________________
ಸಮಗ್ರ ಕಾದಂಬರಿಗಳು ೧೯೯ ಉಕ್ಕಿಸುವ ಸಂಪಿಗೆ ಸಸಿಯನ್ನು ದೃಷ್ಟಿಸುತ್ತ ಕುಳಿತರು. ತಟ್ಟನೆ ಆವೇಶ ಬಂದವರಂತೆ, “ಕಂದಾ, ನಿನಗೆ ಪೂರಾ ಅನ್ಯಾಯ ಮಾಡಿದೆ. ಮಹಾಪಾಪಿ ನಾನು. ಮಹಾಪಾಪಿ... ಕ್ಷಮಿಸು ಎಂದು ಯಾವ ಬಾಯಿಂದ ಕೇಳಿ?... ಕೋಟಿ ಕೋಟಿ ಜನ್ನ ಕಳೆದರೂ ಈ ಪಾಪದಿಂದ ನನಗೆ ಮುಕ್ತಿಯಿಲ್ಲ... ಇಲ್ಲ.... ಇಲ್ಲವೇ ಇಲ್ಲ” ಎಂದು ಎದೆ ಬಡಿದುಕೊಳ್ಳುತ್ತ ಸಂಪಿಗೆ ಸಸಿಯೆದಿರು ಮಣ್ಣಿನಲ್ಲಿ ಹೊರಳಾಡಿದರು... - ಅಷ್ಟರಲ್ಲಿ ತೋಟದೊಳಗೆ ಬಂದ ವೆಂಕಣ್ಣ ಜೋಯಿಸರು, ಶಾಸ್ತ್ರಿಗಳ ಅವಸ್ಥೆಯನ್ನು ದೂರದಿಂದಲೊ ನೋಡಿ ತವಕಗೊಂಡವರಾಗಿ, “ಶಾಸ್ತಿಗಳೆ, ಶಾಸ್ತಿಗಳೆ- ಇದೇನು ನೀವು ಮಾಡ್ತಿರೋದು?...” ಎನ್ನುತ್ತ ಓಡಿ ಬಂದು ಅವರನ್ನು ಎತ್ತಿ ಕೂರಿಸುತ್ತ, “ಮಹಾಸಂಯಮಿ ನಮ್ಮ ಊರಿನಲ್ಲೆಲ್ಲ. ಎಂದು ಹೆಸರಾದ ನೀವೇ ಹೀಗೆ ಸಂಯಮ ಕಳೆದುಕೊಂಡರೆ, ನಮ್ಮಂಥವರ ಪಾಡೇನು?... ನೀವು ಕಂಡ ಹಾಗೆ, ನಾನೂ ಮೂರು ಗಂಡು ಮಕ್ಕಳನ್ನು ಕಳೆದುಕೊಂಡು ಕೂತಿದೀನಿ, ಪುತ್ರಶೋಖಂ ನಿರಂತರಂ ಎನ್ನುವ ಮಾತು ಸುಳ್ಳಲ್ಲ. ಆದರೂ, ಮಗ ಸತ್ತು ಇಷ್ಟು ಕಾಲ ಕಳೆದ ಬಳಿಕವೂ ಹೀಗೆ ನೀವು ಹುಚ್ಚಾಪಟ್ಟೆ ಆಡುವುದು ತರವೆ?” ಎಂದು ಸಂತೈಸಲು ಯತ್ನಿಸಿದರು. ಶಾಸ್ತ್ರಿಗಳು ವೆಂಕಣ್ಣ ಜೋಯಿಸರನ್ನು ತಬ್ಬಿ, “ವೆಂಕಣ್ಣ, ನನ್ನ ಯಾತನೆ ನಿಮಗೆ ಹೇಗೆ ತಿಳಿಯಬೇಕು?” ಎಂದು ಬಿಕ್ಕಿದರು. ಅದಕ್ಕೆ ಜೋಯಿಸರು, - “ನಾನೂ ಕೂಡ ನೊಂದಿರುವವನೆ, ಕಿಟ್ಟಣ್ಣ... ನಿಮ್ಮ ದುಃಖ ನನಗೂ ಅರ್ಥವಾಗುತ್ತೆ, ಆದರೇನು ಮಾಡುವುದು? ನಮ್ಮ ಕೈಲೇನಿದೆ?- ನಮ್ಮ ಬದುಕು ನಡೆಯವವರೆಗೂ ನಾಣ್ಯ, ಅದು ನಿಮಗೂ ಗೊತ್ತಿಲ್ಲವೆ?- ಸಮಾಧಾನ ತಂದುಕೊಳ್ಳಿ"- ಎಂದು ತಮ್ಮ ಬೋಧೆ ಮಾಡಿದರು. ಅರ್ಧ ತಾಸು ಕಳೆದಿರಬಹುದು. ಥಟ್ಟನೆ ಯಾವುದೋ ನಿರ್ಧಾರಕ್ಕೆ ಬಂದಂತೆ ಕೃಷ್ಣಶಾಸ್ತ್ರಿಗಳು ವೆಂಕಣ್ಣ ಜೋಯಿಸರ ತೆಕ್ಕೆಯಿಂದ ಬಿಡಿಸಿಕೊಳ್ಳುತ್ತ ಮೇಲೆದ್ದರು. ಹರಬಿಗಳನ್ನು ಎರಡು ಕೈಗಳಲ್ಲೂ ಎತ್ತಿಹಿಡಿದರು. ಮೌನವಾಗಿ ಕೊಳದಲ್ಲಿಗೆ ನಡೆದರು. ಎರಡು ಹರಬಿಗಳಿಗೂ ನೀರು ತುಂಬಿದರು. ಹೊಸದಾಗಿ ನೆಟ್ಟ ಅಡಿಕೆ ಸಸಿಗಳಿಗೆ ನೀರೆರೆಯಲು ಪ್ರಾರಂಭಿಸಿದರು. ಕೆಲಕಾಲ ಅವರನ್ನೇ ಎವೆಯಿಕ್ಕದೆ, ಗೌರವಪೂರ್ಣವಾಗಿ ನೋಡುತ್ತಿದ್ದು, 'ವಿಚಿತ್ರ ಪುರುಷ ಎಂದುಕೊಳ್ಳುತ್ತ, ವೆಂಕಣ್ಣ ಜೋಯಿಸರು ತೋಟದಿಂದ ಹೊರಟವರು