ಪುಟ:ವೈಶಾಖ.pdf/೨೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಮಗ್ರ ಕಾದಂಬರಿಗಳು ೨೨೩ ಇರನಿ, ತಾನು?- ತುಸ ವೊತ್ತು ಜ್ವತ್ಯಾಗಿ ಕುಂತು ಒಂದೋಟು ಸೊಪ್ಪು ಕಿತ್ತುಕೊಟ್ಟರೆ, ಅದ್ಯಾವ ಸಾಮ್ರಾಜ್ಯ ಕಳುದದು?... ಅಲ್ಲದೇಯ ಈ ಗಾಟಿ ಗೌಡ ಈಟು ಸಣ್ಣ ಇಸ್ಯಕ್ಕೆಲ್ಲ ಯಕೆ ಯೆದುರಾಕೊಬೇಕು? ಇಂಗೆ ಚಿಂತುಸಿ, ಆ ಬಯಲಲ್ಲಿ ಲಕ್ಕ ಪುರುಸರತ್ನವ ತಾನೂ ಅರಸ್ತ ವೊಂಟ ಗೌಡ ಸಂತುರುಪ್ತನಾಗಿ ಕುಂತ ತನ್ನ ಉಡುಕಾಟದವ ಮುಂದುವರಿಸ್ಥ. ಗರಿಕೆ ಅಂಗೇ ಇದ್ದು ಪುಟಾಣಿ ನಕ್ಷತ್ರದ ತರ ಹೂವು ಇರೊ ಪುರುಸರತ್ನ ಸೊಪ್ಪ ಕುಕ್ಕರಗಾಲ್ನಲ್ಲಿ ಕುಂತು ಕೀಳ, “ಇನ್ನೇಟು ಪುರುಸರತ್ನ ತಿಂದರೆ ತಾನೆ ಈವಯ್ಯ ಎಂದೊ ವೊಂಟೋದ ಪುಂಸತ್ವ ವಾಪಸು ಬಂದಾತು?'- ತನ್ವಳಗೇ ಯೋಳಿಕೊಂಡು ನಗಡ್ಡ, ಮತ್ತೆ ಆಪಾಟಿ ಗ್ಯಾನಗೆಟ್ಟು ಆಟ ಆಡಿದರೆ ಯಾವ ಪುಂಸತ್ವ ತಾನೆ ಅದೇಟು ಜಿನ ಉಳುದಾತು?... ಮೊದ್ದೆ ಯೋಳಕ್ಕಿಲ್ಲಾ ಗಾದ್ಯ- ಅನ್ನ ಅದೆ ಅಂತ ಉಂಡೋನು ಕೆಟ್ಟ, ಎಣ್ಣು ಅವಳ ಅಂತ ಮೋದೋನು ಕೆಟ್ಟ, ಅಂತಾವ!...' ಅಂದುಕೊತ್ತ ಇದ್ದಮಗೆ, ಗೌಡ್ರ ಅಟ್ಟಿಲಿ ತಾನು ಜೀತಕ್ಕಿದ್ದ ದಿನಗಳು ಗ್ಯಾಪನ ಅದೊ: ಅದರಾಗು ಒಂದು ಜಿನ ಗೌಡನ ಎಡತಿ ತೌರಿಗೋಗಿದ್ದು. ಲಕ್ಕ ಅಟ್ಟ ವಳುಗಡೆಗೆ ಇದ್ದ ಕಟ್ಟಿಗೆ ಅಂಚಿಗೆ, ವಳುಗಿನ ಜಗತಿ ಕೈಪಿಡಿ ಪಕ್ಕದಾಗೆ ಮನಗಿದ್ದ. ಇನ್ನೊಟ್ಯೂರಿ ದನ ಕರ ಕಟ್ಟಾಕಿತ್ತು. ಎಡತಿ ಇಲ್ಲದಿದ್ದಾಗ ಕೆಂಗಣ್ಣಪ್ಪ ಅಟ್ಟ ವಳುಗಡೆ ಜಗತಿ ಮ್ಯಾಲೇ ಮನಗ್ಗಿದ್ದ... ಮೊಖದ ತುಂಬ ಕಂಬಳಿ ಕವುಚಿ ಮನಗಿದ್ದ ಲಕ್ಕಂಗೆ ಅದ್ಯಾವ ಮಾಯದಲ್ಲಿ ನಿದ್ದೆ ಬಂತೊ, ಸ್ವತ್ತಿಲ್ಲ. ಮಕಾಡಿ ಮನಗಿದ ವಸಿ ವೊತ್ನಲ್ಲೆ ಇರಬೇಕು, ಯರೊ ಉದ್ದುದ್ದಕೆ ತನ್ನ ಮಯ್ಯ ಮ್ಯಾಲೆ ಭಾರ ಹೇರಿ ಮನಗಿದಂಗಾಯ್ತು!... ಎಚ್ಚರಾದರೂವೆ ಕಣ್ಣು ಮಾತ್ರ ತೆರೀನಿಲ್ಲ. ಎದರಿಕೆ. ಯವುದೊ ಪಿಶಾತಿ ಬಂದು ಹೇರಿಕಂತು ಅಂತ ಲಕ್ಕ ಬೆಮತೋದ... ಆದ್ರೆ, ಆ ಹಾಳು ಪಿತತಿ ತನ್ನ ಚಡ್ಡಿ ಯಾಕೆ ಬಿಚ್ಚಬೇಕು?- ಅರ್ತವೆ ಆಗದೆ ಕಣ್ಣು ಮುಚ್ಚಿದಂಗೇಯ ಅಲ್ಲು ಮರಿ ಕಚ್ಚಿ, 'ಜಡೆಮುನಿ, ಕಾಪಡಪ್ಪ' ಅಂತ ಮನದಾಗೆ ಪ್ರಾರ್ತನೆ ಮಾಡ್ತ ಸುಮ್ಮನೆ ಬಿದ್ದುಕಂಡ... ಥೋ, ಇದೇನ- ಕುಂಡಿ, ಒಳತೊಡೆಯೆಲ್ಲನು ತಣ್ಣಗಾಯ್ತು ಅದಲ್ಲ... “ನಾನೇ ಕಗ್ಗ-ಗಾಬರಿ ಬೀಳಬ್ಯಾಡ”- ಪುಸಿ ಮಾಡ್ತ ಗೌಡ ಕಂತು ಗಂಡು ತನ್ನ ಟುವಿಂದ ಕುಂಡಿ ವರುಸ್ತಾ ಇದ್ದ... ಲಕ್ಕ ತಟಕ್ಕೆ ಎದ್ದು ಕುಂತು ಅಳಕ್ಕೆ ಸುರು ಮಾಡ್ಡ... ಗೌಡ ಲಕ್ಕನ ಕೆನ್ನೆ ಸವರ,