ಪುಟ:ವೈಶಾಖ.pdf/೨೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಮಗ್ರ ಕಾದಂಬರಿಗಳು ೨೧೫ ಪರಿಣಾಮ ಎನಾಗುವುದೊ ಎಂಬ ವಿಚಾರ ಸುಳಿಯಿತು, ತಲ್ಲಣಗೊಂಡಳು.... ಓ ಎಂಥ ಕೆಲಸ ಮಾಡಿಬಿಟ್ಟೆ? ಎಂಥ ಅಚಾತುರ್ಯವಾಯತು?...' ಎಂದ ಪಶ್ಚಾತ್ತಾಪದಲ್ಲಿ ಬೆಂದಳು. ಕಾಡನ್ನು ದಾಟಿದೊಡನೆಯ ಲಕ್ಕೆ ಎತ್ತುಗಳನ್ನು ದೌಡಾಸಿದ. ಆರತಕ್ಷತೆ ಇನ್ನೇನು ಶುರುವಾಬೇಕು ಎನ್ನುವಷ್ಟರಲ್ಲಿ ಅವರು ಭೀಮನಳ್ಳಿಯನ್ನು ತಲುಪಿದ್ದರು. “ಬರ್ತೀಯೊ ನಿಲ್ಲವೊ ಅಂದುಕೊಳ್ತಾ ಇದ್ದೆ... ಸದ್ಯ, ಬಂದೆಯಲ್ಲ ಎನ್ನುತ್ತ ಅಕ್ಕ ಪಾರ್ವತಿ ಉಕ್ಕುವ ಪ್ರೀತಿಯಿಂದ ಅಲಂಗಿಸಿ, “ಮಾವಯ್ಯ ಆರೋಗ್ಯವಾಗಿದ್ದಾರೆ ತಾನೆ?” - ಕುಶಲ ಪ್ರಶ್ನೆ ಮಾಡಿದಳು. ಹೌದೆನ್ನುವಂತೆ ರುಕ್ಕಿಣಿಯು ತಲೆಯಾಡಿಸಿದಾಗ “ಯಾಕೆ ರುಕ್ಕೂ ಕೊಂಚ ಕಂಗೆಟ್ಟಿರುವ ಹಾಗೆ ಕಾಣುತ್ತಲ್ಲ?... ಮೈಯಲ್ಲಿ ಸ್ವಸ್ಥ ಇಲ್ಲವೆ?.... ಏನು ಸಮಾಚಾರ?” ಪಾರ್ವತಿಯು ಲೋಕಾಭಿರಾಮವಾಗಿ ಪ್ರಶ್ನಿಸಿದ್ದಳು. ಹಾಗೆ ಕೇಳಿದವಳು, ಪುಣ್ಯಕ್ಕೆ ರುಕ್ಕಿಣಿಯ ವದನವನ್ನು ಅವಲೋಕಿಸುತ್ತ ನಿಲ್ಲದೆ, ಎತ್ತುಗಳನ್ನು ಬಿಚ್ಚುತ್ತಿದ್ದ ಲಕ್ಕನ ಕಡೆಗೆ ತಿರುಗಿ, “ಹಿತ್ತಲಲ್ಲಿ ನಮ್ಮಾಳು ಚೋರಕ ಇದ್ದಾನೆ. ಅವನ ಕೈಗೆ ನಿಮ್ಮೆತ್ತುಗಳನ್ನು ಕೊಡು. ಅವನು ಎತ್ತುಗಳನ್ನು ಕಟ್ಟಿಹಾಕಿ ಅವಕ್ಕೆ ಹುಲ್ಲು ನೀರು ಕೊಡ್ತಾನೆ” ಎಂದವಳೆ, “ಹಾಗೇನೆ ಕೈಕಾಲಿಗೆ ನೀರು ಈಸುಕೊ. ಹೊಟ್ಟೆಗೆ ಏನಾದರೂ ತಗೊಳ್ಳವಂತೆ” ಎಂದಳು. ಲಕ್ಕ ನಿರುತ್ಸಾಹದಿಂದ, “ಯೇನು ಬ್ಯಾಡಿ, ಅಮ್ಮಾರೆ. ನಾ ನಮ್ಮೊರೇ ವೊಡ್ತೀನಿ” ಅಂದ. “ಚಿ, ಚಿ! ಎಲ್ಲಾದರೂ ಉಂಟೇನೊ, ಇವತ್ತು ನಮ್ಮ ಮನೆಯಲ್ಲಿ ಮಂಗಳಕಾರ್ಯ. ನೀನು ಇವತ್ತು ಇಲ್ಲೇ ಹೋಗಬೇಕು” ಪಾರ್ವತಿ ಒತ್ತಾಯ ಮಾಡಿದಳು. “ಇಲ್ಲ ಅಮ್ಮಾರೆ, ನಾ ವೋಗಲೇ ಬೇಕು. ನಮ್ಮಯ್ಯಂಗೆ ಏಡು ಜಿನದಿಂದ ಜರ.”- ಸುಳ್ಳಿನ ಮರ ಬಿದ್ದಿದ್ದ ಲಕ್ಕ. “ಅಯ್ಯಯ್ಯೋ, ಇದೇನೂ ನೀನು ಹೇಳಿರೋದು? ಮಂಗಳಕಾರ್ಯ ಮುಗಿಯುವವರೆಗೂ ನೀನು ಇದ್ದೀಯ, ಕಾರ್ಯ ಮುಗಿದ ಕೂಡಲೆ, ಅಕ್ಕ ಪಕ್ಕದ ಹಳ್ಳಿಗಳಿಂದ ಬಂದಿರುವ ನಮ್ಮ ನೆಂಟರಿಷ್ಟರನ್ನ ನಿನ್ನ ಗಾಡಿಯಲ್ಲೆ ಕಳಿಸೋಣ, ಎಂತಿದ್ದೆನಲ್ಲೋ?” ಎಂದು ಪಾರ್ವತಿ ಪೇಚಾಡಿದಳು,