________________
ಎನ್ನುವಷ್ಟರಲ್ಲಿ ಅವಳ ಹಿಂದೆ ದೂರದಲ್ಲಿ ಹಿಂಬಾಲಿಸಿ ಬರುತ್ತಿದ್ದ ಲಕ್ಷ್ಯ “ರುಕ್ಕೂ... ರುಕ್ಕೂ...” ಎಂದು ಕೂಗುತ್ತ ಬಂದು ರುಕ್ಕಿಣಿಯ ತರ್ನಯತೆಯನ್ನು ಕದಡಿದಳು. ಇನ್ನು ಅಲ್ಲಿ ನಿಂತು ಸಫಲವಿಲ್ಲವೆಂದು ರುಕ್ಕಿಣಿ ಅಲ್ಲಿಂದ ಮುಂದೆ ಅಡಿಯಿಡುತ್ತ.
“ಯಾಕೆ ಲಕ್ಷಮ್ಮನೋರೆ, ಏನು ಸಮಾಚಾರ?” ಎಂದು ಪ್ರಶ್ನಿಸುವಾಗ ಬೇಸರ ತುಳುಕಿತ್ತು.
ಲಕ್ಷ್ಮಮ್ಮ ಏದುತ್ತ ಬಂದವಳು.
“ಏನಿಲ್ಲ ರುಕ್ಕು, ನಮ್ಮ ಮನೇಲಿ ಅವಲಕ್ಕೆ ಮುಗಿದಿತ್ತು. ಸೀತಾಲಕ್ಷ್ಮೀನ ಕೇಳೋಣಾಂತ ಬಂದೆ. ಆದರೆ ಪಗಡೆ ಆಟದಲ್ಲಿ ಅವಳು ಮುನಿಸಿಕೊಂಡು ಎದ್ದು ಹೋದಾಗ, ಅವಳನ್ನ ಕೇಳೋದಾದರೂ ಹೇಗೆ?- ನೀನೇ ಹೇಳು?... ಅವಳೇನೋ ಕೇಳಿದರೆ ಯಾವುತ್ತೂ ಇಲ್ಲ ಅನ್ನುವ ಹೆಂಗಸಲ್ಲ. ಅಲ್ಲದೀರ ನಾನೇನು ಯಾರನ್ನೂ ಬಿಟ್ಟಿ ಕೊಡಿ ಎಂದು ಕೇಳವಲ್ಲವಲ್ಲ!- ಕಡ ಈಸಿಕೊಳ್ತಿನಿ. ವಾಯಿದೆಗೆ ಸರಿಯಾಗಿ ಹಿಂದುರುಗಿಸಿಬಿಡ್ತೀನಿ” ಎಂದರೆ ರುಕ್ಕಿಣಿಗೆ.
“ಮಹಾರಾಯಿತಿ, ನನ್ನಿಂದ ಸಾಲಾಗಿ ಪಡೆದ ಎಷ್ಟು ಪದಾರ್ಥಗಳನ್ನ ವಾಪಸು ಕೊಟ್ಟಿದ್ದೀರಿ?” ಎಂದು ಕೇಳಬೇಕೆನ್ನಿಸಿ, ಮರುಕ್ಷಣವೆ,
'ಇಂಥ ಭಂಡ ಸಂಗಡ ವಾದ ಮಾಡುವುದು ಮೂರ್ಖತನದ ಪರಮಾವಧಿ' ಎಂದುಕೊಳ್ಳುತ್ತ ಸಾಗುತ್ತಿರುವಂತೆ,
“ರುಕ್ಕು, ನಿನ್ನಲ್ಲಿದ್ದರೆ- ಒಂದು ಅಚ್ಚೇರು ಕೊಟ್ಟಿರು, ನಾಳೆ ನಾಳಿದ್ದರಲ್ಲಿ ವಾಪಸು ಮಾಡ್ತೀನಿ” ಎಂದು ಕೇಳೇಬಿಟ್ಟಳು!
ಲಕ್ಷ ಮ್ಯನ ಸ್ವಭಾವವೇ ಹಾಗೆ, ಕೇಳುವಾಗ ತನಗೆ ಅಗತ್ಯವಾದುದಕ್ಕಿನ್ನ ಹೆಚ್ಚಾಗಿ ಕೇಳಿಬಿಡುವುದು. ಕೊಡುವವರು ಅದರ ಅರ್ಧಷ್ಟನ್ನಾದರೂ ಕೊಡುವುದಿಲ್ಲವೆ?- ಎನ್ನುವ ಲೆಕ್ಕಾಚಾರ!
ರುಕ್ಕಿಣಿಯು ಒಳಗೇ ನಕ್ಕಳು. “ಅಕ್ಟೇರಿನಷ್ಟು ಇರಲಾರದು. ಇರುವಷ್ಟನ್ನು ಕೊಡ್ತೀನಿ, ಬನ್ನಿ.”
“ಇನ್ನೇನು ಮಾಡುವುದು?- ಲಭ್ಯ ಇದ್ದಷ್ಟು... ಹುಂ, ಹಾಗೇ ಮಾಡು” ಎನ್ನುತ್ತ ರುಕ್ಕಿಣಿಯನ್ನು ಹಿಂಬಾಲಿಸಿದಳು ಲಕ್ಷ್ಮಮ್ಮ.
ಮನೆ ಸೇರುತ್ತಲೂ, ಒಂದು ಪಾವು ಅವಲಕ್ಕಿಯನ್ನು ತಂದಿತ್ತು,
“ನಾಳೆ, ತಪ್ಪಿದರೆ ನಾಳಿದ್ದು ತಂದುಕೊಡ್ತೀರಿ ತಾನೆ?” ತಾತ್ಸಾರದಿಂದಲೇ ಕೇಳಿದಳು.
“ಓ, ಭೇಷಕ್ಕಾಗಿ ನಾಳೆ ಬೃಹಸ್ಪತಿವಾರ ಅಲ್ಲವೆ? ಸಂತೆಯಿಂದ ತರಿಸಿ,