ವಿಷಯಕ್ಕೆ ಹೋಗು

ಪುಟ:ವೈಶಾಖ.pdf/೨೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨೦೬ ವೈಶಾಖ ಕೋಟೆಗಳನ್ನೇನೂ ನೋಡಿದ್ದಳು. ಆದರೆ ಇಷ್ಟು ಎತ್ತರದ ಭವ್ಯವಾದ ಕೋಟೆಯನ್ನು ತನ್ನ ಜೀವಮಾನದಲ್ಲೇ ಅವಳು ಕಂಡಿದ್ದಿಲ್ಲ! ಆ ಕೋಟೆ ಗೋಡೆಯ ಎತ್ತರಕ್ಕೇ ಇರುವ ದೈತ್ಯಾಕಾರದ ಮರಗಳು, ಈ ಮರಗಳು, ಅಷ್ಟಷ್ಟು ದೂರಕ್ಕೆ ಸೈನಿಕರನ್ನು ನಿಲ್ಲಿಸಿ, ಅಭೇದ್ಯವಾದ ವ್ಯೂಹ ರಚಿಸಿದಂತೆ, ದಟ್ಟವಾಗಿ ಬೆಳೆದು ನಿಂತಿದ್ದವು. ಕೆಲವೇ ಮರಗಳನ್ನು ದಾಟಿಹೋದಬಳಿಕ, ತಾವಿಬ್ಬರೂ ಎಲ್ಲಿದ್ದೇವೆ ಎನ್ನವುದೆ ಅರ್ಥವಾಗುತ್ತಿರಲಿಲ್ಲ. ಆದರೆ ಇಲ್ಲಿ ಮರಗಳಿರಲಿಲ್ಲ. ಕೇವಲ ಹೆಬ್ಬಂಡೆಗಳ ಸಾಲು, ಅವುಗಳ ಸಂದಿಯಲ್ಲಿ ತೂರಿ ನಡೆದಂತೆ, ಮಟ್ಟಸವಾದ ಬಯಲನ್ನು ದಾಟಿದರೆ ಮತ್ತೆ ಅವೇ ದೈತ್ಯ ಮರಗಳ ಜಾತ್ರೆ, ಇಲ್ಲಂತೂ ದಟ್ಟಿಸಿದ್ದ ವೃಕ್ಷರಾಶಿಯ ರೆಂಬೆಗಳು ಒಂದಕ್ಕೊಂದು ಹೆಣೆದಂತಿದ್ದು ಕತ್ತಲು ತಾನೇತನಾಗಿ ವಿಜೃಂಭಿಸಿತ್ತು. ಮರಗಳ ಮೇಲಿನ ರೆಂಬೆಗಳಿಗೆ ತೂರಿದ್ದ ರಾಕ್ಷಸ ಬಾವಲಿಗಳು ಒಟ್ಟಿಗೇ ಪಟಪಟ ಸದ್ದು ಮಾಡುತ್ತ ಅವರಿಬ್ಬರ ಮುಖ ವೈಗಳಿಗೆ ಇನ್ನೇನು ಬಡಿದುಬಿಡುವುವೊ ಎನ್ನುವಂತೆ ಸುತ್ತಲೂ ಹಾರಾಡಿದಾಗ, ಭೀತಿಗೊಂಡ ರುಕ್ಕಿಣಿಯು ವಿಶ್ವೇಶ್ವರನನ್ನು ಬಲವಾಗಿ ಅಪಿದಳು. ಗಂಡನನ್ನು ಬಲಾತ್ಕರಿಸಿ ತಾನು ತಪ್ಪು ಮಾಡಿದೆನೆಂದು ಈಗ ಅವಳಿಗೆ ಮನವರಿಕೆಯಾಗಿತ್ತು. ಆ ಕೋಟೆಯಲೊಳಗಿನ ಅರಣ್ಯ ಪ್ರದೇಶದ ವಿಸ್ತಾರದಲ್ಲಿ ಎಂಥಂತವೊ ವಿಕಾರ ಸ್ವರಗಳು ಚೀರಲಾರಂಭಿಸದುವು. ಭೀತಿಯಿಂದ ನಡುಗತ್ತು, “ಇನ್ನೊಂದು ಕ್ಷಣ ಇಲ್ಲಿರೋದು ಬೇಡ. ನಡೀರಿ. ಆದಷ್ಟು ಜಾಗ್ರತೆ ಇಲ್ಲಿಂದ ಕಾಲೆಗೆಯೋಣ” ಎಂದು ಪೀಡಿಸತೊಡಗಿದಳು ರುಕ್ಕಿಣಿ. ವಿಶ್ವೇಶ್ವರನಿಗೂ ಅದೇ ಚಿಂತೆಯಾಗಿತ್ತು. ರುಕ್ಕಿಣಿಯ ಕೈ ಹಿಡಿದು ಮಸಕು ಕತ್ತಲೆಯಲ್ಲಿ ದಾರಿ ಹುಡುಕುತ್ತ ಹೊರಟದಂತೆ ಒಂದು ಮರಕ್ಕೆ ಢಿಕ್ಕಿ ಹೊಡೆದು ರಕ್ತ ಚಿಮ್ಮಿತು. ಅನಂತರ ಅವರಿಬ್ಬರೂ ಮರದಿಂದ ಮರಕ್ಕೆ ಢಿಕ್ಕಿ ಹೊಡೆಯುತ್ತ ಸಾಗಿ, ತಾವು ಕೋಟೆಯೊಳಗೆ ಪ್ರವೇಶ ಮಾಡಿದ ದ್ವಾರವನ್ನು ಹುಡುಕಾಡಿದರು. ಎಷ್ಟು ಕಾಲ ಅರಸಿದರೂ ಆ ಕೋಟೆಬಾಗಿಲು ಅವರ ಕಣ್ಣಿಗೆ ಬೀಳದೆ ನಿಗೂಢವಾಗೇ ಇತ್ತು. ಮುಂದೆ ಹೋದಂತೆ, ಅವರು ಎಲ್ಲಿಂದ ಹೊರಟರೊ ಅದೇ ಸ್ಥಳಕ್ಕೆ ಹಿಂದಿರುಗಿ ಬಂದಂತೆ ತೋರುತ್ತಿತ್ತು. ವಿಚಿತ್ರ ವೆಂದರೆ, ಎಲ್ಲಸ್ಥಳಗಳೂ ಒಂದೇ ರೀತಿ ಕಾಣುತ್ತಿದ್ದವು. ಎಲ್ಲಕ್ಕಿಂತಲೂ ಸೋಜಿಗವೆಂದರೆ ಅಲ್ಲಿ ವಿರಾಜಿಸುತ್ತಿದ್ದ ವೃಕ್ಷಗಳ ಜಾಣಾಕ್ಷ ಜೋಡಣೆ.... ಇನ್ನು ಹೆಚ್ಚು ಕಾಲ ಅಲ್ಲಿ ಓಡಾಡಿದರೆ ಸಿಪಾಯಿಗಳಂತೆ ಅಚಲವಾಗಿ ನಿಂತ ಆ ಮರಗಳಿಗೆ ಒಂದಾದಮೇಲೆ ಬಂದರಂತೆ ತಲೆ ಬಡಿದು ಸಾಯುವುದೊಂದೇ