ಪುಟ:ವೈಶಾಖ.pdf/೨೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಮಗ್ರ ಕಾದಂಬರಿಗಳು ೨೧೯ ದುಸ್ಸಯವೆ.... ಮೈಗೆ ಹ್ವಾಸಾ ಸ್ಯಾಲೆಸುತ್ತಿ, ಕೈಯಿಗೆ ಮೊಕ್ಕೆಲ್ಲ ಅರಿಶಿಣ ತ್ವಡದು, ಅಣೆ ಮದ್ಯಕ್ಕೆ ರೂಪಾಯಿ ಅಗಲ ಕುಂಕಮ ಇಕ್ಕಂಡು, ತಲೆ ಕೆದರಿಕಂಡು, ಒಂದು ಎಂಗಸು ಕಣ್ಮುಚ್ಚಿ ಅಕ್ಕ ಪಕ್ಕ ಚಿಗುರತಾ ಇದ್ದ ಹುರುಗಲು ಮರದ ಬೊಡ್ಡೆಗೆ ಬೆನ್ನ ಮರುಗಿಸಿ ಕುಂತಿದ್ದಲು. ಅವಳ ಕುತ್ತಗೇಲಿ ಚೆಂಡು ಹೂವ್ರ ಹಾರ!... ಇದ್ಯಾಕಪ್ಪ ಇಲ್ಲಿ ಬಂದು ನಿದ್ದೆ ಮಾಡ್ತಿದ್ದಳು ಈವಮ್ಮ? ಅಂತ, ಒಬ್ಬ ಹೈದ ಮೆತ್ತಗಂದ. ಇಲ್ಲಿ ಯಾವೊ ಪಕ್ಕದ ಹಳ್ಳಿಯೋಳು ಇರಬೈದು, ಅಂತ ಇನ್ನೊಂದು ಹೈದ, ವೋಟ್ಟರಲ್ಲಿ ನಮ್ಮೆಲ್ಲಾರನೂವೆ ತಡೆದು ನಿಲ್ಲುಸಿ ಇನ್ನೊಂದು ಹೈದ ಯೋಲ್ಲ... “ಸತ್ಯಾಗಿ ಕ್ವಾಡುತ್ತ ಅವಳ ಸುತ್ತಾಲೂ ಎಂಗೆ ಕುರಿಗಳು ಸಾಲುಗಟ್ಟಿ ಕುಂತವೆ!... ಕುರಿ ಮೇಯಿಸಕ್ಕೆ ಬಂದೋಳು, ಅಂಗೆ ನಿದ್ದೆ ಜೋಂಪು ಅತ್ತಿ, ಆ ಮರದ ಬೊಡ್ಡೆಗೆ ವರುಗಿ ಕುಂತವೆ!” ನಾವೆಲ್ಲರೂ ಇನ್ನೂ ಸಮೀಪವೋಗಿ ನೋಡುದ್ರೆ, ಅವಳ ಸುತ್ತುಗಟ್ಟಿ ಅಷ್ಟು ದೂರಕೆ ಸಾಲಾಗಿ ರುಸಿಗಳಂಗೆ, ಆ ಕಾಡೋಕಾಗ್ಲಿ ಈ ಕಡೀಕಾಗ್ಲಿ ಇಂಕರಾನೂ ಮಿಸುಕಾಡ್ಡೆ ಕುಂತಿದ್ದೋವು ಕುರಿಗಳಲ್ಲ-ರಣಹದ್ದುಗಳು! ಅನ್ನೊ ಇಸ್ಯ ತಿಳೀತುನೂರಾರು ರಣದ್ದುಗಳು! ಇದ್ಯಾಕಪ್ಪ ಇಲ್ಲಿಗೆ ಬಂದು ಇಂಗೆ ಕುಂತವೆ?... ನಾವು ಹೈದಳೆಲ್ಲಾರು ಚಿಂತಿಸ್ತಾ ಇದ್ದಂಗೆ, ಕಾ ಕಾ ಕಾ ಅಂತ ಅತ್ತಿರದ ಮರದ ಮೈಲೆ ಕುಂತಿದ್ದ ಒಂದು ಕಾಗೆ ಕೂಗು, ಅದರ ಇಂದುಗುಟ್ಟಲೆ ಸುತ್ತಾ ಮುತ್ತ ಮರಗಳ ಮ್ಯಲೆ ಕುಂತಿದ್ದ ಕಾಗೆಗಳೆಲ್ಲ ಕಾ ಕಾ ಕಾ ಬಾಜಾ ಬಜಂತ್ರಿಯ ಬಜಾಯಿಸಕ್ಕೆ ಮುಟ್ಟಿಕಂಡೊ... ರಣದ್ದು ಮಾತ್ರ ಮಿಸಿಕಾಡ್ಡೆ ಕುಂತೇ ಇದ್ದೂ... ಇಂಗಿರೋನೂವೆ, ಅತ್ತಿರದ ಮರದ ಮಾಗೆ ಕುಂತ ಒಂದು ಕಾಗೆ ಮರದ ಮಾಗಿನಿಂದ ಹಾರಿ ಕೆಳಿಕೆ ಬಂತು. ಹೈಕಳು, ಇದೇನಪ್ಪಾಂತ ಉಸಾರಾಗಿ, ಇನ್ನೂ ಮುಂದಕ್ಕೆ ಚಿಗದು ನ್ಯಾಡುದ್ರೆ- ಆ ಯಮ್ಮನ ಮುಂದೆ ಒಂದು ದೊಡ್ಡ ಮೊನೆ ಬಾಳೆಲೆ ಆಸಿತ್ತು. ಅದರ ಮ್ಯಾಲೆ, ಅನ್ನದ ರಾಸಿ ಗೋಪುರ ಕಟ್ಟಿತ್ತು. ಆ ರಾಸಿ ಅಂಚಿಗೆ ಯೇನೇನೊ ಸೀ ಪದಾರ್ತ, ಚಿಪ್ಪು ಬಾಳೆ ಹಣ್ಣು, ತೆಂಗಿನಕಾಯಿ ಹೋಳು, ಕಡಲೆಪುರಿ, ಈಳ್ಯದೆಲೆ ಇವೆಲ್ಲ ಇದ್ದಂಗಿತ್ತು. ಆ ಮೊನೆ ಬಾಳೆಲೆ ವತ್ತಿಗೇಯ ಚರಿಗೆ ಗಾತ್ರದ ಹೈಸಾ ಮಡಿಕೇಲಿ ನೀರು ಬ್ಯಾರೆ ತುಂಬಿ ಇಟ್ಟಂಗಿತ್ತು.. ಇದ್ಯಾಕಪ್ಪ ಇವನೆಲ್ಲ ತಂದಿಟ್ಟಿರಾದು ಅಂತ ನಮಗೆ ಜೋಜಿಗ... ಅವಳೇ ತಿನ್ನಕೆ ತಂದು ಇಟ್ಟು ಕಂಡು ವೋಟರಲ್ಲಿ ಕಣ್ಣೆಗೆ ನಿದ್ದೆ ಅತ್ತಿ ಮನಗಿ ಬುಟ್ಟಿರಬೈದು, ಅಂತ ಒಂದುಕೊಂದು ತರ್ಕ ಮಾಡಿದೆ... ಯಾವ ತರ್ಕಕೂವೆ ಈ ಒಂಟು ಬಗೆ ಅರೀನೆ ಇಲ್ಲ!...