ಪುಟ:ವೈಶಾಖ.pdf/೨೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಮಗ್ರ ಕಾದಂಬರಿಗಳು ೨೨೧ ನಾವೆಲ್ಲಾರು ಕ್ವಾಡ ಗ್ವಾಡ್ತಿದ್ದಂಗೇಯ ಒಂದು ರಣದ್ದು ಸುಮಾರು ಒಂದು ಮುಕ್ಕಾಲು ಮಾರಿನೋಟು ಉದ್ದದ ತನ್ನ ರೆಕ್ಕೆಗಳ್ಳ ಕೆದರಿ, ಸಟ್ಟನೆ ಆ ಕುಂತಿದ್ದ ಎಂಗಸಿನ ಮೂಲೆ ಎರಗು, ಆ ಕ್ಷಣಕೆ ಆ ಎಂಗಸಿನ ದೇಯ ವಕ್ಕಡೀಕೆ ಮುಂಟಿಗಂತು!... ಆದ ಕಂಡು ನಮಗೆಲ್ಲ ದೊಡ್ವನಾಗಿದ್ದ ಹೈದ ಉಸುರ* ಆ ಎಂಗಸು ನಿದ್ದೆ ಮಾಡ್ತ ಇಲ್ಲ ಕನಲ್ಲ- ಅವಳು ಸತ್ತೋಗವಳೆ!... ಅದು ಅವಳ ಹೆಣ- ಇಲ್ಲದಿದ್ರೆ ಈ ಪಾಟಿ ಸದ್ದುಗದ್ದಲದಲ್ಲಿ ಅವಳು ಎಚ್ಚಾರಾಗ್ಗೆ ಇರಿದ್ದ?... ಆಲ್ಲದೇಯ ಆ ರಣದ್ದು ಅಂಗೆ ಮ್ಯಾಲೆ ಎಗರಿ ಬಿದ್ದರೂವೆ ಚಿಂಕರಾನು ಚೀರದೆ ಅಂಗೆ ಯಾರಾರು ಸುಮ್ಮೆ ಮಂಟಿಗಂಡಾರ?...” ಒಂದು ರಣದ್ದು ಎಗರಿ ಬಿದ್ದು ಅವಳ ಎದೆ ಗುಂಡಿಗ್ಯ ಕುಕ್ಕಿ ವೋಟು ಮಾಂವುಸವ ಆ ಗುಡಿಂಗ್ನಿಂದ ಕಿತ್ತ ಕಣಕೆ, ಅವಳ ಸುತ್ತಾಲು ಕುಂತಿದ್ದ ಎಲ್ಲಾ ರಣದ್ದುಗಳೂವೆ ನಾ ಮುಂದೆ ತಾ ಮುಂದು ಅವಂಗೆ ಗರಿಕೆದರಿ ಆ ಎಂಗಸಿನ ಹೆಣದ ಮ್ಯಾಲೆ ಎಗರಿ ಬಿದ್ದೊ. ಸಿಕ್ಕಸಿಕ್ಕದೋಟು ಮಾಂವುಸವ ಕಿತ್ತೊ. ಜಾಗ ಸಿಕ್ಕದೇ ವೋದಾಗ, ಕೀ ಕೀ ಕೀ ಅಂತ ಕೀರ ಕೀರಾಗಿ ಕಿರುಚ್ಚ ಒಂದಕ್ಕೊಂದು ಕಡಿದಾಡಿ ಮಡಿದ ಬೀಳ್ತಾ ಇದ್ರೂ... ಇದ ಕಂಡು ನಮಗೆ ಇನ್ನು ಅಲ್ಲಿ ನಿಂತು ಸ್ವಾರಕ್ಕಾಗನಿಲ್ಲ. ನಾವೆಲ್ಲಾರೂ ದನ ಅಟ್ಟಿಕಂಡು ಬಿದ್ದಂಬೀಳ ಒಂದೇ ಉಸುರೆ ವಟ ಹೃಡದೊ. ಅವತ್ತು ನಾತ್ರೆಗೆ ಆ ದೊಡ್ಡ ಹೈದ ವಿನಾಯ್ತಿ, ನಾನೂ ಸೇರಿದಂಗೆ ಐದು ಹೈಕಳಿಗೂ ಬೆಂಕಿ ಕಾದಮಗೆ ಜರ ಕಾಯ್ತು. ಎಂಟತ್ತು ಜಿನ ಬುಡನೇ ಇಲ್ಲ. ನಾವು ಹೈಕಳೆಲ್ಲ ಹೆಣಾವ ಆ ಪರಿಪಟ್ಲಲ್ಲಿ ಕಂಡು ಕಂಗಾಲಾಗಿದ್ದೊ. ನಾನಂತೂ ಹೆಣಾವ ಮೋಟು ಸಮೀಪ, ಅದೂ ಆ ಪರೀಲಿ ನಾಡಿದ್ದು - ಇದೇ ಮೊದಿ ಸಲ... ಜರದ ತಾಪದಲ್ಲಿ ನನ್ನ ಗ್ಯಾನ ಯಾತಾವು ಯಾತಾವೊ ಸುಳುದಾಡ್ತ ಇತ್ತು... ನಾನೊಂದು ಮರದ ಬೊಡ್ಡೆಗೆ ಅಂತು ಕುಂತಿರೋವಂಗೆ, ಸುತ್ತಾಲು ಗುಂಡಗೆ ಸದ್ದಿಲ್ಲೆ ತೆಪ್ಪಗೆ ಕುಂತಿದ್ದ ಆ ರಣದ್ದುಗಳು ವಸಿವಾಗಿ ಕುಷ್ಟುತಾ ಕುಷ್ಟುತ ಬಂದು, ಕಡೀಕೆ ಅವೆಲ್ಲಾ ಒಟ್ಟೋಟ್ಟಿಗೆ ತಮ್ಮ ರೆಕ್ಕೆಗಳ ವೋಟೋಟು ಅಗಲಕ್ಕೂ ಕೆದರಿ, ಗಕ್ಕನೆ ಮ್ಯಲೆರಗಿ, ನನ್ನ ಸರೀರದ ಮಾಂವುಸವ ಕುಕ್ಕಿ ಕುಕ್ಕಿ ತಿಂತಾ ಇದ್ದಂಗೆ ಕಂಡು ಕಿಟಾರೆ ಕಿರುಚ್ಚೆ!... ಅವ್ವ ಎದ್ದು, “ಯೇನಾಯಿತ್ತ ಮೊಗಾ?... ನಾ ಇಲ್ಲೇ ಇನ್ನಿ, ಎದುರಿಕೊಬ್ಯಾಡ ಮನಕ್ಕೊ” ಅಂತ ತಬ್ಬಿ ಕಂಡು ಮೈದಡವಿದ್ದು....