ವಿಷಯಕ್ಕೆ ಹೋಗು

ಪುಟ:ವೈಶಾಖ.pdf/೧೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೭೦ ವೈಶಾಖ ಅಂಗಡಿಯಲ್ಲಿ ಒಂದು ಹಿತ್ತಾಳೆ ಚವುರಿಗೆ ಕೊಂಡು, ತಮ್ಮ ಎತ್ತಿನ ಬಂಡಿಯನ್ನು ಸಮೀಪಿಸುತ್ತಿರುವ ಹಾಗೆ, ಕುರಿಮರಿಯನ್ನು ನೋಡಿ “ಏಟು ಕ್ವಟ್ಟಣೆ ಮರೀಗೆ?” ಕೇಳಿ, ಅದಕ್ಕುತ್ತರವಾಗಿ ಸಿವುನಿ, “ಎಂಟು ರುಪಾಯಿ ಕ್ವಟ್ಟೆ, ಸಂಪಗವ್ವಾರೆ” ಎನ್ನುತ್ತಲೂ “ಅದ್ಯಾಕಮ್ಮಿ ಈ ಬಡಕಲು ಮರೀಗೆ ವೋಟೊಂದು ಅಣ ಸುರುದೆ?... ಯಾಕೆ, ನಮ್ಮ ತಾವು ಇರನಿಲ್ವ?... ಇದೇ ಜಪಾತಿ ಮರ, ನೀ ಕ್ಯಾಳಿದ್ರೆ, ಬಡವರೂಂತ ಒಂದು ರೂಪಾಯಿ ಕುಸಿ ಆಕೆ ಕ್ವಡುತಿದ್ದೆ” ಹೇಳಿ, ಸಿವುನಿ ಒಂದು ಗಳಿಗೆ ತಬ್ಬಿಬ್ಬಾಗುವಂತೆ ಮಾಡಿದಳು. ಆದರೆ ದೊಳ್ಯಪ್ಪನ ಹೆಂಡತಿ, ತನ್ನ ಗಂಡ ಮತ್ತು ಗಾಡಿ ಹೊಡೆಯುವ ಆಳಿನ ಜೊತೆಗೆ ಗಾಡಿಯನ್ನೇರಿ ಕುಳಿತಂತೆ, ನಿಂಗಯ್ಯ “ದೊಳ್ಳಪ್ಪಾರೆ, ಈ ಮರಿ ಇಡಕಂಡು ಗಾಡಿ ಇಂದುಗಡೆ ನಾ ಕುಂತುಗಳಲಾ?” ಕೇಳಿದ್ದಕ್ಕೆ, “ಹೆಂಗಪ್ಪ ಆದುದು?- ಸುಮಾರು ಸಾಮಾನ ಹೇರಿಕಂಡು ಹೋಯಾ ಇವಿ. ನಮ್ಮ ಎಡಗೋಲು ಇತ್ತಿಗೆ ಬ್ಯಾರೆ, ಕಾಲುಜರ ಆಗಿ ಇವತ್ತೇ ಗಾಡಿಗೆ ಹೂಡಿರಾದು ಅದ್ಭ...” ದೊಳ್ಯಪ್ಪನ ಹೆಂಡತಿ ಸಂಪಿಗೆಮ್ಮ ಗಂಡನ ಕಡೆ ಕಣ್ಣು ಹೊರಳಿಸಿ ನುಡಿದಾಗ, ಗಾಡಿ ಮುಮದಾಗುವುದನ್ನೆ ತುಟಿಪಿಟಿಕ್ಕೆನ್ನದೆ ನಿರುಕಿಸುತ್ತ ನಿಂತಿದ್ದ ಸಿವುನಿ, - “ಊ ಊ, ಇವಳೇ ಕನಯ್ಯ- ಒಂದು ರೂಪಾಯಿ ಕುಸಿ ಆಕದ್ದ ಗೆಣೆಕಾತಿ! ಗಾಡಿ ಇಂದುಕೆ ಆಟೊಂದು ಜಾಗ ಅದೆ. ನಿನ್ನೂ ಈ ಮರೀನೂ ಅತ್ತಿಸಿಕಂಡಿದೆ, ಇವಳೆತ್ತು ಸತ್ತೋಗೋದ?.... ನೀ ಯೇನೇ ಹ್ಯಾಳು, ನಂಜನಗೂಡು ಸೀಮಿಂದ ಈ ನಮ್ಮ ದರುಮನಳ್ಳಿ ಸೀಮೆಯವರೂ ನಾ ನ್ಯಾಡ್ಡೆ, ಈ ಉತ್ತಮರು ಅನ್ನಿಸಿಕೊಂಡೋರೆಲ್ಲ ಇಂಗೇಯ- ಬರಿ ಮಾತ್ನಲ್ಲಿ ಮರಿಜವುಳಿ ಕಡ್ಯ ನೀವಾಳುಸ್ತ ಇರುತ್ತವೆ... ನಾವು ಮಾತ್ರ ಮೂಗೆತ್ತುಗಳಂಗೆ ಅವರು ಹ್ಯಾಳಿಕ್ಯಾಳಿದಕೆಲ್ಲ ತಾಳ ಅಕ್ಕಂಡು ದುಡಿಯೋದು. ಅವು ಯಾನಾರ ಇಂಕರ ಎಚ್ಚು ಕಮ್ಮಿ ಆಗಿ ಕ್ವಾಡು, ತಕ್ಷಣ “ನಿಂಗಾ-ಕಲ್ಯಾಣಿ-ಲಕ್...” ಅಂತ ಬೇಳುಗರೀತಿದ್ದಾರೆ... ಅದೇಯ ನಮ್ಮೆ ಕಾಯ್ದೆ ಕಸಾಲೆ ಅನ್ನಾ ಹಂಗಿಲ್ಲ. ಅವರು ಕುರ್ ಅಂದೇಟಿಗೆ ನಾನು ದೌಡು ವೋಡೀತಿರಬೇಕು! ಅನ್ನೆಕಾರು, ನ್ಯಾಯ ಯೆಲ್ಲಿದ್ದಾತ ಅವುರ ತಾವು?...” ಹೀಗೆ ಖಾರಖಾರವಾಗಿ ಸಿಡಿಯುತ್ತಿದ್ದಳು. ನಿಂಗಣ್ಣ “ ನೀ ಯೋಳೋದೆಲ್ಲ ಸಾಜ, ಈಗ ನಾವೇನ ಮಾಡಾ ಅಂಗಿದ್ದಾತು?... ಸಮಾಸು, ನಾನೇ ವೊತ್ತುಗೊತ್ತೀನಿ ಮಲ್ಯ. ವೊತ್ತಾಯ್ತಾ ಅದೆ ನಡಿರಿ” ಎಂದು