________________
೨೧೪ ವೈಶಾಖ ಮಾಡಿತ್ತು. ಈ ಉಲಿಗುತ್ಯ ಮೂಡಲ ಚೋರಿ ಬಾಯಿ ತೆರೆಕಂಡಿದ್ರಿಂದ, ಮೂಡಲ ಮಳೆ ಒಂದ ಬುಟ್ಟರೆ, ಬ್ಯಾರೆ ಕಡಿಂದ ಹುಯ್ಯೋ ಮಳೆಗೆ ಇದರೊಳ್ಳೆ ನೆನಿತಾನೆ ಇರನಿಲ್ಲ. ಕಳ್ಳರು, ಕಾಕರು, ದನ ಕಾಯೋರು ಈ ಗುತ್ತಿ ವಳುಚೋರಿ ಬೆಂಕಿ ಅತ್ತಿಸಿ, ಮಳೆ ವ್ಯಾಳ್ಯದಲ್ಲಿ ಬೀಡಿ ಅಚ್ಚಿಕೊಂಡು, ಬೆಂಕಿ ಕಾಯ್ತಾ ಕುಂತುಗತ್ತಿದ್ರು... ಈ ಉಲಿಗುತ್ತಿ ವಳೀಕೆ ನಮ್ಮ ತೆಲ ಇನ್ನೊದರ ಮಳುಗೇಯ, ಗಂಗಿ ನಾನು ಏಡು ಹೈಕಳೂವೆ ನೆಂದು ಪಜ್ಜಿ ಆಗಿದ್ದೋ... ಇದು ಮೂಡಲ ಮಳೆ ಆಗಿದ್ರಿಂದ, ಮೂಡಲ ಗಾಳಿ ರೊಯ್ ಅಂತ ಒಂದೊಂದು ದಪ ಬೀಸಿದಾಗ್ಯೂವೆ, ಒಂದೊಂದು ಸರವು ಮಳೆಯ ನಮ್ಮಿಬ್ಬರ ಮ್ಯಾಲೂ ಚಕ್ಕನೆ ಕೇರಿದಂಗೆ ಆಗೋದು... ಥಂಡಿ ಗಾಳಿ ಬೀಸಿತೊಂದ್ರೆ, ನೆಂದೋಗಿ ಕುಂತಿದ್ದ ನಾವಿಬ್ಬರೂವೆ ಚಳಿ ತಡಿನಾರೆ ಗಡ ಗಡ ನಡುಗಿನ, ಕಟಕಟ್ಟೆ ಹಲ್ಲು ಕಡಿಯೋವಂಗಾಯಿಯ್ಯ.... ಗಂಗಿ ಅಂಗೆ ನ್ಯಾಡಿದ್ದು. ಇಂಗೆ ಸ್ವಾಡಿದ್ದು. ಮಳೆನಿಲ್ಲೊ ಸುಳುವೆ ಕಾಣನಿಲ್ಲ. “ಆಸ್ಸ್ಸ್ ಯೇನು ಚಳಿ, ನಾ ತಡಕೋನಾರಿ” ಅಂದೋಳು, ನನ್ನ ತಬ್ಬಿಕಂಡು ಕೇಳೀಕೆ ಕೆಡವಿ ನನ್ನ ಮ್ಯಾಲೆ ಮನಗಿ, “ಇದೇನ ನೀ ಮಾಡ್ತಿರಾದು ಬ್ಯಾಡ, ಬ್ಯಾಡ” ಅಂತಿದ್ರೂವೆ, ನನ್ನ ಚಡ್ಡಿ ಗುಂಡಿ ಬಿಚ್ಚಿ, ತನ್ನ ಲಂಗೆತ್ತಿ ಉಜ್ಜಕ್ಕೆ ಮುಟ್ಟಿಕೊಂಡ್ಲು... ಗಂಗಿ ಆಗ್ಗೆ ಮಯ್ಯ ನೆರೆಯಕ್ಕೆ ಬಂದಿದ್ದಳು. ಅವುರಟೀಲಿ ಮಸ್ತು ಕರಾವು. ಕಾಂದಾರಿ ಎಣ್ಣುಗೊಳಂಗೆ ಕೊದಾರಿಯಾಗಿ ಬೆಳುಕಂಡಿದ್ದು..... ತೀಟೆ ತಡೀನಾಗ್ಗೆ ಇಂಗೆ ಅವಳು ಉಜ್ಜುತ್ತಾ ಇರಬೇಕಾದ್ರೆ, ನಂಗೆ ಉಚ್ಚೆಗೆ ಅವಸರಾಗ ಚಿರಕಿವೊಡದಂಗೆ ಮ್ಯಾಕಮುಖನಾಗಿ ಲೋಳ್ಳನೆ ಹುಯ್ದು ಬುಟ್ಟೆ.... ಆ ಸಂಯ ನೆನೀತಿದ್ದಂಗೆ ಲಕ್ಕನಿಗೆ ಎಂಗೆಂಗೋ ಆಯ್ತು!... ಇನ್ನೂ ಕಾಡನ್ನು ದಾಟಿರಲಿಲ್ಲ. ಮಳೆ ನಿಂತಿತ್ತು ಆಗಳೆ ಉದಯವಾಗಿದ್ದ ಸೂರ್ಯ, ಚದರುತ್ತಿದ್ದ ಮೋಡಗಳ ಅಂಚಿಗೆ ಬೆಳ್ಳಿಯ ಲೇಪ ಮಾಡಿ, ಮೇಲೆ ಮೇಲೆ ಏರುತ್ತಾ ಇದ್ದ. ಮಳೆಯಲ್ಲಿ ಮಿಂದ ಅಡವಿ ಬೆಳಗಿನ ಪ್ರಭೆಯಿಂದ ಹೊಸ ಕಾಂತಿಯನ್ನು ವಡೆದಂತಿತ್ತು. ಆದರೆ ರುಕ್ಕಿಣಿಗಾಗಲಿ, ಲಕ್ಕನಿಗಾಗಲಿ ಆ ಹಸರು ಸೌಂದರ್ಯದತ್ತ ದೃಷ್ಟಿ ಹೊರಳಲಿಲ್ಲ. ಅವರಿಬ್ಬರೂ ಅನಿರೀಕ್ಷಿತವಾಗಿ ನಡೆದುಹೋದ ಪ್ರಸಂಗದಿಂದ ವಿವಶರಾಗಿ ಚಿಂತಿಸುತ್ತ ಸಾಗಿದ್ದರು. ಲಕ್ಕನಿಗೆಆಗಬಾರದ್ದು ಆಗೋಯ್ತ-ಮುಂದಕೇನೋ? ಎಂಬ ಕಳವಳ... ರುಕ್ಕಿಣಿಯ ಅಂತರಂಗವೂ ತೀವ್ರತಮವಾದ ಕೋಭೆಗೆ ಒಳಗಾಗಿತ್ತು-ಶಾಸ್ತ್ರಿಗಳು ಕೆದಕಿ ಕೆರಳಿಸಿದ ಅಂದಿನಿಂದ ಅವಳ ನರನರವೂ ಉದ್ರೇಕಗೊಂಡಿತ್ತು. ಒಳಗೊಳಗೇ ತನಗರಿವಿಲ್ಲದಂತೆಯೇ ಉಪಶಮನಕ್ಕಾಗಿ ಹಂಬಲಿಸುತ್ತಿತ್ತೇನೋ... ಆದರೆ ಇದರ