________________
೨೧೦ ವೈಶಾಖ ಸೋತು ಲಕ್ಕನೂ ಸುಮ್ಮನಾದ. ಆದರೆ ಎತ್ತಿನ ಗಾಡಿ ಕಾಡಿನಲ್ಲಿ ಇನ್ನೂ ನಾಲ್ಕು ಮಾರು ಕೂಡ ಉರುಳಲಿಲ್ಲ. ದೂರದಲ್ಲಿ ಮೋಲಿ ಕಾಡುಕೋಳಿಯೊ ಕಣ್ಣಿಗೆ ಬಿದ್ದಿರಬೇಕು. ಬೊಡ್ಡ ರಭಸದಿಂದ ಅದನ್ನಟ್ಟಿ ಫೇರಿ ಕಿತ್ತಿತ್ತು. ಲಕ್ಕ ಗಾಬರಿಗೊಂಡು ಗಾಡಿಯನ್ನು ನಿಲ್ಲಿಸಿ ಕೆಳಕ್ಕಿಳಿದ. ಬಂಡಿಯ ಮುಂಭಾಗದ ಕೆಳಗಡೆ ಕಟ್ಟಿದ್ದ ಲಾಟೀನನ್ನು ಬಿಚ್ಚಿ ತೆಗೆದುಕೊಂಡು 'ಬೊಡ್ಡ, ಬೊಡ್ಡ' ಎಂದು ಕೂಗುತ್ತ ಅದರ ಹಿಂದೆ ಓಡಿದ್ದು ಕಂಡು ಬೇಸರಗೊಂಡಿದ್ದ ರುಕ್ಕಿಣಿಯ ಮನಸ್ಸಿಗೆ ಕಚಗುಳಿ ಇಟ್ಟಂತಾಗಿ ಮೋಜೆನಿಸಿತು. ಮೊಲ ಬೊಡ್ಡನ ಬಾಯಿ ತಪ್ಪಿಸಿ ಒಂದು ಬಿಲವನ್ನು ಹೊಕ್ಕಿದ್ದನ್ನು ಕಂಡ ಆ ಬಿಲದ ಮುಂದೆ ಬೊಗಳುತ್ತ ನಿಂತ ಬೊಡ್ಡನನ್ನು ಲಕ್ಕ ಒದ್ದು ಓಡಿಸಿದ. ಊರ ದಿಕ್ಕಿಗೆ ಹೋಗುವ ಬದಲು ಅದು ಈ ಸಲ ಗಾಡಿಯ ಕೆಳಗಡೆ ಸೇರಿತು. ಲಕ್ಕ ಹಿಂಬಾಲಿಸಿದವನೆ ಅದನ್ನು ಅಲ್ಲಿಂದಲೂ ಓಡಿಸಲು ಪ್ರಯತ್ನಿಸಿದ. ಹಿಂದಿನಿಂದ ಓಡಿಸಿದರೆ, ಮುಂದೆ, ಮುಂಬನಿಂದ ಓಡಿಸಿದರೆ ಹಿಂದೆ- ಹೀಗೆ ಲಕ್ಕನನ್ನು ಪೇಟಾಡಿಸಿತು. ರುಕ್ಕಿಣಿ ನಗುತ್ತ, “ಲಕ್ಕ, ನಿನಗೆ ಹೊತ್ತು ಹೋಗದು, ಬಾ. ಇದನ್ನು ನೀನು ಅಟ್ಟಾಡುವುದು, ಗಾಳಿ ಗುದ್ದುವುದು- ಎರಡೂ ಒಂದೇ. ಬರೀ ಶ್ರಮ, ಅಷ್ಟೆ” ಎಂದಳು. ನಿಟ್ಟುಸಿರು ಬಿಟ್ಟು “ಲೌಡಿಮಗಂದೆ” ಎಂದು ಶಪಿಸಿ, ಲಕ್ಕ ಪುನಃ ಗಾಡಿಯ ಮೂಕಿಯನ್ನೇರಿ ಎತ್ತುಗಳಿಗೆ ಚಾಲನೆ ಕೊಟ್ಟ, ಗಾಡಿ, ಬಂಡಿಹಾದಿಯಲ್ಲಿ ಗಡಲ್ ಗಡಕ್ ಎಂದು ಕಾಡಿನ ಮೌವನ್ನು ಭೇದಿಸುತ್ತಾ ಮುಂದುವರಿಯಿತು. ಗಾಡಿ ಸಾಗಿದಂತೆ ಮೆಳೆಗಳು ಒತ್ತಿನಲ್ಲಿ ಏನೋ ಸರಪರ ಸದ್ದಾಯಿತು. ಎತ್ತುಗಳು ಬೆದರಿದವು. ಗಾಡಿಯ ಅಡಿಯಿಂದ ಬೊಡ್ಡನೂ ಬೊಗಳಲಾರಂಭಿಸಿತು. “ಇದೇನೊ ಲೈಕ- ಎತ್ತುಗಳು ಹೀಗೆ ಬೆದರಾ ಇವೆ?...” ಎಂದು ರುಕ್ಕಿಣಿ ಕೇಳಿದಳು. - “ಈ ಎತ್ತಿನ ಜೊತೆ ಈ ಕಾಡು ಆದೀಲಿ ಬಂದು ಸುಮಾರು ಜಿನವೆ ಆಗದೆ. ಅಷ್ಟೇ ಮೆಳೆ ಹಿಂದೆ ಸರಪರ ಅಂದದ್ದೆಲ್ಲ ಚಿಕ್ಕ ಹೈಕಳು ಬೆದರೂವಂಗೆ ಬೆದರಾ ಅವೆ” ಎಂದು ಲಕ್ಕ “ಬೋಡ್ಡನೂ ಬೊಗಳ್ತಾ ಇದೆಯಲ್ಲ?...” ಸಂದೇಹ ಪೂರ್ತಿಯಾಗಿ ನಿವಾರಣೆಯಾಗದೆ ಕೇಳಿದಳು. “ಸರಿಕನ ಬುಡಿ. ಇನ್ನು ಈ ಬೊಡ್ಡಂಗೇನು ಕೇಮ? ಸಣ್ಣ ಪುಟ್ಟದೆಲ್ಲ