ಪುಟ:ವೈಶಾಖ.pdf/೨೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಮಗ್ರ ಕಾದಂಬರಿಗಳು ೧೯೫ ಮುಕ್ತಿಯಿಲ್ಲ.... ಹೀಗೆ ಏನೇನೋ ಗೋಜಲು... ದುರ್ಗಮವಾದ ಅರಣ್ಯದಲ್ಲಿ ದಿಕ್ಕು ತಪ್ಪಿದ ಭಾವನೆ... ಮನಸ್ಸು ಅಷ್ಟು ದೂರ ಸಾಗಿ ಮುಂದೆ ಆಲೋಚನೆ ಮಾಡಲು ಅಸಮರ್ಥವಾಗಿ ತಟಸ್ಥವಾಯಿತು... ಆದರೂ ಎಲ್ಲೋ ಆಳದಲ್ಲಿ ಆ ನಾಶಬಾಯಿ ಲಕ್ಷಮ್ಮನಂಥವರು ಆಡಿದ ಮಾತೇ ನಿಜುವಾಗಬೇಕೆ?- ಎಂದು ಪರಿತಪಿಸಿದಳು. ಅವಳ ಬಾಯಲ್ಲಿ ಮತ್ತಿ ಇದೆ ಎನ್ನುತ್ತಾರೆ ಜನ. ಇರಬಹುದೆ?... ಈ ಒಳಗುದಿಯಲ್ಲೆ ಆ ರಾತ್ರಿ ಕಳೆದು ಬೆಳಗಾಗುತ್ತಿರುವಂತೆ ನೆರೆಮನೆಯ ವೆಂಕಣ್ಣ ಜೋಯಿಸರ ಮನೆಯೋಳಗಿನಿಂದ ಅವರು ಬಾಲಕರಿಗೆ ಹೇಳಿಕೊಡುತ್ತಿದ್ದ ವೇದಪಾಠ ಗಾಳಿಯಲ್ಲಿ ಕೇಳಿಬರುತ್ತಿತ್ತು. ಯಜುರ್ವೇದದ ಮಂತ್ರ, ರುದ್ರನನ್ನು ಕುರಿತದ್ದು ಎಂದು ತನ್ನ ಪತಿ ಹೇಳುತ್ತಿದ್ದ ನೆನಪು. ಒಮ್ಮೆ ಗುರುಗಳು ಹೇಳಿಕೊಟ್ಟ ವೇದವಾಕ್ಯವನ್ನು, ಬಾಯಿ ನೆನೆಯಲಿ, ಜ್ಞಾಪಕಕ್ಕೆ ಬರಲಿ, ಎಂದು ಬಾಲಕರು ಎರಡು ಸಲ ತಮಗೆ ತಾವೇ ಹೇಳಿಕೊಳ್ಳುತ್ತ ಅಭ್ಯಾಸ ಮಾಡುತ್ತಿದ್ದರು... ಬಾಲಕರ ತಂಡ ಎರಡು ಗುಂಪಾಗಿ ಒಂದು ಗುಂಪಾದ ನಂತರ ಇನ್ನೊಂದು ಗುಂಪು ಮಂತ್ರವನ್ನು ಬಿಡಿಬಿಡಯಾಗಿ ಘೋಷಿಸುತ್ತಿತ್ತು: ಪ್ರತಿ ಪೂರುಷಮೇಕ ಕಪಾಲಾನ್ನಿಧ್ವಪತಿ (ಎರಡು ಬಾರಿ) -ಮೊದಲನೆಯ ಗುಂಪು (ಬಹುಶಃ ಹತ್ತು ಅಥವಾ ಹದಿನೈದು ಬಾಲಕರ ಗಡವೇ ಸೇರಿರಬೇಕು!) ಏಕಕಂಠದಲ್ಲಿ ಸುಸ್ವರವಾಗಿ ಘೋಷಿಸುತ್ತಿತ್ತು. ಅನಂತರ ಎರಡನೆಯ ಗುಂಪು ವೇದಮಂತ್ರದ ಇನ್ನೊಂದು ವಾಕ್ಯವನ್ನು, ಜಾತಾ ಏವ ಪ್ರಜಾರುದ್ರಾನ್ನಿರವದಯತೇ ಎಂದು ಅಷ್ಟೆ ಸ್ವರಹಿತ ಏಕಕಂಠದಿಂದ ಎರಡು ಸಲ ತಾನೂ ಘೋಷಿಸಿತು. ಪುನಃ ಮೊದಲನೆಯ ಗುಂಪು ಏಕ ಮತಿ ರಿಕಂ ಎಂದರೆ, ಎರಡನೆಯ ಗುಂಪು ಆನಿಷ್ಯಮಾಣಾ ಏವ ಪ್ರಜಾರುದ್ರಾನ್ನಿರವದಯತೇ ಎಂದು ಘೋಷಿಸುತ್ತಿತ್ತು.... -ವೇದಮಂತ್ರವು ಹೀಗೆ ಸುಶ್ರಾವ್ಯವಾಗಿ ಬಾಲಕರ 'ಸಂಚಾರಿ'ಯ ಅಭ್ಯಸರೂಪದಲ್ಲಿ ತೇಲಿಬರುವಾಗ, ತನ್ನ ತೌರೂರು ರುದ್ರಪಟ್ಟಣ ಹಾಗೂ ಸಮೀಪದ ಬಸವಾಪಟ್ಟಣಗಳಲ್ಲಿ ಮತ್ತು ಇದೇ ದರುಮನಹಳ್ಳಿಯಲ್ಲಿ ಯಾವುದಾದರೂ ವಿಶಿಷ್ಟ ಶುಭಕಾರ್ ನಡೆದು ಭೋಜನಾನಂತರ ತಾಂಬೂಲ ಸವಿಯುವಾಗ ಶೋತ್ರಿಯ ಬ್ರಾಹ್ಮಣಸಮೂಹವು ಇಂತಹ ವೇದಮಂತ್ರಗಳನ್ನು