ಪುಟ:ವೈಶಾಖ.pdf/೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಮಗ್ರ ಕಾದಂಬರಿಗಳು ತಕ್ಕ ತಿನ್ನು” ಅಂತ ಒಂದು ಚೂರು ರೊಟ್ಟಿ ಮುರುದು ಲಕ್ಕ ತನ್ನ ನಾಯಿಯ ಮುಂಬೈ ಎಸ್ಥೆ, “ತಾಳು, ತಾಳು ನನಗೂ ನಿನ್ನ ಬೊಡ್ಡ ಮರೆತೇಹೋಯ್ತು, ಇನ್ನೊಂದು ಮುರುಕಲ ರೊಟ್ಟಿ ತರೀನಿ” ಎಂದು- ಲಕ್ಕ “ಬ್ಯಾಡಿ ಬ್ಯಾಡಿ, ಅತ್ತಾರೆ. ಇಲ್ಲಿರೂ ವೋಟೆ ಸಾಕು” ಅಂತ ಕೂಗ್ತಿದ್ದರೂ ಕೇಳದೆ- ಸರನೆ ಮತ್ತೆ ಒಳಗೋಗಿ, ಒಂದು ದೊಡ್ಡ ರೊಟ್ಟಿ ಮುರುಕು ತಂದು, ಅದನ್ನು ಚೂರು ಚೂರು ಮಾಡಿ ಬೊಡ್ಡನ ಮುಂದೆ ಎಸೆಯುತ್ತ. “ಈ ಕಡಸಿಗೆ ಹೋರಿ ಕಟ್ಟಿಸಬೇಕೂಂತ ನಾನು ಪ್ರಯತ್ನ ಮಾಡ್ತಾನೆ ಇದೀನಿ. ಸಮೀಪದಲ್ಲೆಲ್ಲೂ ಹೋರಿ ಸಿಕ್ತಾ ಇಲ್ಲ. ಚೌಡೀಪುರದ ಕಾಳೇಗೌಡರ ಹತ್ತಿರವೆ ಹೋಗಬೇಕು. ಅವರ ಹೋರಿ ತಾನೆ ಈ ಸುತ್ತಿಗೆಲ್ಲ ಪ್ರಸಿದ್ದಿ. ಆದರೆ ಅಲ್ಲೀವರೆಗೆ ಈ ಕಡಸನ್ನ ಅಟ್ಟಿಗಂಡು ಹೋಗಲಿಕ್ಕೆ ನಮ್ಮ ಮಾವನವರು ಯಾಕೊ ಮನಸ್ಸು ಮಾಡಿಲ್ಲ, ಇನ್ನೂ, ಅವರು ಮನಸ್ಸು ಮಾಡೋತನಕ ಈ ಕಡಸನ್ನ ತಡೆಯೋದು ನನಗಂತೂ ಪರಮ ಕಷ್ಟವಾಗಿದೆ” ಎಂದು ನಿಟ್ಟುಸಿರಿಟ್ಟಳು. “ನಂಗೆ ಈ ವಾರ ತುಸ ಕೆಲ್ಲ-ಬರೋ ವಾರ ಕಡಸ್ಥೆ ಕಲಗು ಉಲ್ಲು ಕಮ್ಮಿ ಆಕಿ, ಒಂದು ನಾಕೈದು ಜಿನ ನವುದು ನಾಚಾರಾಗ್ನಿ ದನ. ಇಲ್ಲೇವೋದೆ, ಗಬ್ಬ ನಿಲ್ಲಕಿಲ್ಲ ಅನ್ನಾದು ನಿಮಗೂ ಗತತೇ ಅದಲ್ಲ....? ನೀವೋಟು ಮಾಡಿ. ಆಮ್ಯಾಕೆ ನಾನೇ ಬಂದು ಇದ್ದ ಚೌಡೀಪುರಕ್ಕೆ ಅಟ್ಟಗಂಡೋಗಿ ವೋರಿ ಕ್ವಡಿಸಿಗಂಬತೀನಿ.” ಲಕ್ಕ ಮಾತಾಡ್ತ ಇದ್ದಂಗೆ ಬೀದಿ ಬಾಗ್ಲ ತಟ್ಟಿದ ಸದ್ದಿ!... "ರುಕ್ಕಿಣಿ, ರುಕ್ಕಿಣಿ” ಅಂತ ಯಾರೋ ಕೂಗು!... - “ಮಾವಯ್ಯ ಬಂದರು ಎಂದು ಕಾಣುತ್ತೆ, ಹಾಗೇ ಕೊಟ್ಟಿಗೆ ಕಸ ತೊಡೆದು ಹೋಗಪ್ಪ, ಆ ಸೊಸಿಯ ಈಗಲೂ ಬರದೇ ಹೋದರೆ ಮತ್ತೆ ನೀನೇ ಬಂದು ಈ ದಿನ ಕಾಡಿಗೆ ದನಗಳನ್ನ ಅಟ್ಟಿಕೊಂಡು ಹೋಗಬೇಕಾದೀತೋ ಏನೋ ಎಂದವಳೇ ರುಕ್ಕಿಣಿ ಮನೆಯೊಳಗೆ ನಡೆದಳು. ಕ್ವಿಟ್ಟಿಗೇಲಿ ಒಂದರ ಪಕದಲ್ಲೊಂದು ಕಟ್ಟಾಕಿದ್ದ ಏಡು ಗೋವು ಹಾದಾಡಕ್ಕೆ ಮುಟ್ಟಿಕಂಡದ್ದೂ, ಸೂರಿಗೆ ಸಿಕ್ಕಿದ್ದ ಕೋಲು ಇರುದು ಏಡಕ್ಕೂ ಪಟ್ಟಾಗಿ ಬಿದ್ದು ಇತ್ತ ಅಟ್ಟಕಂಡೋಗಿ ದೂರದೂರಕಿದ್ದ ಗೂಡಗಳೆ ಆವೇಡ್ಕ ಕಟ್ಟ, ಆ ಮ್ಯಾಕೆ ಕ್ವಟ್ಟಿಗೆ ವೊಳುಗಿದ್ದಯೆಲ್ಲ ಎಮ್ಮೆ ದನಕರನೂವೆ ವೊಡಕಂಡೋಗಿ ಕಟ್ಟೋ ಜಂಬರ. ಅದು ಮೂಗೀತು ಅಂದ್ರೆ ಕಸಾವ ಬಾಚಿ, ಬಿದಿರು ಮಂಕರಿಗೆ ತುಂಬಿ, ತಿಪ್ಪೆ