ಪುಟ:ವೈಶಾಖ.pdf/೨೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಮಗ್ರ ಕಾದಂಬರಿಗಳು ೨೧೭ “ಯಾಕೆ ಬೆಳಿಗ್ಗೆ ಸ್ನಾನ ಮಾಡಲಿಲ್ಲವೆ?...” ಎಂದು ಅನ್ಯಮನಸ್ಕಳಾಗಿ ಪ್ರಶ್ನಿಸಿದಳು. ಅಲ್ಲಿಗೆ ಬಂದ ನೆಂಟತಿಯೊಬ್ಬಳಿಗೆ “ನಮ್ಮೆಜಮಾನರಿಗೆ ರುಕ್ಕು ಬಂದಿದ್ದಾಳೆ ಎಂದು ತಿಳಿಸು” ಎಂದು, ನಂತರ ರುಕ್ಕಿಣಿಯತ್ತ ತಿರುಗಿ ನೋಡಿ, - “ಇಲ್ಲ, ನೀನು ತೀರ ತೆಗೆದುಹೋಗಿರುವ ಹಾಗಿದೆ, ರುಕ್ಕು...” ಎನ್ನುತ್ತಿರುವಂತೆ, ರುಕ್ಕಿಣಿಯು-ನೆನೆದಿದ್ದೀನಿ. ಏನೋ ಮುಜುಗರ. ಮತ್ತೆ ಸ್ನಾನ ಮಾಡಿದರೆ ಎಷ್ಟೋ ಹರ್ಷ ಆಗುತ್ತೆ.” ರುಕ್ಕಿಣಿ ವಿವರಣೆಯಿತ್ತಳು. ಆಗ ಕಣ್ಣಿಟ್ಟು ಸರಿಯಾಗಿ ರುಕ್ಕಿಣಿಯನ್ನು ನೋಡಿದಳು ಪಾರ್ವತಿ. “ಅಯ್ಯಯ್ಯೋ, ನನ್ನ ಗಡಿಬಿಡಿಯಲ್ಲಿ, ನೀನು ನೆನೆದಿರೋದನ್ನೂ ನೋಡಿಲ್ಲ ನಾನು. ನಡಿ, ನಡಿ. ಹಂಡೆಯಲ್ಲಿ ನೀರು ಕಾಯ್ತಾನೆ ಇದೆ. ಬೇಗ ಬೇಗ ಸ್ನಾನ ಮಾಡಿ ಸಿದ್ಧವಾಗುವಿಯಂತೆ, ಬಾ...” - ತಂಗಿಯನ್ನು ಪ್ರೀತಿಯಿಂದ ತಬ್ಬಿ, ತಮ್ಮ ಮನೆಯೊಳಗೆ ಹೋಗುತ್ತ, ಪಡಸಾಲೆಯಲ್ಲಿ ಅಡ್ಡವಾದ ತನ್ನ ಯಜಮಾನರಿಗೆ, ಪಾರ್ವತಿಯು “ವಾಲಗದೋರು ಇನ್ನೂ ಬಂದೇ ಇಲ್ಲವಲ್ಲ” ಎಂದು ಆಕ್ಷೇಪಿಸಿದಳು. “ಅದನ್ನೇ ವಿಚಾರಿಸಲು ಹೊರಟೆ”- ಎಂದು ಚಂದ್ರಶೇಖರಯ್ಯ, “ಯಾಕೆ ರುಕ್ಕ-ಇಷ್ಟು ಕಂಗೆಟ್ಟು ಹೋಗಿದ್ದೀಯೆ?” ಎಂದು ಕೇಳಿದ. “ಕಾಡುಹಾದಿ, ಗಾಡಿ ಪ್ರಯಾಣ, ಕೊಂಚ ಬಳಲಿದ್ದಾಳೆ, ಅಷ್ಟೆ, ಈಗ ನೀವು ವಾಲಗದವರನ್ನು ಮೊದಲು ಹೋಗಿ ತರದೂದು ಮಾಡಿ ಕರೆದುತನ್ನಿ.” - ಅವಸರದಿಂದ ಹೇಳಿದ ಪಾರ್ವತಿ, ರುಕ್ಕಿಣಿಯನ್ನು ತ್ವರೆಯಿಂದ ಬಚ್ಚಲುಮನೆಗೆ ಕರೆದೊಯ್ದಳು. ಪಾರ್ವತಮ್ಮ ವತ್ತಾಯಕ ಯೇನೊ ಒಂದೇಟು ವೋಟ್ಟೆಗಾಕಿ, ಭೀಮನಳ್ಳಿಯ ಇಂದುಕಾಕಿ, ಲಕ್ಕ ಆಗ್ಗೆ ಕಾಡುಹಾದೀಲಿ ವಾಪಸಾಗ್ತಾ ಇದ್ದ. ಜ್ವತೆ ಬೊಡ್ಡ ನಗರ ಬತ್ತಿತ್ತು. ಆಗ್ಗೆ ಬಿಸುಲು ಯೇಗ್ತಾ ಇತ್ತು. ಇಂದಿನ ಜಿನ ಮಳೆ ಬಿದ್ರೆ, ಮಾರನೆ ಜಿನ ಕಾಡಲ್ಲಿ ನಡೆಯಕ್ಕೆ ಲಕ್ಕಂಗೆ ಯಾವೊತ್ತು ಉಮೇದೆ... ಆದರೆ ಆ ಸ್ವತ್ತು ಲಕ್ಕಂಗೆ ಯಾಕೊ ಬಿಡಬ್ಯಾಸರ, ಜೋಲು ವೊಕ ಅಕ್ಕಂಡು, ಆ ಮೆಳಿಂದ ಈ ಮೆಳೆಗೆ ಪತರ ಪುತರ ಸದ್ದು ಮಾಡ್ತ ಓಡೋಗೊ ಗೌಜಲಕ್ಕಿನೊ ಕಾಡುಕೋಳೀನೊ ಅಟ್ಟಾಡಕ್ಕೆ ವೊಂಟ ಬೋಡ್ಡನ್ನ ಒದ್ದು, ನಾಕೇಟು ಬಾರಿಸಿ, ಹೊಟ್ಟೆ ತುಂಬ ಬೋಗುಳ ಬಯ್ಯಕೊತ್ತ ಬತ್ತಾ ಇದ್ದ. ಆ ಸಮಯಕ್ಕೆ ಸರಾಗಿ