________________
ವೈಶಾಖ ತಾನು ಕಂಡದ್ದ ಕಂಡಂಗೆ ಎಲ್ಲಾ ನೂವೆ ಅವ್ವನ ಕುಟ್ಟೆ ಯೋಳಿ, “ಅದ್ಯಾಕವ್ವ ಅವಳ ಹೆಣವ ಅಂಗೆ ಕುಂಡರಿಸಿದ್ರು?” ಕೇಳಿದ್ದ. “ಬಿಮ್ಮಂಸೆ ಆದ ಎಂಗಸು ಸತ್ತರೆ, ಹೈಟೆ ವಳಗಡೆ ರೊ ಇನ್ನೊಂದು ಜೀವೊವೇ ಸತ್ತಂಗೆ ಅಲ್ವ?- ಅದುಕ್ಕೆ ಸುಮಾರು ಜಾತಿ ಜನ ಮಣ್ಣು ಬಗದು, ಅಂತಾ ಹೆಣವ ಹೂಳಕ್ಕಿಲ್ಲಕನಪ್ಪ- ಓದು ಪಕ್ಕಸ ಹೂತೆ, ಆ ಹೆಣವ ಹೂತ ಆಸುಪಾಸ್ಕಲ್ಲಿ ಮಳೆ ಬೆಳೆಯೇ ಅಗಕ್ಕಿಲ್ಲವಂತೆ!- “ಇಂಗೆಲ್ಲ ಇವರಿಸಿದ್ದಲು, ಅವ್ವ, ತನ್ನ ಅವ್ವ ಜಿನ ಯೋಳಿದ ಮಾತ್ರೆ ನೆನೀತ ದರಮನಳ್ಳಿ ಕಡೀಕೆ ಲಕ್ಕ ತನ್ನ ಪಯಣವ ಮುಂದುವರಿಸ್ತ, ಯತಾ ಪರ್ಕಾರ ಬೊಡ್ಡ ಅವನ್ನ ಇಂಬಾಲಿಸ್ತು. ಲಕ್ಕ ಕಾಡ್ನಿಂದ ಬತ್ತಾ ಇದ್ದಂಗೆ ಕೆಂಗಣಪ್ಪ ತನ್ನ ಹೊಲದ ಪಕ್ಕದ. ಬಯಲಲ್ಲಿ ಕುಂತು ಏನೊ ಅರಸ್ತಾ ಇದ್ದದ್ದು ಕಾಣಿಸ್ತು, ಲಕ್ಕ ಅದೇ ದಾರೀಲಿ ವೋಗಬೇಕಲ್ಲ! ಕೆಂಗಣ್ಣಪ್ಪ ಹದ್ದಿನ ಕಣ್ಣ ತೆಪ್ಪಸಿ ವೋಗೋವಂಗಿಲ್ಲ. ಸುಮಾಸು, ಬಂದದ್ದು ಬರಲಿ- ಅಂದು ನ್ಯಾರವಾಗಿ ಕೆಂಗಣ್ಣಪ್ಪ ಏನ್ನೋ ಅರಸ್ತಿದ್ದ ತಳಕ್ಕೇ ದ್ವಾದ. “ಆದೇನಯ್ಯ ಈಟೊಂದು ಬಗೇಲಿ ಉಡುಕ್ತಾ ಇದ್ದೀರಿ?... ಯೇನ್ನಾರ ಕಳಕಂಡ್ರ?” ಕೇಳ, “ಇಲ್ಲ ಕನ್ದ ಲಕ್ಕ ನಾ ಯೇನ್ನೂ ಕಳಕಂಡಿಲ್ಲ....” - “ಮಂತೆ, ಈ ಬಟಾ ಬಯಲಲ್ಲಿ ಯಾಕೆ ಇಂಗೆ ಕುಂತು ತಡಕಾಡ ಇದ್ದೀರಿ?” “ನಿಂಗೆ ಗ್ರಲ್ಲೇನ್ದ-ಪುರುಸರತ್ನ ತಡಕಾಡ್ತಾ ಇದ್ವಿ” “ಅದಾ?...” ಅಂತ ವಳವಳುಗೇ ಲಕ್ಕ ನಕ್ಕ, ದಾತು ರುದ್ದಿಗೆ ಕೆಂಗಣಪ್ಪ ಅಗಾಗ ಈ ಪುರುಸರತ್ನದ ಸೊಪ್ಪ ತಿನ್ತಾ ಇದ್ದದ್ದು ಲಕ್ಕಂಗೂ ಸ್ವತ್ತಿತ್ತು. “ಊ. ಅದೇಯ... ನನ್ನ ಜತೇಲಿ ಕುಂತು ಉಡುಕಾಡಿ ಈ ಮುರುಸರತ್ನದ ಸೊಪ್ಪ ವಸಿ ಜಮಾಯ್ತಿ ಕ್ವಡು, ಮತ್ತೆ, ಆಗ್ಲೀ ಬಿಸಿಲು ಏಕ್ತಾ ಅದೆ. ನಂಗೋಬ್ಬಂಗೇ ತಗ ಆಯ್ತದೆ.”- ಕೆಂಗಣಪ್ಪ ಇಂಗಂದು “ಅಂಗೇ ಆಮ್ಯಕೆ, ನಮ್ಮಟ್ಟಿ ತಾವಿಕೆ ತಿರುಗಾಡಿಕಂಡು ಬಾ. ನನ್ನೆಡತಿ ಕಜ್ಜಾಯ ಮಾಡವಳೆ” ಅಂದು ಮಸಿ ಮಾಡ. ಕಜ್ಜಾಯ ಅಸೀದೊ, ಬಿಸಿದೆ- ಅನ್ನೋ ಮಾತು ನಗ ಬೆರಕ್ಕಾಗಿ ಲಕ್ಕನ ನಾಲಿಗೆ ಮ್ಯಲೆ ಉಳ್ಳಾಡಿತೆ ವಿನಾ ತುಟಿಯಿಂದಾಚೆ ಹೊಳ್ಳನಿಲ್ಲ.... ಗೌಡ ಗ್ಯಾಗರೀತ ಅವೆ. ಅಲ್ಲದೇಯ ಇಂದುಕೆ ಬಾಲ್ಯದಲ್ಲಿ ಅಮ್ಮ ಅಟ್ಟೇಲಿ ಜೀತಕೆ