ಪುಟ:ವೈಶಾಖ.pdf/೧೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೭೨ ವೈಶಾಖ 9 ಅಲ್ಲಿಂದ ಜಾರಿ, ಕೊಳದ ಮೆಟ್ಟಿಗಳನ್ನಿಳಿದು, ಕೊನೆಯ ಮೆಟ್ಟಿಲಿನ ಮೇಲೆ ಕುಳಿತು, ಎರಡು ಕಾಲುಗಳನ್ನೂ ಕೊಳದ ನೀರಿನಲ್ಲಿ ಇಳಿಬಿಟ್ಟುಚೆಲ್ಲಾಟವಾಡಲು ಶುರುಮಾಡಿದ್ದಳು, ಹಾಗೆ ಆಡುವಾಗ ಏನಾಯಿತೊ, ಹಿಂದಿನಿಂದ ಮಾವಯ್ಯ “ಅಯ್ಯಯ್ಯೋ, ಅಯ್ಯಯ್ಯೋ -ಅನರ್ಥ ಅನರ್ಥ...” ಎಂದು ಹುಯಿಲಿಟ್ಟಿದ್ದು ಕೇಳಿಸಿ, ರುಕ್ಕಿಣಿಯು ಹಿಂದಿರುಗಿ ನೋಡಿದ್ದಳು, ಮಾವಯ್ಯನು ಹರಬಿಗಳನ್ನು ನಿಂತಲ್ಲಿಯೇ ಕೈಬಿಟ್ಟು ಓಡುತ್ತಹೋಗಿ, ಕೊಳಕ್ಕೆ ಧುಮುಕಿ, ಮುಳುಗಿ ಎದ್ದಿದ್ದ ಸರಸಿಯನ್ನು ಎತ್ತಿತಂದು ಅಪಾಯದಿಂದ ಪಾರುಮಾಡಿದ್ದರು... ಆ ದಿನದಿಂದ ಸರಸಿಯೂ ತನ್ನೊಡನೆ ಬಂದಾಗಲೆಲ್ಲ ರುಕ್ಕಿಣಿಯು ಮೈಯೆಲ್ಲ ಕಣ್ಣಾಗಿ ಅವಳನ್ನು ತುಂಬು ಎಚ್ಚರದಿಂದ ನೋಡಿಕೊಂಡಿದ್ದಳು. ಈಗ ಈ ತುಂಟೆಯು ಆ ಹೊಳೆಗೆ ನಡೆದು ಎಲ್ಲಿ ಅವಿವೇಕ ಮಾಡಿಕೊಳ್ಳುವಳೋ ಎನ್ನುವ ದಿಗಿಲು ರುಕ್ಕಿಣಿಯನ್ನು ಪದೇ ಪದೆ ಬಾಧಿಸುವುದು. ಅದನ್ನು ಮರೆಯಲು ಈಚೀಚೆಗೆ ತನ್ನ ವಾರಗೆಯವರ ಮನೆಗೆ ಕೈ ಬಿಡುವಾದಾಗಲೆಲ್ಲ ಹೆಚ್ಚ ಹೆಚ್ಚಾಗಿ ಹೋಗಿ ಬರಲು ಅವಳ ಆರಂಭಿಸಿದ್ದಳು. ಅವಳು ವಿಶೇಷವಾಗಿ ಹೋಗುತ್ತಿದ್ದ ಮನೆಗಳಲ್ಲಿ ವೆಂಕಣ್ಣ ಜೋಯಿಸರ ಮನೆಯೂ ಒಂದು. ವೆಂಕಣ್ಣ ಜೋಯಿಸರಿಗೆ ಒಬ್ಬ ಮಗ ಮೂವರು ಹೆಣ್ಣುಮಕ್ಕಳು. ಮಗನಿಗೆ ಲಗ್ನವಾಗಿ ಅವನು ಬೆಂಗಳೂರಿನಲ್ಲಿ ಯಾವುದೊ ಖಾಸಗಿ ಕಂಪೆನಿಯಲ್ಲಿ ಮ್ಯಾನೇಜರ್ ಆಗಿ ಕೈ ತುಂಬ ಸಂಬಳ ಪಡೆಯುತ್ತಿದ್ದನಾದರೂ ಮನೆಗೆ ಸಹಾಯಕನಾಗಿರಲಿಲ್ಲ. ಸೊಸೆಗೂ ಅತ್ತೆಗೂ ಸಾಮರಸ್ಯವಿರಲಿಲ್ಲ. ಅದೆಷ್ಟು ವಿರೋಪ ಮುಟ್ಟಿತೆಂದರೆ ಮಗ ಮನೆಯವರ ಸಂಬಂಧವನ್ನೆ ಕಡಿದುಕೊಂಡಿದ್ದ. ವರ್ಷಕ್ಕೊ ಎರಡು ವರ್ಷಕ್ಕೋ ಒಮ್ಮೆ ನೆಂಟ ಬಂದಂತೆ ಬಂದು ಒಂದೋ ಎರಡೋ ದಿನ ಇದ್ದು ನಡೆದು ಬಿಡುತ್ತಿದ್ದ. ಹೆಂಡತಿ ಮಾತ್ರ ಇವನೊಡನೆ ಬಂದುದೇ ಇಲ್ಲ. ಇಷ್ಟೇ ಅಲ್ಲದೆ, ಮನೆಯವರಿಗೆ ತನ್ನ ಸಂಬಳದಲ್ಲಿ ಚಿಕ್ಕಾಸನ್ನೂ ಕಳಿಸುತ್ತಿರಲಿಲ್ಲ. ಹೆಣ್ಣು ಮಕ್ಕಳಲ್ಲಿ ನಾಗಲಕ್ಷ್ಮಿಯೇ ದೊಡ್ಡವಳು. ಅವಳಿಗೀಗ ಹದಿನಾಲ್ಕು. ಇನ್ನೂ ಮೈ ನೆರೆದಿರಲಿಲ್ಲ. ಅವಳೇ ರುಕ್ಕಿಣಿಯನ್ನು ತುಂಬ ಹಚ್ಚಿಕೊಂಡಿದ್ದವಳು. ಮುಟ್ಟಾದಾಗ ಅವಳೇ ಬಂದು ನೀರೆರೆಯುತ್ತಿದ್ದವಳು. ವಾಸಂತಿಗೆ ಹನ್ನೆರಡು, ಶಾಂತಿಗೆ ಹನ್ನೊಂದು. ಈ ಹೆಣ್ಣು ಮಕ್ಕಳೆಲ್ಲರೂ ರುಕ್ಕಿಣಿಯನ್ನು ಒಂದಲ್ಲ ಒಂದು ರೀತಿಯಲ್ಲಿ ಪ್ರೀತಿಸುತ್ತಿದ್ದರು. ಆದರೆ ವೆಂಕಣ್ಣ ಜೋಯಿಸರ ಹೆಂಡತಿ ಮಾತ್ರ ಮನೆಗೆ ಹೋದರೆ ರುಕ್ಕಿಣಿಯನ್ನು ಸರಿಯಗಿ ಮಾತನಾಡಿಸುತ್ತಿರಲಿಲ್ಲ. ರುಕ್ಕಿಮಣಿಯನ್ನೇ ಏಕೆ, ಮಗನಿಗೂ ತಮ್ಮ ಮನೆಗೂ ಸಂಬಂಧ ಹದಗೆಟ್ಟಾಗಿನಿಂದಲೂ ಕೇರಿಯ