________________
ಸಮಗ್ರ ಕಾದಂಬರಿಗಳು ದುರುಳ ಸ್ವಭಾವ.... ಏನಾದರೂ ಆಗ್ಲಿ, ಸದ್ಯ ನೀನು ಬಂದು, ಒಂದ ದೊಡ್ಡ ರಂಪದಿಂದ ನನ್ನನ್ನ ಪಾರುಮಾಡಿದೆ..." ಬೆನ್ನಿಗೆ ಬಿದ್ದ ಅಕ್ಕ ತಂಗೆಮ್ಮದೀರಂಗೆ ಕಣ್ಣಾಡುಸ್ತ ಪಿರೀಂದ ರುಕ್ಕಿಣವ್ವ. ತುಸು ವೊತ್ತಿಗೆ ಮುಂಚೆ ಉತ್ತುಮರು ಅನ್ನುಸಿಕೊಂಡೋರ ಮ್ಯಾಲೆ ಲಕ್ಕಂಗಿದ್ದ ಕ್ವಾಪ, ರುಕ್ಕಿಣವ್ವ ಕಾಥೆದ್ದಂಗೆ ಆರಿ ತಣ್ಣಗಾಯ್ತಾ ಬತ್ತು. ಅವಳ ಕಂಡಾಗನಲ್ಲ, ಉತ್ತಮರಾಗೂ ವಸಿ ಜನ ವಳ್ವೆಯೋರು ಅವರೇಂತ ಅವಸ್ಥೆ ಅನ್ನುಸ್ತಾನೆ ಇತ್ತು. ರುಕ್ಕಿಣವ್ವನಂತೂ ಯಾವ ವೊತ್ತಾದರೂ ಸೈ, ಲಕ್ಕನ್ನ ಬಾಕಿಯೋರಂಗೆ ಕೀಳಾಗಿ ಕಂಡಿರನಿಲ್ಲ. ಅಲ್ಲದೇಯ ಆರೇಳು ತಿಂಗ ಇಂದ್ರೆ, ಅವ್ವಂಗೆ ಸಕತ್ ಎಂಟು ಜಿನ ಜರ ಕಾದು ಚಾಪೆ ಬುಟ್ಟು ಏಳನಾರದೇ ಇದ್ದಾಗ, ಈ ಮಾತಾಯ್ ಗ್ರತ್ತಾಗಿ, ತನ್ನ ತಾವೇ ತನ್ನಯ್ಯಂಗೆ ಯೋಳಿಕಳಿಸಿ, ಅನ್ನ ಕಯ್ಲಿ ಅತ್ತು ರೂಪಾಯಿ ಇಟ್ಟು, ಮೊದ್ದು ಪಂಡಿತರ ಕರೆಸಿ ನಿನ್ನೆಡತೀಗೆ ಇಲಾಜು ಮಾಡಿಸೂಂತ ಯೋಳಿದ್ದು, ಮುಂದುಕೆ, ಅವ್ವನ ಕಾಯ್ದೆ ವಾಸ್ಯಾಗಿ, ಅಯ್ಯ ಯಾರ ಕುಟ್ಟೋ ಸಾಲ ತಂದು ಅಣವ ವಾಪಸು ಮಾಡಕ್ಟೋದರೆ, “ಇಲ್ಲ, ಇಟ್ಟುಗೊ, ನಿನ್ನ ಮಗ ಆಗ ಈಗ ಬಂದು ಚೂರುಪಾರು ಕೆಲ್ಸ ಮಾಡಿಕ್ತಡ್ತಾನೆ ಇದ್ದಾನೆ. ಹಂಗೆ ನೋಡಿದ್ರೆ ನಾನೇ ನಿಮಗೆ ಇನ್ನೂ ಎಸೋ ಹಣ ಕೊಡಬೇಕು”- ಅಂದುಬುಡೋದ? ಅಷ್ಟೇ ಸಿಗ್ರಿ ಇಲ್ಲದೆ, ಇಂಗೇ ಯಾವಾಗಲಾರೂ ಬಿಡತಿ ಮಡಿಕಂಡು ಇವುರಟ್ಟಿ ತಾವಿಕೆ ಬಂದು ರುಕ್ಕಿಣವ್ವ ಯೋಳ ಅದೂ ಇದೂ ಕೆಲ್ಸ ಮಾಡಿ ಕ್ವಟ್ಟು ವೋಯ್ತಿದ್ದ...ಅವಳತ್ರ ಯಾವುದಾದರೂ ಇಸ್ಯ ಪರಸಂಗ ವೊಡೀಬೇಕಾದರೂ ಆಸ್ಟ್ರೇಯ-ಲಕ್ಕಂಗೆ ಬೋ ಸರಾಗ! ಕಡಸಿನ ಮುಂಚೋರಿ ಗೊಂತಿಗೆ ಒಂದು ತಬ್ಬು ಉಲ್ಲಾಕಿ ಮಾತೆತ್ತ: “ನೀವೇನೆ ಅನ್ನಿ ಅಯ್ತಾರೆ. ಈಟು ಜಿನೂವೆ ನಿಮ್ಮ ಕಡಸ್ಥೆ ವೋರಿ ಕಟ್ಟಿಸದೆಯ ಇಂಗೆ ಸಿಕ್ಕಸಿಕ್ತ ದನೀನ ಮ್ಯಾಕ್ಕೆಲ್ಲ ಅತ್ತಕ್ಕೆ ಬುಟ್ಟಿರಾದು, ನಂಗ್ಯಾಕೊ ವೈನಾಗಿ ಕಾಳ್ಮೆಲ್ಲ.” ಬಳೆಯಿಲ್ಲ ಬೋಳುಗೈ ಮೇಲೆ ಬೆರಳಾಡಿಸುತ್ತ ರುಕ್ಕಿಣಿ. “ನಾನೇನು ಮಾಡಲಿ?... ಎಂದು ದಿವಸ ಆಯ್ತು ನಮಾಳು ಸೊಸಿಯ ಜ್ವರ ಅಂತ ಮಲಗಿ, ಈ ಕಡೆ ಸುಳಿದು ನೋಡಿಲ್ಲ. ನಾನು ಯಾರುಯಾರನ್ನೋ ಗೋಗರೆದು ಅವರ ಕೈಲಿ ಕೊಟ್ಟಿಗೆ ತೊಡೆಸಿ, ಕಾಡಿಗೆ ದನ ಅಟ್ಟಿಗೊಂಡು ಹೋಗೋಕೂ ಏರ್ಪಾಡು ಮಾಡಿದ್ದೆ. ಆದರೆ ಆ ಮಾಚನ ಹೆಣ್ಣು ಇಷ್ಟು ದಿವಸ ಬರ್ತಿದ್ದದ್ದು ಇವತ್ತೇ ಈ ಕಡೆ ತಲೆ ಹಾಕಿಲ್ಲ... ನೆನ್ನೆ ನಾನೇ ಆ ಹುಡುಗ