________________
೨೧೮ ವೈಶಾಖ ಯಾವುದೊ ಮರದ ಮ್ಯಾಗ್ನಿಂದ ಒಂದು ಹಕ್ಕಿ ಕೂಗಿ ದಂಗಾಯ್ತು: ಉಪ್ಪಲ ಸೆಟ್ಟಿ ಉಪ್ಪಲ ಸೆಟ್ಟಿ ನೀ ತರೆ ನಾ ಮರೆ... ಲಕ್ಕನ ಮನಸು ಒಂದು ಹೊಳ್ಳು ಹೊತ್ತು ಇಂದಿಂದೆ ಚಿಮ್ಮು... ಆಗಿನ್ನೂವೆ ಇಂಗೇಯ ಬತ್ತಾ ಇರಬೇಕಾರೆ, ಇಂತಾದ್ದೆ ಒಂದು ಸೋರೆ ಕಟ್ಟಿ ಹಕ್ಕಿ, ಸಮ ಸಮಾ ಇದೇ ಜಾಗದಾಗೆ ಇದೇ ತರ, ಇದೇ ವರಸೇಲಿ ಕೂಗ್ತಿತ್ತು... ಅದು ಗೆಪ್ತಿ ಆಯ್ತಿದ್ದಂಗೆ ಆ ಹಕ್ಕಿ ಸಂಗ್ತಿ ಗ್ಯಾಪನ ಆಯ್ತು: ಒಬ್ಬ ಉಪ್ಪುಲಸೆಟ್ಟಿ ಒಂದು ಇಂತಾ ಸೋರೆ ಕಟ್ಟನ್ನ ಇಡಿದು, ಅದರ ರೆಕ್ಕೆ ಪುಕ್ಕ ತರದಾಕಿ, ಅದ್ರ ತನ್ನ ಎಗುಲು ಮ್ಯಾಲೆ ಕುಂಡರಿಸ್ಕಂಡು, ಉಪ್ಪಿನ ಯಾಪಾರಕ್ಕೆ ಊರೂರು ತಿರುಗ್ತಾ ಇದ್ದಂತೆ. ಅವನೇನು ತಿಳುಕಂಡಿದ್ದ- ಈ ಹಕ್ಕಿ ರೆಕ್ಕೆ ಪುಕ್ಕ ತರದಾಕಿನ್ನಿ, ಇನ್ನು ಇದು ಹಾರಕ್ಕೆ ಇಲ್ಲ. ನನ್ನ ವಸದಲ್ಲೇ ಇದೆ. ಅಟ್ಟಿಗೆ ವೋದ ಮ್ಯಾಲೆ ನನ್ನ ಎಡತಿ ಕೈಯಲ್ಲಿ ಇದ ಬೇಯಿಸಿ, ಪಳಿ ಮಾಡಿ ತಿನ್ನಬೇಕೂಂತ ಲೆಕ್ಕ ಆಗಿದ್ದ. ಆದ್ರೆ ಕಾಲ ಕಳದಂಗೆ, ಇಂಕರ ಇಂಕರಾಗಿ ಆ ಹಕ್ಕಿಯ ರೆಕ್ಕೆ ಪುಕ್ಕ ಬೆಳೀತ ಮೋದೊ. ಒಂದು ಜಿನ, ಪೂರಾ ಬೆಳುದ ಮ್ಯಾಗೆ, ಆ ಸೋರೆಕಟ್ಟ ಆ ಉಪ್ಪಲ ಸೆಟ್ಟಿ ಹೆಗಲ ಮ್ಯಾಗಿನಿಂದ ಮ್ಯಾಕ್ಕೆ ಹಾರಿ, “ಉಪ್ಪುಲ ಸೆಟ್ಟಿ, ಉಪ್ಪಲ ಸೆಟ್ಟಿ-ನೀ ತರೆ, ನಾ ಮುದ್ರೆ...” ಅಂತ ಈಯಾ ವೊಂಟೋಯ್ತಂತೆ... ಲಕ್ಕ ಈ ಇಸಯಾನೆ ಮೆಲುಕಾಕ್ತ ಬತ್ತಾ ಇದ್ದ. ಭೀಮನಹಳ್ಳಿಲಿ ವೊಟ್ಟಿಗೆ ಪುಟ ಬಲವಾಗಿ ಬಿದ್ದಿತ್ತಲ್ಲ. ಆ ಮೇಕಿನಲ್ಲಿ ಒಂದು ವರಸೇಲಿ ಕುಲುಕುಲುಕ ಜೊತೇಲಿ ಬತ್ತಿದ್ದ ಬೊಡ್ಡ, ಇದ್ದಕ್ಕಿದ್ದಂತೆ ಕಣ್ಣಿಗೆ ಕಾಣಿಸೆ, ಲಕ್ಕ “ಮಾಳತದ್ದು, ಯಾವ ಕಿರುಬನ ಬಾಯಿಗೆ ವೋಯ್ಯೋ.... “ಗೊಣಗ್ರ, ಹೊಳ್ಳಿ ಕ್ವಾಡ್ಡ, ಒಂದು ದಪ್ಪ ಹುರುಗಲು ಮರದ ಮೋಟು ಬೊಡ್ಡೆಗೆ ಕಾಲೆತ್ತಿ ಆರಾಮವಾಗಿ ಅದು ಉಚ್ಚೆ ಹುಯುತ್ತಿತ್ತು!- ಅದ್ರೆ ಸ್ವಾಗ್ತಿದ್ದಂಗೆ ಲಕ್ಕಂಗೆ ಇಂದ್ರೆ ಅಲ್ಲಿ ನಡೆದ ಒಂದು ಪರಸಂಗ ನೆಪ್ಪಾಯ್ತು: ತಾನು ಬಾಕಿ ದನ ಕಾಯೊ ಹೈಕಳ ಜತೆ ಇಂಗೇಯ ಇಂದುಕೊಂದು ಜಿನ ಬತ್ತಾ ಇದ್ದ. ಆಗ ಎತ್ತತ್ತಗೊ ಸ್ವಾಢ ಬತ್ತದ್ದ ಉಳಿಕೆ ಹೈಕಳು 'ಉಸ್' ಮಾಡಿ, ರಾಗ ತಗ್ಗುಸಿ, “ಅಲ್ಲಿ ಕ್ವಾಡ್ಗ ಅಪ್ಪಯ್ಯ!...” ಅಂತ ಬೆಟ್ಟು ಮಾಡಿ ತೋರಿದ್ರು, ಅದೇನಪ್ಪ ಅಂತ ತಿರುಗಿ ಕ್ವಾಡಿದ್ರೆ, ಯಾರಾದ್ರೂ ಬೆಪ್ಪಾಗೊ ಅಂತ