ವಿಷಯಕ್ಕೆ ಹೋಗು

ಪುಟ:ವೈಶಾಖ.pdf/೨೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨೦೦ ವೈಶಾಖ ಬಾಯಾಡಲೆಂದು ಹತ್ತಿರದ ಹಂಬಿನಿಂದ ನಾಲ್ಕಾರು ವೀಳೆಯದೆಲೆಗಳನ್ನು ಬಿಡಿಸಿಕೊಂಡರು. ಅಡಿಕೆ ಸಸಿಗಳಿಗೆಲ್ಲ ಒಬ್ಬರೆ ನೀರುಣಿಸಿ ಕೃಷ್ಣಶಾಸ್ತ್ರಿಗಳು ದೇಹಬಾಧೆಯನ್ನು ತೀರಿಸಿ, ಹಲ್ಲು ತಿಕ್ಕಿ ಮುಖಮಾರ್ಜನಮಾಡಿ ಹರಬಿಯಿಂದ ಕೊಳದ ನೀರನ್ನು ಎತ್ತಿ ಎತ್ತಿ ತಲೆಯ ಮೇಲೆ ಸುರವುಕೊಂಡರು. ಆತ್ಮಹತ್ಯೆಯ ಯೋಚನೆ ಸುಳಿಯಿತು. ಕೊಳಕ್ಕೆ ಬೀಳಲು ಹವಣಿಸಿದರು. ತಟ್ಟನೆ ಸರಸಿಯ ನೆನಪು ಆಯಿತು. ಆ ಕಂದನನ್ನು ತಬ್ಬಲಿ ಮಾಡಿ ಹೋಗುವುದೆ? ಎಂಬ ಚಿಂತೆ ಕವಿದು, ಹಾಗೆಯೇ ಮೆಟ್ಟಲಿನ ಕಲ್ಲಿನ ಮೇಲೆ ಒರಗಿದರು. ಬ್ರಹ್ಮಪಿಶಾಚಿ ಯಾಗುವೆನೆಂಬ ಭಯವೂ ಸುಳಿಯದಿರಲಿಲ್ಲ. ತೋಟದೊಳಗೆ ಲಕ್ಕ ಶಾಸ್ತಿಗಳನ್ನು ಸಮೀಪಿಸಿದವನೆ, “ಯಾಕೆ ಸೋಮಿ, ಇಂಗೆ ಕುಂತುಬುಟಿ?- ಮದ್ದಿನ್ನ ಆಗ್ಲೆ ದಾಟೋಗದೆ?” ಎಂದು ಕೇಳಿದವನು, “ಕೇಸವಯ್ಯಾರ ತಟಕೋಗಿದ್ದೆ” ಎಂದು ವಿವರಿಸಿ, “ಅಡಿಕೆ ಸೊಸಿಗಳೆ ನೀರ ಆಕ್ಲಾ?” ಕೇಳಿದ. ಬೋಡ್ಡ ಒಂದು ಹಳ್ಳಿಕುಂಚವನ್ನು ಅಟ್ಟಿಸಿಕೊಂಡು ಓಡಿತು. ಇನ್ನೇನು ಸಿಕ್ಕಿತು. ಎನ್ನುವುದರಲ್ಲಿ ಅದು ಒಂದು ಅಡಿಕೆ ಮರವನ್ನು ಹತ್ತಿಬಿಟ್ಟಿತು. ಕೈತಪ್ಪಿದ ಬೇಟೆಯಿಂದ ನಿರಾಶೆಗೊಂಡ ಬೊಡ್ಡ ಅಡಿಕೆ ಮರದ ಕೆಳಗಡೆ ನಗರುತ್ತ ನಿಂತು ಮೇಲೆ ಹೋಗಿ ಮರೆಯಾದ ಹಳ್ಳಿಕುಂಚನನ್ನೇ ತನ್ನ ದೃಷ್ಟಿಯಲ್ಲಿ ಅರಸುತ್ತಿತ್ತು. ಶಾಸ್ತ್ರಿಗಳು ತನ್ನ ಮಾತಿಗೆ ಉತ್ತರ ಕೊಡದಿರಲು, ಆ್ಯಕ ಮತ್ತೊಮ್ಮೆ ಅವರನ್ನು ಸಮೀಪಿಸಿ ಕೇಳಿದ: “ಸೋಸಿಗಳೆ ನೀರ ಆಕ್ಲಾ, ಅಯ್ಯಾರೆ?” “ಬೇಡ. ಎಲ್ಲಕ್ಕೂ ನಾನೇ ಹಾಕಿದ್ದೀನಿ” ಎನ್ನುತ್ತ ನಿಧಾನವಾಗಿ ಎದ್ದು, ಮಣ್ಣಿನಲ್ಲಿ ಹೊರಳಾಡಿದ್ದರಿಂದ ಮೈಲಿಗೆಯಾಯಿತೆಂದು ಇನ್ನೊಮ್ಮೆ ತಲೆಯಿಂದ ನೀರು ಸುರುವಿಕೊಂಡು, ಒದ್ದೆ ಪಂಚೆಯಲ್ಲಿ ಶಾಸ್ತ್ರಿಗಳು ಮನೆಯ ಕಡೆ ಹೊರಟರು. ಮೈ ಮೇಲೆ ಹೊದಿಯುವ ವಸ್ತ್ರಗಳನ್ನು ನೀರಿಗೆ ಅದ್ದಿ ಹಿಂಡಿ, ಅದನ್ನು ಮಡಿಕೆ ಮಾಡಿ ತಲೆಯ ಮೇಲೆ ಇಟ್ಟಿದ್ದರು. ಕೈಯಲ್ಲಿ ಮಡಿನೀರು ತುಂಬಿದ ತಾಮ್ರದ ಚೆಂಬು, - ಬೊಡ್ಡನೊಡನೆ ಲಕ್ಕನೂ ಅವರನ್ನು ಹಿಂಬಾಲಿಸಿದ. ಶಾಸ್ತಿಗಳ ಮಾತು ಯಾವತ್ತೂ ಮಿತ. ಇದು ಲಕ್ಕನಿಗೂ ತಿಳಿದ ವಿಷಯವೆ. ಹಾಗಿದ್ದೂ ಒಮ್ಮೊಮ್ಮೆ ತನ್ನೊಡನೆ ಯಾವ ವಿಚಾರವನ್ನಾದರೂ ಎತ್ತಿ ಮಾತಾಡಿಸಿ ತಾನು ಮಾತಾಡುವಂತೆ