ಪುಟ:ವೈಶಾಖ.pdf/೧೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಮಗ್ರ ಕಾದಂಬರಿಗಳು ೧೬೭ “ನಿಂಗಯ್ಯ, ಇನ್ನುಮ್ಯಾಲೆ ಜವುಳಿ ಕರೀದಿ ಮಾಡಕ್ಕೆ ನಿನ್ನ ಈ ಮಗಳನ್ನ ಮಾತ್ರ ಕರಕೊಂಡು ಬರಬೇಡ. ಏನಿದ್ರೂವೆ ನಿನ್ನ ಹೆಂಡತಿ ಕಲ್ಯಾಣೀನೆ ಕರಕೊಂಡು ಬಾ, ಈ ನಿನ್ನ ಮಗಳು ಹೇಳೊ ಬೆಲೆಗೆ ನಾನು ಜವುಳಿ ಕೊಡ್ತಾ ಹೋದರೆ, ನನ್ನ ಅಂಗಡಿ ಬಲು ಬೇಗ ದಿವಾಳಿ ಎದ್ದು, ನಾನು ಪಾಪರ್‌ ಚೀಟಿ ತಕ್ಕೊಬೇಕಾಗ್ತದೆ” ಅನ್ನುತ್ತ, ಆ ಸೀರೆಗೆ ಲಜತ್ತಾದ ಒಂದು ರವಿಕೆ ಬಟ್ಟೇನೂ ತೋರಿ “ಮುಕ್ಕಾಲು ಗಜ ಸಾಕಾಗ್ತದೆ ಅಲ್ಲವಾ?” ಎಂದು ಕೇಳಿ, ಅದರ ಅಳತೆಗೆ ಚೀಟಿಬಟ್ಟೆ ಕತ್ತರಿಸ್ತಾ ಇರುವಾಗ “ಇನ್ನೂ ಒಂದು ಸೀರೆ ತೆಗೀರಿ, ಶೆಟ್ಟರೆ...” ಅಂತ ಯಾರೊ ಅನ್ನುತ್ತಲೂ ಸಿವುನಿ ಗಕ್ಕನೆ ಹೊಳ್ಳಿ ಕ್ವಾಡಿದಳು... ನಮ್ಮ ದರುಮನಹಳ್ಳಿ ಕೇಸವಯ್ಯಾರೇಯ! ಬ್ಯಾರೆ ಯಾರೂ ಅಲ್ಲ! “ತಗೋಮ್ಮ ಸಿವುನಿ-ನೀನು ಒಂದು ಸೀರೆ ತಗೊ” ಕಣ್ಣಿನಲ್ಲೆ ನಗುತ್ತ ಪುಸಲಾಯಿಸಿದ ಕೇಶವಯ್ಯ. ಸಿವಪೂಜೇಲಿ ಕರಡಿ ಬುಟ್ಟಂಗೆ ಈ ವಯ್ಯ ಯಾತಾನ್ನಿಂದ ಬಂದ?ಅಂತ ಬೇಸರಿಸಿ, “ಈ ಬಟ್ಟ ತಕ್ಕತ್ತಿರಾನು ನಮ್ಮಯ್ಯ. ಇದರಾಗೆ ನಿಮ್ಮ ದ್ಯಾನ ಸೋಮಿ ಅಗ್ಗರ್ಣೆ?"- ಖಡಕ್ಕಾಗೆ ಕೇಳಿದಳು. ಸಿವುನಿ. “ಹಯ್ಯೋ, ಅಂಗನ್ನಬ್ಯಾಡ ಕನೆ, ಸಿವುನಿ. ನಾವೀಗ ತಕ್ಕರೆ ಬಟ್ಟೆ ಯೆಲ್ಲಾವು ಕಡ”- ನಿಂಗಯ್ಯ ಇವರಣೆಯಿತ್ತ. “ಸರಿಸರಿ. ಕಡ ಅಂದಮ್ಯಾಲೆ. ಈ ಅಯ್ಯನೋರದು ಯಾನ ಇದರಾಗೆ ಪಾರಪತ್ಯ?” ನಿಂಗಯ್ಯ ಹಣೆಹಣೆ ಚೆಚ್ಚಿಕೊತ್ತ ಯೋಳಿದ: “ಹಯ್ಯೋ, ನಮ್ಮ ತೀರು ಗ್ವಾಡಿ ಯಾರವ್ವ ಜವುಳಿ ಕಡಾ ಕ್ವಡಾರು?... ಯಾನೊ ಈ ಪುಣಾತ್ಮರು ನಮ್ಮ ಪಾಗಿ ವಪ್ಪಿಗಳಾ ವೊತ್ಸೆ, ಸೆಟ್ಟರೂ ನಮಗೆ ಕಡ ಕೂಡಕ್ಕೊಪ್ಪುದ್ರು... ಆ ಕಿಸ್ಸ ಸಾಸ್ತಿಗಳು ಊರನಾಗಿಲ್ಲ. ಸಿಮೊಗ್ಗಕ್ಕೊಗವಂತೆ. ಬರಾದು ಇನ್ನೂ ವಸಿ ಜಿನ ಆಗಬೈದು ಅಂದರು, ರುಕ್ಕಿಣಮ್ಮ- ಅವರಿದ್ದಲ್ಯಾನೊ ಪುಣಾತ್ಮ ನಮ್ಮ ಹಳತಕೆ ಮಾತ್ರ ಯಾವತ್ತೂವೆ ಇಲ್ಲ ಅಂದಿಲ್ಲ.... ಈಗ ಆ ಗಂಗಪ್ಪಾರ ನಂಬಿ ಇಲ್ಲೀಗಂಟ ಬರಬೇಕಾಯ್ತು. ಆ ರಂಗಪ್ಪಸೆಟ್ಟರ ಅಂಗಡಿ ತಾವಿರಿ. ನಾ ಬಂದು ಕಡ ಕಡುಸ್ತೀನಿ ಅಂದೋರು ಈ ತಾವಿಗಂಟ ಬರನೇ ಇಲ್ಲ! ನಂಗೂ ಕಾದೂ ಕಾದೂ ರೋಸೋಯ್ತು. ಲಕ್ಕನೂವೆ, ನಡಿಯಯ್ಯ ಕt