________________
ಸಮಗ್ರ ಕಾದಂಬರಿಗಳು ೧೮೯ ಅಲ್ಲಲ್ಲಿ ಎದ್ದು ಬಿದ್ದು ಹರಿದಾಡಿದ ಸುದ್ದಿ ಅವಳ ಕಿವಿಯನ್ನೂ ಮುಟ್ಟದಿರಲಿಲ್ಲಗಂಡಸು, ಹೆಂಗಸು ಇಬ್ಬರೆ ಒಂದೇ ಜಾಗದಲ್ಲಿ ಹಗಲೂ ರಾತ್ರಿ ವಾಸ ಮಾಡಬಹುದೇ? ಸಾಕ್ಷಾತ್ ಬ್ರಹ್ಮದೇವ ತಾನೆ ಸೃಷ್ಟಿಸಿದ ಮಗಳು ಶಾರದೆಯಲ್ಲೆ ಮೋಹಗೊಳ್ಳಲಿಲ್ಲವೆ?... ಎಂಬ ತರ್ಕವಾಗಿ ಆರಂಭ ಆದದ್ದು ಕೃಷ್ಣಶಾಸ್ತ್ರಿಗಳು ಪ್ರಾಯದ ಹೆಣ್ಣು ರುಕ್ಕಿಣಿ ಇಬ್ಬರೇ ಒಟ್ಟಿಗಿರುವಾಗ ಎಲ್ಲವೂ ಮುಗಿದೇ ಹೋಗಿರಬೇಕು, ಎನ್ನುವ ಹಂತವನ್ನೂ ಮುಟ್ಟಿತ್ತು.... ಮೊಸರು ಕಡೆಯುತ್ತ ರುಕ್ಕಿಣಿಯು, - “ನನ್ನ ಮಾವಯ್ಯ ದೇವರಂಥ ಮನುಷ್ಯ. ಒಂದು ದಿನವೂ ಸಹ ನನ್ನನ್ನು ಕತ್ತೆತ್ತೆ ನೋಡಿಲ್ಲ. ಇಂಥ ಪುಣ್ಯಾತ್ಮರ ಚಾರಿತ್ರ್ಯವಧೆ ಮಾಡಲಿಕ್ಕೂ ಜನ ಹೇಸಲ್ಲವಲ್ಲ?” ವ್ಯಸನ ಪಡುತ್ತ, ಕಡೆಯುವ ಮಂತಿಗೆ ನೀರು ಚೆಲ್ಲಿ ತೊಳೆದು, ಬೆಣ್ಣೆಯನ್ನು ಒಂದು ಕಡೆಯಿಂದ ಸುತ್ತಲೂ ಬಳಿದು ಉಂಡೆ ಮಾಡುತ್ತ, “ಅಯ್ಯೋ, ಇದರಲ್ಲೇನು ವಿಶೇಷ?- ಅಂಥ ಮಹಾ ಪತಿವ್ರತೆ ಸೀತಾದೇವಿಯ ಬಗ್ಗೆಯೇ ಕೇವಲ ಅಗಸನೊಬ್ಬ ಜರಿದು ಕುಶ್ಚಿತ ಟೀಕೆ ಮಾಡಲಿಲ್ಲವೆ?...” -ಹೀಗೆ ಚಿಂತಿಸುತ್ತಿದ್ದವಳು, ತಟ್ಟನೆ ಕೊಂಚ ಗಟ್ಟಿಯಾಗೆ, “ಹುಂ, ನೆಕ್ಕುವ ನಾಯಿಗೆ ಲಿಂಗವೇನು, ಪಾಣಿಬಟ್ಟಲೇನು?” ಎಂದು ಸಿಡಿಮಿಡಿಗೊಂಡವಳು, ಬೆಣ್ಣೆಯನ್ನು ಕಾಯಿಸಲು ಬೇರೊಂದು ಪಾತ್ರೆಯಲ್ಲಿ ಒಲೆಯ ಮೇಲಿಟ್ಟು, “ಈ ಹೇಸಿಗೆ ಮಾತಿನ ಗಂಗೋದ್ಭವ ಕೇಶವಯ್ಯನ ಮಡದಿ ಆ ಸೀತಾಲಕ್ಷ್ಮಿಯ ಹೊಸಲು ತಲೆಬುರುಡೆಯಲ್ಲಿ ಆಗಿರಲಿಕ್ಕೆ ಸಾಕು- ಎಂದು ತಿರಸ್ಕಾರವಾಗಿ ತನ್ನಲ್ಲಿ ಹೇಳಿಕೊಂಡಳು. ಅವಳ ಮನಸ್ಸು ಬೇರೊಂದು ದಿಸೆಯಲ್ಲಿ ಹರಿಯತೊಡಗಿತ್ತು... ಇಲ್ಲ, ಇದು ಹೀಗೂ ಇರಬಹುದೆ?... ಆ ಸುಟ್ಟು ಮೊರೆಯ ಲಕ್ಷಮ್ಮ ತಾನೆ ಇದನ್ನು ಸೃಷ್ಟಿಸಿ, ಸೀತಾಲಕ್ಷ್ಮಿಯ ಮೇಲೆ ತನ್ನಲ್ಲಿ ತಪ್ಪುಭಾವನೆ ಬೆಳಯುವಂತೆ ಮಾಡಿರಬಹುದೆ?... ಒಲೆಯ ಮೇಲೆ ಕುದಿಯುವ ತುಪ್ಪವನ್ನ ಉಕ್ಕದಂತೆ ಸೌಟಾಡಿಸುತ್ತ, ಅವಳ ಮನಸ್ಸು ಎದ್ದಬಿದ್ದು ಕುದಿಯಿತು... ಆಚೆಮೊನ್ನೆ ಬುಂಡಮ್ಮ ತಮ್ಮ ಹಿತ್ತಲಲ್ಲಿ ಯಾವುದೋ ಮಾತಿಗೆ ಹೇಳಿದ ಹಾಗೆ “ಮನಸನ ನಾಲಿನ ಚಕಳದ್ದು. ಅದು ಹೆಂಗೆ ಬ್ಯಾಕಾರೂ ವೊಳ್ತದೆ.