ವಿಷಯಕ್ಕೆ ಹೋಗು

ಪುಟ:ವೈಶಾಖ.pdf/೨೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨೨೦ ವೈಶಾಖ ಕಾಗೆ ಅತ್ತಾಗಿ ಇತ್ತಾಗಿ ಸೂಕ್ಷ್ಮಾಗಿ ಕ್ವಾಡಿ, ಯಾಕೊ ಮತ್ತೆ ಹಾರೋಗಿ ಮರದ ಮ್ಯಾಲೆ ಕುಂತಗತ್ತು, ರಣಹದ್ದುಗಳು ಚಿಂಕರಾನು ಮಿಸುಕಾಡ್ಡೆ ತೆಪ್ಪಗೆ ಕುಂತೇ ಇದ್ದೊ... ವಸಿ ವ್ಯಾಳ್ಯ ಇಂಗೇ ಕಳೀತು. ತಟ್ಟನೆ ಮೊದಲು ಕೆಳೀಕೆ ಇಳುದಿದ್ದ ಕಾಗೆ ಸರಕ್ಕನೆ ಮರದಿಂದ ಇಳುದು ಅನ್ನದ ರಾಸಿಗೆ ಬಾಯಾಕಿ, ಕೊಕ್ಕಿಗೆ ಸಿಕ್ಕಿದೋಟು, ಅನ್ನದ ಅಗಳ ಕಚ್ಚಿ, ಮರದ ಮಾಕ್ಕೆ ಹಾರೋಗಿ ತನ್ನ ಹಿಂದ್ದ ಜಾಗದಲ್ಲೆ ತಿಂತಾ ಕುಂತುಗತ್ತು... ಕಾಗೆ ಅಂಗೆ ಒಂದು ಅನ್ನದ ಅಗಳ ಎತ್ತಿಗಂಡೋದೂ ಎಚ್ಚರಗ್ಗೆ ಆರಾಮಾಗಿ ನಿದ್ದೆ ವೋಡೀತಿದ್ದ ಎಂಗಸಿನ ಭಯ ವಸಿ ತೆಪ್ತಿ, ಆ ಎಂಗಸಿನ ಸುತ್ತಾನೂ ಗುಂಡಗೆ ಕುಂತಿದ್ದ ರಣದ್ದುಗಳು ಒಂದಕ್ಕೊಂದು ಮಾತಾಡಿಕಂಡ ಪರೀಲಿ ಒಟ್ಟಿಗೇಯ ಒಂದು ಸಲ ತಂತಮ್ಮ ಮುಂದಕೆ ಕುಪ್ಪಿದೊ... ಆ ಕಾಗೆ ತಾನು ಎತ್ತಗಂಡೋಗಿದ್ದ ಅನ್ನದ ಅಗಳ ತಿಂದು ಮುಗುಸಿ, ಮತ್ತೊಂದು ಸರ್ತಿ ಹಾರಿ ಬಂದು, ಆಚೋರಿ ಈಚೋರಿ ಒಂದು ದಪ್ಪ ಕತ್ತು ಕೊಂಕಸಿ ನ್ಯಾಡಿ, ಇನ್ನೊಟು ಅನ್ನದ ಅಗಳ ಕಚ್ಚಿಗಂಡೋಯ್ತು ... ಅಲುಗಾಡ್ಡೆ ಕುಂತಿದ್ದ ರಣದ್ದುಗಳು ಗುಂಡಗೆ ಇನ್ನೊಂದು ಕುಪ್ಪು ಮುಂದಕೆ ಕುಪ್ಪುದೊ ಈಗ ಮಾತ್ರ ಬಾಕಿ ಕಾಗೆಗಳೂವೆ ಕಾ ಕಾ ಕಾ ಎಂದು ಕೂಗ್ಗ, ಒಂದೊಂದಾಗಿ ಏಡೇಡಾಗಿ ಸುತ್ತಾನೆ ಮರಗಳಿಂದ ಇಳುದು ಒಂದು ಅನ್ನದ ಅಗಳುಗಳ ತಂತಮ್ಮ ಕೊಕ್ಕಿನಲ್ಲಿ ಕಬ್ಬಿಕಂಡೋದೊ... ರಣದ್ದುಗಳು ಇನ್ನೂ ಒಂದು ಕುಷ್ಟು ಮುಂದಕೆ ಕುಪ್ಪುದೊ... ಪನಾ ಕಾಗೆಗಳು ಗುಂಪಾಗಿ ಇಳುದು ಬಂದು ಆ ಮೊನೆ ಬಾಳೆಲೆ ಮ್ಯಾಲಿದ್ದ ಉಳಿಕೆ ಅನ್ನ, ಸೀ ಪದಾರ್ತ, ಬಾಳೆಹಣ್ಣು, ತೆಂಗಿನ ಹೋಳು ಯೆಲ್ಲಾನೂವೆ ಲೂಟಿ ಮಾಡಿಕಂಡೋದೊ... ಕಾಗೆಗಳು ಎತ್ತಿಕಂಡು ವೋದಂಗೊದಂಗೆ ರಣದುಗಳೂವೆ ಇನ್ನೂ ಮುಂದಮುಂದೆ ಮುಂದಮುಂದೆ ಕುಷ್ಟತಾ ಕುಷ್ಟತಾ ನಡುದೊ... ತಾನು, ಹೈಕಳೂ ಎಲ್ಲಾರೂವೆ ಈ ಶೋಜಿಗಾವ ಉಸುರು ಕಚ್ಚಿ ಕ್ವಾಡ್ತಾ ಇದ್ದೂ, ನಾಕೈದು ಕಾಗೆಗಳು ಒಟ್ಟಿಗೇ ಮಡಿಕೆ ನೀರ ಕುಡಿಯಕ್ಕೋಗಿ ಮಡಿಕೆ ನೀರ ಉಂಟಿಸಿ, ಅದರ ಸುತ್ತ ಕದ್ರಕ್ಕೆ ಸುರುಮಾಡ್ಕೊ... ಇದ್ಯಾಪಾಟಿದೆಯ್ಯ ನಿದ್ದೆ ಅಮರಿಕಂಡದೆ ಈ ಎಂಗಸ್ಥೆ ಅಂತಾ ನಾವು ಬೆರುಗಾದೊ.