ವಿಷಯಕ್ಕೆ ಹೋಗು

ಪುಟ:ವೈಶಾಖ.pdf/೨೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಮಗ್ರ ಕಾದಂಬರಿಗಳು ೨೦೫ “ ಕೋಟೆಯೊಳಗೆ ಹೋಗಿ ನೋಡೋಣವಾ?” - ಆಸೆಯಿಂದ ಕೇಳಿದಳು. “ಇಲ್ಲಿಯ ತನಕ ಈ ಕೋಟೆಯೊಳಗೆ ನಮ್ಮ ಪ್ರದೇಶದ ಆಸುಪಾಸಿನ ಜನರು ಯಾರೂ ಪ್ರವೇಶಿದ್ದೇ ಇಲ್ಲ.... ಇದರ ಒಳಗೆ ಒಮ್ಮೆ ಹೋದವರು ಹಿಂದಿರುಗಿ ಬರಲು ದಾರಿ ಕಾಣದೆ ಸಾಯುತ್ತರೆಂದೇ ನಂಬಿಕೆ!... ಕೋಟೆಯೊಳಗೆ ಕೋಟೆಯಿದೆ ಎಂದು ಪ್ರತೀತಿ... ಒಂದೆರಡು ದನ ಕಾಯುವ ಹುಡುಗರಿಗೆ ಒಳಗೇನಿರುವುದೋ ನೋಡಬೇಕೆಂಬ ಚಪಲ ಬಂದು ಈ ಕೋಟೆಯ ಒಳಹೊಕ್ಕದ್ದರಂತೆ. ಆದರೆ ಹಾಗಿ ಹೋದವರು ಮತ್ತೆ ಹಿಂದಿರುಗಲೇ ಇಲ್ಲವಂತೆ! ಆದ್ದರಿಂದ...” ಎಂದು ವಿಶ್ವೇಶ್ವರ ವಿವರಣೆ ನೀಡುತ್ತಿರುವಾಗ, ಅವನ ವಾಕ್ಯವನ್ನು ಪೂರ್ತಿಗೊಳಿಸಲು ಅನುವುಗೊಡದೆ, “ಆದ್ದರಿಂದ ಕೋಟೆಯೊಳಗೆ ನಾವು ಹೋಗಿ ಹಿಂದಕ್ಕೆ ನೋಡುವುದು ಬೇಡ- ಇದು ತಾನೆ ನೀವು ಹೇಳಬೇಕೆಂದು ಇರುವುದು?” ಎಂದು ರುಕ್ಕಿಣಿ ಮುಖವನ್ನು ಸಣ್ಣಗೆ ಮಾಡಿದಳು. “ಹಾಗಲ್ಲವೆ, ರುಕ್ಕು, ಒಳಗಡೆ ಹೋಗಿ ಬರಲು ಆಗದೆ ಹೋದರೆ, ಯಾವ ಪುರುಷಾರ್ಥ ಸಾಧಿಸಿದ ಹಾಗಾಯ್ತು, ನೀನೇ ಹೇಳು.” ಗಂಡನ ಮಾತು ರುಕ್ಕಿಣಿಗೆ ಒಪ್ಪಿತವಾಗಲಿಲ್ಲ. “ಅದಕ್ಕೇನಂತೆ, ಅಲ್ಲಿ ಸಾಯೋದೇ ಆದರೆ, ನಾವಿಬ್ಬರೂ ಒಟ್ಟಿಗೇ ಇರುತ್ತೇವಲ್ಲ!- ಆಗ ಇಬ್ಬರೂ ಒಟ್ಟಿಗೇ ಸಾಯೋದಪ್ಪ” ಎಂದಳು. “ಬಂಗಾರದ ಜಿಂಕೆಯನ್ನು ಬಯಸಿದ ತ್ರೇತಾಯುಗದ ಸೀತಾದೇವಿಯ ಸಂತತಿ ಇನ್ನೂ ಜೀವಂತವಿದೆ!” ಎಂದು ನಗುತ್ತ, ಮೋಹದ ಮಡದಿಯನ್ನು ಬಾಚಿ ತಬ್ಬಿ ರಮಿಸುತ್ತ, “ನನ್ನ ಮನದನ್ನೇ ಹೋಗಲೇಬೇಕೆಂದು ಹಟ ಮಾಡವಾಗ ನನ್ನ ಮಾತೆಲ್ಲಿ ನಡೆಯುತ್ತೆ?... ಆದರೂ ಅಲ್ಲಿ ಕಾದಿರಬಹುದಾದ ಅಪಾಯಕುರಿತು ಹೇಳಿದ್ದೇನೆ. ಇನ್ನೊಮ್ಮೆ ಚೆನ್ನಾಗಿ ಆಲೋಚನೆ ಮಾಡಿ ತಿಳಿಸು. ಹೋಗಲೇಬೇಕೆ?” ರುಕ್ಕಿಣಿ ಅಷ್ಟೇನೂ ಆಲೋಚನೆ ಮಾಡುವ ಗೋಜಿಗೇ ಹೋಗದೆ ಹೌದು ಎನ್ನುವಂತೆ ತಲೆ ಕುಣಿಸಿದಳು. “ಸರಿ” ಎಂದು, “ಕಲ್ಲುಮುಳ್ಳಿನ ಹಾದಿ, ಎಚ್ಚರದಿಂದ ಬಾ.” ಹೇಳುತ್ತ ವಿಶ್ವೇಶ್ವರ ಕೋಟೆಯನ್ನು ಪ್ರವೇಶಿಸಿದ. ಹಿಂದಿನಿಂದ ಒಳಗೆ ಬಂದ ರುಕ್ಕಿಣಿ ತಾನು ಕಂಡ ದೃಶ್ಯದಿಂದ ಅವಾಕ್ಕಾದಳು. ಅವಳು ಶ್ರೀರಂಗಪಟ್ಟಣದಂತಹ