತುವೆ ದಾಟಿ, ಅವರೆಲ್ಲರೂವೆ ಸಂತೆಬಯಲು ಮುಟ್ಟಿದರು. ಇವರಿಗೆ ಮುಂಚೆಯೇಯ ಹೊಂಟಿದ್ದ ನಿಂಗಯ್ಯ, ಲಕ್ಕ ಇಬ್ಬರೂವೆ- ಸಿವುನಿಗೆ “ನೀ ಬ್ಯಾಗ ಬಂದರೆ ಸಂತೆ ಮಾಳದಲ್ಲೆ ಇದ್ದೀವಿ, ನೀ ಬರಾದ ಒಂದು ಪಕ್ಷ ವೊತ್ತಾದರೆ, ರಂಗಪ್ಪಸೆಟ್ಟರ ಅಂಗಡೀಲಿ ಇದ್ದೀವಿ: ನೀ ಅಲ್ಲಿಗೇ ಬಂದುಬುಡು” ಅಂದಿದ್ದರು. ತನ್ನ ಜೊತೆಗೆ ಬಂದೋರ ಸಂತೆಮಾದಳದಲ್ಲೆ ಬುಟ್ಟು ರಂಗಪ್ಪಸೆಟ್ಟರ ಅಂಗಡಿಗೆ ಸಿವುನಿ ಬಂದಿದ್ದಳು. ಆಗಲೆ ಅವರಿಬ್ಬರೂವೆ ಒಂದೊಂದು ಅಂಗಿ, ಚಡ್ಡಿ ಬಟ್ಟೆ ಹರಿಸಿ ಹೊಲಿಯಕ್ಕಾಕಿದ್ರು, ಏಡು ಒಂಟಿ ಪಂಚೆ ತೆಗುದಿದ್ದರು. ಸಿವುನಿ ಬಂದದ್ದು ಕಂಡು, “ಬಾಣೆ ಸಿವುನಿ, ಬಾ, ನಾವೂನೆ ವರುಸಾಗೊವೋಟು ಬಟ್ಯ ವೊಲಿಯಕ್ಕಾಕಿವಿ... ಅವಗೂ ನಿಂಗೂಗು ಒಂದೊಂದು ಸ್ಯಾಲೆ ಕುಪ್ಪುಸದ ಅರಿವೆ ತಗೀಬ್ಯಾಡದ?... ಅವಳ ಬಾ ಅಂದರೆ ಬರದೇ ವೋದ್ಲು. ಬಟ್ಟೆ ಇಚಾರ ನಂಗೇನು ತಿಳುದಾತು?... ನಿಮ್ಮ ಮಗಳೆ ಕರಕಂಡೋಗಿ ಅಂದ್ಲು... ಬಾ ಬಾ ಇಲ್ನೋಡು, ಸ್ಯಾಲೆಗಳು ಗುಡ್ಡೆ ಆಕವೆ. ನಿಂಗ್ಯಾವುದು ವಸಂದಾಯ್ತುದೆ, ಯೋಳು” ಅಂದೋನು ನಿಂಗಯ್ಯ, “ನಂಗೆ ಪ್ಯಾಲೆ ಗೀಲೆ ಯಾವೂ ಬ್ಯಾಡ, ಅವ್ವಂಗೆ ಬೇಕಾದ್ರೆ ಕ್ವಾಡ್ತೀನಿ” ಅಂದೋಳು, “ಎಲ್ಲಾರು ಉಂಟ?- ನೀ ಒಂದು ಸ್ಯಾಲ್ಯ ತಕ್ಕನೇಬೇಕು” ಅಂತ ನಿಂಗಯ್ಯ ಲಕ್ಕ ಇಬ್ಬರೂ ಅಂದುದ ಕೇಳದೆ ಇದ್ದೋಳಂಗೆ ವಳೀಕೆ ನಡದು, “ತೋರಿ ಸೆಟ್ಟರೆ” ಅಂದು, ಸೆಟ್ಟರು ಬಿಳಿಬಟ್ಟೆಯ ನೆಲದ ಮ್ಯಾಲೆ ಹಾಸಿ, ಅದರ ಮ್ಯಾಲೆ ಹರಡಿದ ಸ್ವಾಲೆಗಳ ತಗತಗದು ಪರೀಕ್ಷೆ ಮಾಡಿ, ಕಡೀಕೆ-ಹಳದಿ, ಒಡಲು, ನೀಲಿ ಅಂಚಿನ ಸ್ಯಾಲೆ ಒಂದ ಕಯ್ಯಗೆತ್ತಿಕೊಂಡು, “ಈ ಸ್ಯಾಲೆಗೆ ಏಟ ಸೆಟ್ಟರೆ?"- ಅಂತ ಸಿವುನಿ ಅದರ ಖರೀದಿ ಕೇಳಿದಳು. ರಂಗಪ್ಪ ಸೆಟ್ಟರು. “ಹತ್ತು ರೂಪಾಯಿ” ಅಂದರು. “ಪೂರ ಜಾಸ್ತಿ. ಸೆಟ್ಟರ್ ಅಪ್ಪಾರ ಆಸೆ” ಅಂದೇಬುಟ್ಟಳು ಸಿವುನಿ. ಅರ್ಧ ಮುಕ್ಕಾಲು ಗಂಟೆ ಆ ಸೀರೆ ಇಚಾರ ರಂಗಪ್ಪಸೆಟ್ಟರೂ ಸಿವುನಿಗೂ ಜಗ್ಗಾಟ ನಡುದು, ಕೊನೆ ರಂಗಪ್ಪಸೆಟ್ಟರು ಅದರ ಬೆಲೇಲಿ ಎಂಟಾಣೆ ತಗ್ಗುಸಿ,