ವಿಷಯಕ್ಕೆ ಹೋಗು

ಪುಟ:ವೈಶಾಖ.pdf/೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಮಗ್ರ ಕಾದಂಬರಿಗಳು ಚೀರ ಅಲುಗಾಡ್ಡೆ ಬಿದ್ದು ಕತ್ತು ಹೈದ, ಅಕ್ಕಪಕ್ಕದ ತ್ವಾಟ ವೊಲದಲ್ಲಿ ಕೇಮೆ ಮಾಡ್ತಿದ್ದ ಮಂದಿ ತಳಕೆ ಓಡಿಬಂದು ಜಮಾಯಿಸ್ದ್ರು... ಲಕ್ಕೆ ಮಾರಿಗುಡಿ ಮುಂದೆ ಬಂದಾಗ ವಳಗಡೆ ಜಮಾಯಿಸ್ ಆಸಾಮಿಗೋಳು, “ಇಸ್ಪೀಟು ಅಡಕ್ಕೆ ಬತ್ತೀಯೆನ್ದ?” ಕರದ್ರು, ಅವರಲ್ಲೊಬ್ಬ ಕುಡುದ ಅಮಲ್ನಲ್ಲಿ ಪದಯೋಳಿದ್ದ: ರಾಗಿ ಇಟ್ಟಿನ ಮುದ್ದೆ ಮಾರಿಗುಡಿ ನಿದ್ದೆ ಇದ್ದರೆ ಇದ್ದೆ ಎದ್ದರೆ ಎದ್ದೆ... ಹೈದ್ರ ಮೈಸೂರು ದೊಡ್ಡಾಸ್ಪತ್ರೆಗೆ ತಟಾಯಿಸ್ದ್ರು-ಮೂಲೆ ಪರೀಕ್ಷೆ ಮಾಡೊ ದಾಕ್ತರು-“ಬಲದ ತೋಳು, ಮತ್ತೆ ಮಂಡಿ ಮೂಳೆ ಮುರಿದೋಗವೆ” ಅಂದರು. “ಒಂದು ಪಕ್ಷ ಆ ತೋಳು ಸರಿಯಾಗಬೈದು. ಆದ್ರೆ ಮಂಡಿ ಲಿಪೇರೀ ಕಪ್ಪ” ಅಂತಾನು ಅಂದರು... ಮಾಮೂಲ್ನಂಗೆ ಪಮಚಾತಿ ಸೇರು. ವೊಗೆಸೊಪ್ಪ ವೀರೋಸ್ ಸಾವುಕಾರು ಬುಡನ್ ಸರೀಪು ಸಾಬರಿಂದ ಎಂಟು ಸಾವ್ರ ರೂಪಾಯಿ ಸಾಲ ತಂದು ಊರ ಐನಾತಿ ಕುಳಗೋಳಿಗೆಲ್ಲ ವೊಗಸೊಪ್ಪ ಚಪ್ಪರ ಕಟ್ಟಕ್ಕೆ ವೋಟೋಟು ಬಿತ್ತಿದ್ರಿಂದ ಪಂಚಾತೀಲಿ ಗಂಗಪ್ಪಂದೇ ಮೇಲುಗೈ ಆಯ್ತು. ಬುಂಡಪ್ಪ ಆಳಿನ ಇಲಾಜಿಗೆ ಕೇವ್ ಆಯವತ್ತು ರೂಪಾಯಿ ದಂಡತೆತ್ತು ಗಂಗಪ್ಪ ಪಾರಾದ... ಗಂಗಪ್ಪ ಆಳುಮಗ ರಾಚನ ಸರಾಸು ಅಂಗಡೀಲಿ ಭರ್ತಿ ಕುಡುದು ಉಚ್ಚುಚ್ಚಾಗಿ ಒದರಾಡ್ಡಾಗ, ಕಿವಿಂದ, ಕಿವಿಗೆ ಬಿದ್ದ ಸುದ್ದಿ ಲಕ್ಕನ್ನೂ ಮುಟ್ಟಕ್ಕೆ ತಡ ಆಗ್ಲಿಲ್ಲ. ಪುನಾ ಬುಳ್ಳಪ್ಪ ಪಂಚಾತಿ ಸೇರುಸ್ಥ. ಕುಡಿದೋನ ಮಾತೂಂತ ಮನಾ ಗಂಗಪ್ಪ ಬಾವುಟಾನೆ ಮ್ಯಾಲಾಯ್ತು. ಮಯಸುರು ಆಸ್ಪತ್ರೆಲಿ ಹೈದ ಪಳಾಸ್ಪರು ಸುತ್ತುಸಿಕಂಡು ನಾಕು ತಿಂಗಳು ಅಳ್ಳಾಡೆ ಮಂಚದಲ್ಲಿ ಸುಮ್ಮೆ ಬಿದ್ದಿರಬೇಕೂಂತ ಆಯ್ತು... ಸಂಕಟದಿಂದ ಈ ಬಾರಿ ಲಕ್ಕ ಉಗುಳ ತೊಂಟೆ ಪಟ್ಟಾಚಾರಿ ಅಟ್ಟಿ ಮುಂದಿನ ತುಂಬೆ ಗಿಡದ ಮ್ಯಾಲೆ ಬಿದ್ದು ತೂಗಾಡು. “ಹಯ್ಯೋ ಹಯ್ಯೋ ಹಯ್ಯೋ... ಹೋಯ್ತಲ್ಲ, ಹೋಯ್ತಲ್ಲ... ಕಾಲು