ವಿಷಯಕ್ಕೆ ಹೋಗು

ಪುಟ:ವೈಶಾಖ.pdf/೧೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಮಗ್ರ ಕಾದಂಬರಿಗಳು ೧೮೧ ಅಣ್ಣ ತಲೆ ತಗ್ಗುಸಿದ, “ಆಗ್ಲಿ” ಅಂದ ಸೊರ ಅವುನ ಗಂಟುಲಲ್ಲೇ ಸಿಕ್ಕಂತೆ... ಅಯ್ಯಂಗೆ ಆ ಸೊರ ಕೇಳುಸೋ ಇಲ್ಲೊ-ಅಂತ, ನಡುದ ಪುರಾಣಾನೆಲ್ಲ ನನ್ನ ಕುಟ್ಟೆ ಬಿಚ್ಚಿದ... ಆದ್ರೆ ತನ್ನಯ್ಯನ ಕುಟ್ಟೆ ಅಡ್ಡ ಮಾತ ಉಳುಸಿಕಳಕ್ಕೆ ಅವುನ ಕಯ್ಯಲ್ಲಿ ಆಗನಿಲ್ಲ. ಒಂದೇಡು ವಾರ ಸುಮ್ಮಿದ್ರೋನು, ಮನಾ ಕಿರಿಸ್ತಾನ ದೊಡ್ಡಿ ಈಚಲು ಪ್ಯಾಟೆಗೆ ನಮ್ಮಣ್ಣನ ಸವಾರಿ ಚಿತ್ತೈಸಕ್ಕೆ ಸುರು ಮಾಡ್ಕತ್ತು... ಮುನಾ ಇಂದಲಂಗೇಯ ಮಾಯಕಾತಿ ಸೂಸಾನಮ್ಮ ನಮ್ಮಣ್ಣಂಗೆ ಭರ್ತಿ ಕುಡುಸಿ ಮೆತ್ತ ಮೆತ್ತಗೆ ತನ್ನ ಅಂಗಡಿಮನೆಗೆ ಕರಕಂಡೋಗಿ, ಯತಾ ಪರ್ಕಾರ ಹಾಸಿಗೆ ಹಾಸಿ ಮನಗಿಸಿದ್ದು... ಈ ಸಲ ಮಾತ್ರ ಅಣ್ಣ ಬೆಳುಗ್ಗೆ ಕಣ್ಣುಬುಟ್ಟಾಗ, ಸೂಸಾನಮ್ಮ ಮಗಳು ಲೂಸಿ ಆ ಕ್ವಾಣೇಲಿ ಸುಳಿದಾಡ್ತ ಇರನಿಲ್ಲ. ನೇರ್ಪಾಗಿ ಅವುನ ಮೊಗ್ಗಲಲ್ಲೇಯ ಕಾಲು ನೀಡಿ ಮನಗಿದ್ದು!... ಸರಿ. ನಡೀಬಾರದ್ದು ನಡದೋಯ್ತು , ಮಾತ್ರ ಆ ಸಂಗತಿ ಆದದ್ದೆ ಆದದ್ದು ನಮ್ಮ ಮುಂದೆ ಒಂದು ತಿಂಗಳು ಆ ಈಚಲು ವನಕಾಗಿ ಸೂಸಾನಮ್ಮ ಅಂಗಡಿ ಮನೆಗಾಗಿ ಕಾಲಿಡನಿಲ್ಲ. ಆಮ್ಯಾಕೊಂದು ಜಿನ ಹುಣಸೂರು ಬೇಸ್ತವಾರ ಸಂತೇಲಿ ನಮ್ಮ ಪುಟ್ಟಾರಿಯೂ ನಾನೂ ವೋಯ್ತಾ ಕರೋನೂವೆ, ಅದೆಲ್ಲಿ ಕಾಯ್ತಾ ಇದ್ದಳೊ ಸೂಸಾನಮ್ಮ?- ಎಣ ಕಂಡೇಟಿಗ ರಣದ್ದು ಮುತ್ತೋತರ, ಭಗ್ಗನೆ ಬಂದು, “ನನ್ನೆಣ್ಣೆಗೆ ತಲೆ ಕೆಡುಸಿಬುಟ್ಟು ಹೊಂಟೋದೋನು, ನಮ್ಮ ದೊಡ್ಡಿದಕ್ಕೆ, ಪನಾ ತಿರುಗೂ ನ್ಯಾಡಬ್ಯಾಡದ?... ಪಾಪ, ಆ ನನ್ನ ಕಂದ ನಿನ್ನ ಚಿಂತೆ ಹೊರ ಬಂದು ಹಾಸ್ಟೆ ಇಡುದು ಮನಗದೆ!... ಈಟು ಜಿನ ಆಯ್ತು. ಒಂದು ಸರ್ತಿ ಆದರೂ ಬಂದು ಮೊಖ ತೋರುಸಿ ವೋಗಿದ್ರೆ, ಅದ್ಯೆ ಏಟೊ ನೆಮ್ಮದಿ ಸಿಕ್ಕುತ್ತಿತ್ತು... ಊ, ಈಗಲೂ ಯೇನ ಸೂರೋದು?- ಕೆಟ್ಟೋದು ಅಡುಗೆಯ ಲಿಪೇರಿ ಮಾಡುದ್ರಾಯ್ತು, ಈಗೇಯ ನನ್ನ ಜತೆ ಮೊಂಟು ಬಾ. ಅರೆಕ್ಷಣ ಅವುಗಳಿಗೆ ನಿನ್ನ ಮೊಖ ತೋರುಸಿ, ಏಡು ಸಮಾದಾನ್ನ ಮಾತಾಡಿ ಬಂದುಬುಡು. ವೊಸ್ಸು ಮಾಡುದ್ರೆ, ಯೆಲ್ಲಾನು ಮರತು ಬುತ್ತದೆ. ನನ್ನ ಕಂದ” ಅಂದ್ಲು. ಅಣ್ಣ ಪೆಚ್ಚಾದ. “ಇನ್ನೊಂದು ಜಿನ ಬರೀನಿ” ಅಂತ ಬೇತುಕಂಡ . ಆಪ್ಪಯ್ಯ ಅಂದರೂವೆ ಅವಳು ವಪ್ಪುನೇ ಇಲ್ಲ. ಇನ್ನೇನು ಮಾಡಕ್ಕಾದಾತು?- ಅಣ್ಣ ಅವಳ ಜೂತೆ ವೋಗನೆಬೇಕಾಯ್ತು.