________________
ಭೀಮನಳ್ಳಿ ಒಂದು ಕಾಡುಹಳ್ಳಿ, ಅಲ್ಲಿಗೆ ತಲುಪಲು ಕಾಡಿನ ಮಧ್ಯದ ಬಂಡಿ ಹಾದಿಯಲ್ಲಿ ಹೋಗಬೇಕು. ಪಾರ್ವತಿಯ ಆಹ್ವಾನ ಬಂದದ್ದು ಸೋಮವಾರ ಸಂಜೆಗೆ, ಮಾರನೆಯ ದಿನ ಮಂಗಳವಾರ, ಮಂಗಳವಾರ ಶುಕ್ರವಾರಗಳು ಪ್ರಯಾಣ ಕ್ಕೆ ಶುಭ ದಿನ ಗಳಲ್ಲವಲ್ಲ. ಇನ್ನು ಬುಧ' ವಾರ ವೇ ಮಂಗಳಕಾರ್ಯವಿರುವುದರಿಂದ ಆ ದಿನವೇ ಪ್ರಯಾಣ ಬೆಳಸಬೇಕು. ಮುಹೂರ್ತವಿರುವುದು ಹತ್ತು ಗಂಟೆಗೆ, ಹನ್ನೆರಡು ಹದಿಮೂರು ಮೈಲಿಗಳು ಕಾಡುಹಾದಿ ಸಮೆಯಲು ಸುಮಾರು ನಾಲ್ಕು ಗಂಟೆಗಳ ಅವಧಿಯಾದರೂ ಬೇಕು. ಆದ್ದರಿಂದ ಬೆಳಗಿನ ಜಾವ ಇನೂ ಕತ್ತಲಿರುವಂತೆಯೆ ರುಕ್ಕಿಣಿಯನ್ನು ಹೊತ್ತ ಗಾಡಿ ಆಗಲೇ ಬ್ರಾಹ್ಮಣಕೇರಿಯನ್ನು ದಾಟಿತ್ತು. ಆಗ ಯಾರದೋ ಮನೆಯೊಳಗಿನಿಂದ ಅರೆನಿದ್ದೆಯಿಂದ ಎಚ್ಚೆತ್ತು ರೋದಿಸುತ್ತಿದ್ದ ಕೂಸನ್ನು ತೊಟ್ಟಿಲಲ್ಲಿ ತೂಗುತ್ತ ಅದರ ತಾಯಿ ಲಾಲಿಪದ ಹಾಡುವುದು ಕೇಳಿಬರುತ್ತಿತ್ತು. ಗಾಡಿಯು ಇನ್ನೂ ಮುಂದೆ ಸರಿದಂತೆ, ರಾಗಿಕಲ್ಲು ಬೀಸುವ ಇಬ್ಬರು ಹೆಣ್ಣುಮಕ್ಕಳು ದನಿಯೆತ್ತಿ ಉಳಿಯುತ್ತಿದ್ದ ಜನಪದ ಗೀತೆಯ ಕೆಲವು ಸಾಲುಗಳು ಮುಂಜಾವಿನ ಗಾಳಿಯಲ್ಲಿ ತೇಲಿದವು...
ಮುಂಜಾವಿನ ಮೋಡಗಟ್ಟಿದ ಕತ್ತಲೆಯಲ್ಲಿ ಹಾಲುನೊರೆಯಂತೆ ಬೆಳ್ಳಗಿದ್ದ ಎತ್ತರದ ಎತ್ತುಗಳು ತಮ್ಮ ಕೊರಳಿನ ಗೆಜ್ಜೆಗಳಿಂದ ಜಣಜಣನಾದ ಹೊರಡಿಸುತ್ತ ಊರನ್ನು ದಾಟಿಸಿ ಗಾಡಿಯನ್ನು ಕಾಡಿನ ಬಂಡಿಹಾದಿಗೆ ತಂದಿದ್ದವು. ಉದ್ದಕ್ಕೂ ಲಕ್ಕನ ಸಹಚರಿ ಬೊಡ್ಡ ಗಾಡಿಯನ್ನು ಅನುಸರಿಸಿ ಹಿಂದೆ ಹಿಂದೆ ಬರುತ್ತಿತ್ತು, ಆ ನಾಯಿ ಜೊತೆಗೆ ಬರದಂತೆ ಓಡಿಸಲು ಅನೇಕ ಬಾರಿ ಲಕ್ಕ ಪ್ರಯತ್ನ ಪಟ್ಟ. ಸಫಲವಾಗಿಲಿಲ್ಲ.
“ಬೊಡ್ಡಿ ಹೆತ್ತಿದ್ದು, ಹ್ಯಾದೆಯಾ ಪಿಶಾತಿ ಅಂದ್ರೆ ಇಕಾ ಬಂದೆ ಗವಾಕ್‌ಸದಲಿ ಅಂತ ಲಾಜಾದಲ್ಲಿ ಪುನಾ ಗಾಡಿ ವಂದುಗುಟ್ಟೇ ಅಜರು!” ಲಕ್ಕ ನಿಸ್ಸಹಾಯಕನಾಗಿ ಗೊಣಗಿದ.
ಅದರ ಪರದಾಟ ನೋಡಲಾರದೆ ರುಕ್ಕಿಣಿಯೆ,
“ಪಾಪ; ಬರಲಿ ಬಿಡೋ” ಎಂದಳು.
“ಇನ್ಯಾನು ಇಲ್ಲ ಅಮ್ಮಾರೆ, ಗಮ್ಮನೆ ವಂದುಗಟ್ಟೆ ಬಂದರೆ ಸಮಾಸು. ನಾ ಬ್ಯಾಡ ಅಂದೇನ? ಈ ಕಾಡಿನಾಗೆ ಇಂಕರ ಸರಕ್ ಪರತ್ ಅನಕ್ಕಿಲ್ಲ. ಸೂರನಂಗೆ ಬ್ಯಾಟಿಗೆ ವೊಂಟುಬುತ್ತದೆ. ಈ ಕಾಡಿನಾಗೆ ಉಳಿ, ಕಿರುಬನ ಕಾಟ ಇದ್ದದೆ!- ಅದೇ ನಂಗೆ ಕೇವು” ಎಂದರೂ ಅಂತಿಮವಾಗಿ ನಿರ್ವಾಹವಿಲ್ಲದೆ