ವಿಷಯಕ್ಕೆ ಹೋಗು

ಪುಟ:ವೈಶಾಖ.pdf/೧೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಮಗ್ರ ಕಾದಂಬರಿಗಳು ೧೭೧ ಕುರಿಮರಿಯನ್ನು ಎತ್ತಿ ಹೆಗಲಿಗೇರಿಸಿದ. “ಚಿಕ್ಕ ಪ್ರಯದೊನು ನಾನು ಇಲ್ಲೇ ಇನ್ನಿ, ಮಯಸಾದ ನೀನು ಮರಿ ವೊತ್ತುಗಂಡ ಬತ್ತಿದೆ, ನ್ಯಾಡಿದೋರು ಯೇನು ಅನ್ನಕ್ಕಿಲ್ಲ. ತತ್ತಯ್ಯ ಇಲ್ಲಿ” ಎನ್ನುತ್ತ, ನಿಂಗಯ್ಯನ ಹೆಗಲಿನಿಂದ ಕುರಿಮರಿಯನ್ನು ತನ್ನ ಹೆಗಲಿಗೆ ವರ್ಗಾಯಿಸಿಕೊಂಡ ಲಕ್ಷ... ೧೫ ಸರಿಸಿಯ ನೆನಪು ಈಗ ನೂರು ವಿಧದಲ್ಲಿ ರುಕ್ಕಿಣಿಯನ್ನು ಹೆಜ್ಜೆಹೆಜ್ಜೆಗೂ ಕಾಡುವುದು. ಸರಸಿಯನ್ನು ತನ್ನ ಪಾರ್ವತಿಯು ತನ್ನೊಡನೆ ಭೀಮನಳ್ಳಿಗೆ ಕರೆದೊಯ್ದು, ಇನ್ನೂ ನೆಟ್ಟಗೆ ಮೂರು ವಾರಗಳೂ ಕಳೆದಿಲ್ಲ. ಆದರೂ ರುಕ್ಕಿಣಿಗೆ ಸರಸಿಯಿಲ್ಲದ ಮನೆ ಕಡುಬೇಸರ ತಂದಿತ್ತು. ಮನೆಗೆಲಸದಲ್ಲಿ ಹೇಗೋ ಮರೆಯಲೂ ಪ್ರಯತ್ನಪಡುವಳು. ಆದರೂ ಆ ಕಂದನ ನೆನಪು ಮತ್ತೆ ಮತ್ತೆ ಎದಿರಾಗಿ ಹಿಂಸಿಸುವುದು. ಒಂದೇ ಸಮಾಧಾನ ಎಂದರೆ ಅವಳು ತನ್ನ ಅಕ್ಕನ ಮನೆಯಲ್ಲಿ ಸೇರು ಪಾವು ಚಟಾಕನಂತಿದ್ದ ಅವಳ ಹಿಂಡು ಮಕ್ಕಳ ಜೊತೆಗೆ, ಅದರಲ್ಲೂ ಅವಳಿಗೆ ಒಗ್ಗಿ ಹೋಗಿದ್ದ ಗಿರಿಜೆಯೊಡನೆ ಆಡವಾಡುತ್ತ, ಭೀಮನಳ್ಳಿ ಹೊಸ ಜಾಗವಾದ್ದರಿಂದ ಇಲ್ಲಿಗಿಂತಲೂ ಹೆಚ್ಚು ಸುಖವಾಗಿ ಕಾಲ ಕಳೆಯುತ್ತಿರಬಹುದು. ಒಂದೇ ಆತಂಕವೆಂದರೆ, ಭೀಮನಳ್ಳಿಯ ಸಮೀಪ ಹರಿಯುವ ಲಕ್ಷ್ಮಣತೀರ್ಥ ನದಿ!... ಎಲ್ಲ ಮಕ್ಕಳಿಗೂ ನೀರಿನ ಆಕರ್ಷಣೆ ಸಾಮಾನ್ಯ ವಾದುದೆಂದರೂ ಸರಸಿಯ ನೀರಿನ ಹುಚ್ಚು ತೀರ ಮಿತಿಮೀರಿದ್ದು ಬೆಳಗ್ಗೆ ಎದ್ದು ಮುಖ ತೊಳೆಯುವಾಗ ಅಥವಾ ಮನೆಯ ಹೊರಗಿನಿಂದ ಬಂದು ಅಂಗಳದಲ್ಲಿ ಕಾಲು ತೊಳೆಯುವಾಗ, ಯಥೇಚ್ಚವಾಗಿ ನೀರನ್ನು ಸುರಿದುಕೊಳ್ಳುವುದೇ ಅವಳ ಪರಿಪಾಠ, ಮನೆಯವರ ಕಣ್ಣುತಪ್ಪಿಸಿ (ಸುಶೀಲತೆ ಬದುಕಿದ್ದಾಗಲೂ ಸಹ!) ಒಬ್ಬಳೇ ಬಚ್ಚಲುಕೋಣೆ ಸೇರಿದಳೆಂದರೆ ಮುಗಿಯತು. ಅವಳ ಸ್ನಾನಕ್ಕೆ ಹಂಡೆಯ ನೀರಲ್ಲೆ ಖಾಲಿ!... ಒಮ್ಮೆ ನಡೆದ ಸಂಗತಿಯನ್ನು ನೆನೆದರೆ ಈಗಲೂ ಮೈ ಜಮ್ಮೆನ್ನುತ್ತದೆ. ಒಂದು ಭಾನುವಾರ ಮಧ್ಯಾಹ್ನ ಅವಳೊಡನೆ ಎಂದಿನಂತೆ ತೋಟಕ್ಕೆ ಹೋಗಿದ್ದಾಗ ನಡೆದ ಪ್ರಕರಣ: ತಾನು ವೀಳೆಯದೆಲೆ ಬಿಡಿಸುತ್ತಿರುವಾಗ, ಮಾವಯ್ಯನು ಮಣ್ಣಿನ ಹರಬಿಗಳಲ್ಲಿ ಹೊತ್ತು ತಂದು ಹೊಸದಾಗಿ ನೆಟ್ಟ ಬಾಳೆಯ ಕಂದುಗಳಿಗೆ ನೀಡುತ್ತಿದ್ದರು. ಆಗ ಇನ್ನೊಂದು ಅಡಿಕೆಮರದ ವೀಳೆಯದೆಲೆ ಹಂಬಿನಿಂದ ಎಲೆ ಕೊಯ್ಯುತ್ತಿದ್ದ ಸರಸಿಯು ಯಾವ ಮಾಯದಲ್ಲೋ