ಪುಟ:ವೈಶಾಖ.pdf/೨೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಮಗ್ರ ಕಾದಂಬರಿಗಳು ೨೦೭ ಸಹಜವೆಂದು ಅವರಿಬ್ಬರಿಗೂ ಕಳವಳ ಹುಟ್ಟಿತು. ಆದರೆ ಆ ಕಠೋರ ಸನ್ನಿವೇಶದಲ್ಲಿ ಒಂದೇ ಜಾಗದಲ್ಲಿ ನಿಲ್ಲುವುದೂ ಬಲು ಅಪಾಯಕಾರಿಯೆಂದು ಅವರೂ ಗ್ರಹಿಸಿದರು. ಕೂಡಲೆ, ಎಡವುತ್ತ, ಮುಗ್ಗರಿಸಿ ಬೀಳುತ್ತ ಮರದಿಂದ ಮರಕ್ಕೆ ಢಿಕ್ಕಿ ಹೊಡೆಯುತ್ತ ಸಾಗಿದರು... ಆ ಮಸಕಿನಲ್ಲಿ ಅವರು ಈಗ ಯಾವ ದಾರಿ ಹಿಡಿದಿದ್ದರೆ ಅವರಿಗಂತೂ ಅರಿವಿರಲಿಲ್ಲ. ಆ ಪರಮ ಸಂಕಟದ ವೇಳೆ, ಆರಂಭದಲ್ಲಿ ದೂರದಿಂದ ಕೇಳಿಬರುತ್ತಿದ್ದ ವಿಕಾರ ಸ್ವರಗಳು ಬರಬರುತ್ತ ರಣಮದ್ದಲೆಯಾಗಿ ಹತ್ತಿರವಾದಂತೆ ಭಾಸವಾಗತೊಡಗಿತ್ತು. ದಾರಿ ತಪ್ಪಿರಬೇಕೆಂದು ಊಹಿಸಿ ಬೇರೆ ದಿಕ್ಕಿಗೆ ತಿರುಗಿದರು. ಅತ್ತಣಿಂದಲೂ ಕರ್ಕಶ ಸ್ವರಗಳು ಸಮೀಪಾಗುತ್ತಿರುವಂತೆ ಕಂಡವು. ಇದೂ ಸರಿಯಲ್ಲವೆಂದು ಇನ್ನೊಂದು ದಿಕ್ಕಿಗೆ ತಿರುಗಿದರು.... ಎಂಥದೋ ವಿಕಾರ ಚೀರಾಟ... ಕುದುರೆಗಳ ಖುರಪುಟ ಧ್ವನಿ... ಆನೇಗಳು ಘಳಿಡುವ ಸದ್ದು. ಕತ್ತಿಗಳು ಪರಸ್ಪರ ತಾಕಲಾಡುವಾಗ ಉದ್ಭವಿಸುವ ಖಣಿಲ್ ಖಿಲ್ ಶಬ್ದ... ಯಾವ ಕಡೆ ತಿರುಗಿ ನೋಡಿದರೂ ಭೀತಿ ಹುಟ್ಟಿಸುವ ಇಂಥ ಸದ್ದುಗಳೇ ಮತ್ತೂ ಮತ್ತೂ ಸಮೀಪವಾಗುತ್ತಿದ್ದವು. ಇನ್ನು ಪ್ರಯತ್ನಮಾಡುವುದೂ ವ್ಯರ್ಥವೆಂದು ಬಗೆದು ತಟಸ್ಥರಾಗಿ ನಿಂತಲ್ಲೇ ನಿಂತರು... ಹಟಾತ್ತನೆ ಯಾರೊ ತನ್ನ ಗಂಡನನ್ನು ಎಳೆದೊಯ್ಯುತ್ತಿರುವಂತೆ ಭಾಸವಾಯಿತು... ರುಕ್ಕಿಣಿ ತತ್ತರಿಸಿದಳು. ವಿಶ್ವೇಶ್ವರನನ್ನು ಎಳೆದೊಯ್ದು ಜಾಡನ್ನು ಕುರುಡಾಗಿ ಅನುಕರಿಸುತ್ತ ನಡೆದಳು... ಮರದಿಂದ ಮರಕ್ಕೆ ಢಿಕ್ಕಿ ಹೊಡೆದು ಬಿದ್ದಳು, ಎದ್ದಳು, ಮತ್ತೆ ಅರಸುತ್ತ ಹೊರಟಳು... ಕತ್ತಲೆಯ ಕಾಡು, ಸೈನಿಕರಂತೆ ದೃಢವಾಗಿ ನಿಂತು, ಸುಸೂತ್ರವಾಗಿ ಮುಂದುವರಿಸಲು ಅಡ್ಡ ಬಂದು, ದಾರಿ ತಪ್ಪಿಸುವ ಬೃಹದಾಕಾರದ ಮರಗಳು... ಎದ್ದು, ಬಿದ್ದು ಸಾಗಿದಂತೆ, ಥಟ್ಟನೆ ಒಂದು ಕೊಚ್ಚೆಗುಂಡಿಗೆ ಮುಗುಚಿ ಮುಳುಗಿದಂತಾಯಿತು. “ಅಮಾ' ಎಂದು ಚೀರುತ್ತ ರುಕ್ಕಿಣಿ ಕಣೆರೆದಳು... ವೆಂಕಣ್ಣ ಜೋಯಿಸರ ಮನೆಯಿಂದ ಬಾಲಕರ ತಂಡದ ವೇದಘೋಷದ “ಪಂಚಾರಿ' ಕೇಳಿ ಬಂದು, ತಾನು ಇಷ್ಟು ಹೊತ್ತಿನ ತನಕ ಅನುಭವಿಸಿದ್ದು ಕೇವಲ ಕನಸು ಎಂಬಂಶವನ್ನು ಅದು ಮನವರಿಕೆ ಮಾಡಿಕೊಟ್ಟಿತು. ಆದರೂ ಅವಳ ಎದೆಬಡಿತ ಸ್ಥಿಮಿತಕ್ಕೆ ಬರಲು ಸ್ವಲ್ಪ ಕಾಲವೇ ಬೇಕಾಯಿತು. ಮುಂದಿನ ದಿನಗಳಲ್ಲಿ ಕೃಷ್ಣಶಾಸ್ತ್ರಿಗಳು ತೋಟದಲ್ಲಿ ತಮ್ಮ ದುಡಿಮೆಯನ್ನು ಅಧಿಕಗೊಳಿಸಿದರು. ತಣ್ಣೀರು ಸ್ನಾನ ಮಾಡಿ, ಒದ್ದೆ ಬಟ್ಟೆಯಲ್ಲಿ ಮನೆಗೆ ಬಂದು,