ವಿಷಯಕ್ಕೆ ಹೋಗು

ಪುಟ:ವೈಶಾಖ.pdf/೧೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಮಗ್ರ ಕಾದಂಬರಿಗಳು ೧೭೫ ಕೇಶವಯ್ಯ ರುಕ್ಕಿಣಿಯ ಬೆನ್ನು ಸವರುತ್ತ, “ನನ್ನ ಹೆಂಡತಿಯ ಸ್ವಭಾವಾನೆ ಹೀಗೆ, ಮೂಗಿನ ತುದೀಲೆ ಇರತ್ತೆ ಕೋಪ... ಇದನ್ನ ನೀನು ಮನಸ್ಸಿಗೆ ತೀರ ಹೆಚ್ಚಿಕೊಬೇಡ, ಅವಳದ್ದು-ಕ್ಷಣಪಿತ್ತ, ಕ್ಷಣ ಚಿತ್ತ... ನಾಳೆಯೂ ಬಾ. ಅಷ್ಟರಲ್ಲಿ ಅವಳನ್ನು ರಿಪೇರಿ ಮಾಡಿದ್ದೀವಿ” ಎಂದು ನಕ್ಕ. ರುಕ್ಕಿಣಿಗೆ ಹೇಸಿಗೆಯೆನಿಸಿತು. “ಸರಿಯೆ, ನೀನ್ಯಾಕೆ ಹಾಗೆ ಮೋಸದಿಂದ ನನ್ನ ಕಾಯಿ ಮಲಗಿಸಿದ್ದು?” ವ್ಯಗ್ರಳಾಗಿ ಕೇಳಿದಳು. “ಅಯ್ಯೋ, ನೀನೂ ಸರಿ, ಮೋಸ ಮಾಡದಿದ್ರ ಈ ಜೀವನದಲ್ಲಿ ಗೆಲ್ಲಲಿಕ್ಕೆ ಅಗತ್ಯ?... ಇಡೀ ಮಹಾಭಾರದ ಕಥೆಯಲ್ಲಿ ನಾವು ಕಾಣುವದೇನು?... ಉದ್ದಕ್ಕೂ ಮೋಸ!?- ಅದೂ ಶ್ರೀಕೃಷ್ಣ ಪರಮಾತ್ಮನಿಂದಲೆ ಅದೆಲ್ಲ ನಡೆಯಿತು ಅಂದಮೇಲೆ... ಕೃಷ್ಣನ ಕುತಂತ್ರವಿಲ್ಲದೆ ಪಾರ್ಥ ಕರ್ಣನನ್ನ ಗೆಲ್ಲಲಿಕ್ಕೆ ಸಾಧ್ಯಾವಾಗ್ತಿತ್ತೆ? ಭೀಷ್ಮದ್ರೋಣಾದಿಗಳು ಸೋಲುತ್ತಾ ಇದ್ದರೆ? ಕೊನೆಗೆ ದುರ್ಯೋಧನನ್ನು ಗದಾಯುದ್ಧದಲ್ಲಿ ಭೀಮಸೇನ ಸದೆಬಡಿಯಲು ಕೂಡ ಕೃಷ್ಣ ತೊಡೆ ತಟ್ಟಿ ಸೂಚಿಸಿದ್ದು ಮಹಾ ಮೋಸವಲ್ಲವೇ?...” ಕೇಶವಯ್ಯನ ಉಪನ್ಯಾಸ ಸಾಗುತ್ತಿದ್ದಂತೆಯೇ, ರುಕ್ಕಿಣಿಯು ಎದ್ದುನಿಂತಳು. - “ಯಾಕಮ್ಮ ಹೊರಟುಬಿಟ್ಟೆ?... ಸಂಬಾರದ ಕಾಫಿ ಮಾಡಿಸ್ತೀನಿ, ಮೈಗೆ ಒಳ್ಳೇದು ಕುಡಿದು ಹೋಗುವಿಯಂತೆ, ಇರು” -ಕೇಶವಯ್ಯನ ಈ ಮಾತುಗಳನ್ನು ಕಿವಿಗೆ ಹಾಕಿಕೊಳ್ಳದೆ ರುಕ್ಕಿಣಿ ಹೊರನಡೆದಳು ಅವಳು ಕೇಶವಯ್ಯನ ಮನೆಯ ಮುಂದಿನ ಬೀದಿಯನ್ನು ದಾಟಿ ಎಡಕ್ಕೆ ಹೊರಳಿದರೆ ಅಲ್ಲಿಂದ ಆರನೆಯ ಮನೆಯ ಗಮಕಿ ಭೀಮಯ್ಯನವರ ಮನೆ. ಅವರು ಮಧ್ಯಾಹ್ನದ ವೇಳೆ ಸಾಮಾನ್ಯವಾಗಿ ಗದುಗಿನ ನಾರಣಪ್ಪನ ಭಾರವನ್ನೊ ಲಕ್ಷ್ಮೀಶನ ಜೈಮಿನಭಾರವನ್ನೊ ವಾಚಿಸುವುದು ವಾಡಿಕೆ. ಆಗ ಅವರ ಪಡಸಾಲೆಗೆ ಇತರ ಕೇರಿಗಳ ಜನರೂ ನೆರೆಯುತ್ತಿದ್ದುಂಟು. ಮನೆಯಲ್ಲಿ ನಡೆಯುವ ಈ ಭಾರತ ವಾಚನವನ್ನು ಮನೆಯ ಹೊರಗಿನ ತೆಂಗಿನ ಮರಕ್ಕೆ ಒರಗಿ ನಿಂತು, ಒಮ್ಮೊಮ್ಮೆ ರುಕ್ಕಿಣಿಯೂ ಕೆಲಸಮಯ ಆಲಿಸುತ್ತ ನಿಲ್ಲುತ್ತಿದ್ದದುಂಟು. ಈ ದಿನ ಗಮಕಿ ಭೀಮಯ್ಯನವರು ಭಾರದಿಂದ ರುಕ್ಕಿಣಿಗೆ ಪ್ರಿಯವಾದ ಕರ್ಣವೃತ್ತಾಂತವನ್ನು ವಾಚಿಸುತ್ತಿದ್ದರು. ಅದನ್ನು ಕೆಲವು ಕ್ಷಣ ನಿಂತು ಆಲಿಸಬೇಕು