ಪುಟ:ವೈಶಾಖ.pdf/೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ವೈಶಾಖ ಮುರಿದಿರೊ ನನ್ನ ಹಸುವಿನ ಮೇಲೆ ಸವಾರಿ ಮಾಡಲಿಕ್ಕೆ ಶುರು ಮಾಡಲ, ಈ ಹಾಳು ಕಡಸು... ಇದರ ವಂಶ ನಿರ್ವಂಶವಾಗ...” ಈ ಉಯ್ದು ಆಚೆ ಬೀದಿ ಬ್ರಾಂಬರ ಕೇರಿಂದ ಒಂದೆ ಉಸುರೆ ಬತ್ತಾ ಇತ್ತು. ಲಕ್ಕ ಆ ಬೀದಿಗೆ ವೊಳ್ಳಿ ಸ್ವಾಗ್ದಾಗ, ಒಂದು ಕುಂಟೊ ಮುದಿ ಆಸೀನ ಮ್ಯಾಲೆ ಒಂದು ಎಣ್ಣು ಕಡಸು ದಪಾ ದಪಾ ಅತ್ತಕ್ಕೆ ಪರ್ಯ ಮಾಡಿತ್ತು. ಆ ಮುದಿ ಅಸೀನ ಒಡತಿ, ಮಡಿ ಎಂಗಸು, ತನ್ನಟ್ಟಿ ಜಗುಲಿ ಕಂಬ ತಬ್ಬಿ ತಲೆ ತಲೆ ಬಡಿಕೊತ್ತಿತ್ತು. ಎದುರಟ್ಟಿ ವಳು ಪಡಸಾಲೇಲಿ ಬ್ರಾಂಬರ ಹೈಕಳು ನಿಚ್ಚ ಯೋಳೋವಂಗೆ ಅದ್ಯಾವುದೊ ಮಂತ್ರವ ಬಾಯಿಪಾಟ ಮಾಡಿಕತ್ತಿದ್ದೂ, “ಬೆದೆಗೆ ಬಂದಿರೋ ಕಡಸಿಗೆ ಹೋರಿ ಕೊಡಿಸದೆ ಹಾಗೇ ಬಿಟ್ಟರೆ, ಆದಿನ್ನೇನು ಮಾಡುತ್ತೆ? ತನ್ನ ತೀಟೆ ತೀರಿಸಿಕೊಳ್ಳಲಿಕ್ಕೆ, ಸಿಕ್ಕುಸಿಕ್ಕಿದ ಹಸುಗಳ ಮೇಲೆ ಹಾರುತ್ತೆ... ಮುಖ್ಯ, ಆ ಕಡಸನ್ನ ಸಾಕಿರೋ ಜನಕ್ಕೆ ಗ್ರಾನ ಇರಬೇಕು...” ಆರುವರ ಮುದುಕಿ ಮೂಲೆ ಮನೆ ದಿಕ್ಕೆ ಕೆಂಗಣ್ಣ ಬೀರತ, ಮಾತ್ನಾತ್ತೂ ಜಗಲಿ ಕಂಬವ ಮುಸ್ಲಿಂದ ಕುಟ್ಟ, ಊಳಿಡ್ತಿತ್ತು. ಸಟೀಗೆ ವಾರೆ ಮಾಡ್ಡ ಕದೀನ ಸಮದಿನಿಂದ ಪೊರಕ್ಕೆ ಇಣುಕ್ಕೆ ಪಣಕಿ ಕ್ವಾಡ್ತಿದ್ದ ಮೂಲೆಮನೆ ಎಂಗಸು, ಆ ಮಾತು ಕ್ಯಾಳುನಾರದೆ, ನಾಚಿ ಕದ ಮುಚ್ಚಿದಳು. ಲಕ್ಕ ಓಡೋಗಿ, ಕಯ್ದಿದ್ದ ಕೋಲ್ಕಿಂದ ಕಡಸ್ಥೆ ನಾಕೇಟು ಬಿದ್ದು, ಅಮ್ಮ ಮೂಲೆಮನೆ ಇಂಚೂರಿ ಕೂಟ್ಟಿಗೆ ಅಟ್ಟೋಯ್ತು, ಗೂಟಕ್ಕೆ ಕಟ್ಟಾಕಿದ. ಅವ್ರು ಕತ್ತೆತ್ತೂನೂವೆ ಇತ್ತಿಲ ಬಾಗ್ಲ ಚೌಕಟ್ಟು ತನ್ನೆಡು ಕಯ್ಯಲೂ ಇಡುದು ನಿಂತಿದ್ದ ರುಕ್ಕಿಣವ್ವ ಕಣ್ಣಿಗೆ ಬಿದ್ದು. “ಆ ಲಕ್ಷಮ್ಯನೋರ ಬಾಯಿ ತೆರೀತು ಅಂದರೆ, ನಮ್ಮೂರ ಮುಂದಿನ ಹೆಬ್ಬಾಗಿಲು ತೇರಿತು ಅಂದ ಹಾಗೇನೇ!... ಆ ಮುದುಕಿ ಏನಾರು ನೆಪತೆಕ್ಕೊಂಡು ಯಾರ ಬಗ್ಗೆಯಾದರೂ ಬೊಬ್ಬೆಯಿಡಾ ಇರಬೇಕು. ಒಂದು ಪಕ್ಷ ಅಂಥ ಅವಕಾಶ ಸಿಕ್ಕದೇ ಹೋದರೆ, ಬಹಳ ಹಿಂದೆಯೇ ತೀರಿಹೋದ ತನ್ನ ಗಂಡ ಜೀವನದುದ್ದಕ್ಕೂ ತನಗೆ ಹಾಗೆ ತೊಂದರೆಕೊಟ್ಟ ಹೀಗೆ ಗೋಳು ಹುಯ್ದ-ಅಂತ ಮನೆಮನೆಗೂ ಹೋಗಿ ಡಂಗುರ ಸಾರಬೇಕು...ಅಂತು ಹೀಗೆ ಏನಾರ ರಂಪ ಮಾಡದಿದ್ರೆ, ತಿಂದ ಅನ್ನ ಅವರಿಗೆ ಮೈ ಹತ್ತು.... ಆದರೆ, ಅವರಿಗೆ ಸಮಯ ಬಿದ್ದು ಯಾವುದಾದರೂ ಸಣ್ಣ ಪುಟ್ಟ ಸಾಮಾನು ಬೇಕಾದಾಗ ಮಾತ್ರ ಪೂಸಿ ಮಾಡಿಕೊಂಡು ಬರ್ತಾರೆ!... ನಮ್ಮಿಂದಲೆ ಸಹಾಯಪಡೆದು, ನಾವು ಕೊಡುವುದೇನಾದರೂ ಕಿಂಚಿತ್ ಕಡಿಮೆಯಾದರೆ, ನಮ್ಮನ್ನ ಹೀನಾಮಾನ ದೂರುವ