ವಿಷಯಕ್ಕೆ ಹೋಗು

ಪುಟ:ವೈಶಾಖ.pdf/೨೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಮಗ್ರ ಕಾದಂಬರಿಗಳು ୬୬୪ ಕಾರಣ ಲಕ್ಕಂಗೆ ಜ್ವಳುದೋಯ್ತು . ಕೆಂಗಣಪ, ಲಕ್ಕ ಇಬ್ಬರೂವೆ ವೋಲಗೇರಿ ಸಮೀಪ ಬರೋ ವ್ಯಾಲ್ಯಾಕ್ಕೆ ಟಗರೂರನ ಗುಡ್ಡ ಮುಂದೆ ಐದೂರು ಯಜಮಾನ್ತು ಘೋರಾಯಿಸಿದ್ರು, ಕೆಂಗಣಪ್ಪ ಆ ಕಡೆ ಒಂದಾವರ್ತಿ ದುಸ್ಸಿ ಹಾಯ್ದಿ. “ಯಾನೊ ಪಂಚಾತಿ ಅಂತ ಕಾಣುಸ್ತದೆ ಕನ್ಯ. ಈ ಜನಕೆ ಇನ್ನೇನು ಕೇಮೆ. ಇವರ ಮ್ಯಾಲೆ ಅವರ ತಳ್ಳಿ, ಅವರ ಮ್ಯಾಲೆ ಇವರ ತಳ್ಳಿ, ತಮ್ಮ ಕಯ್ಯ ಕಾಯಿಸ್ಕಳಾದು” ಎಂದು ಮರುಸರತ್ನವ ಬಾಯಲ್ಲಿ ಮಣಕಿಸ್ತ ಹೊಂಟೇ ವೋದ. “ಅಟ್ಟಿಗೆ ಬಾರ, ಕಜ್ಜಾಯ ಮಾಡವ್ವ ನನ್ನೆಡತಿ"ದ ಮಾತು ಆ ಬಯಲಿಗೇ ಬಿದ್ದೋಯ್ತು. ಲಕ್ಕಂಗೆ ಮಾತ್ರ ಜೀವ ತಡೀನಿಲ್ಲ. ಸಾದಾರಣಕೆ ಪಂಚತಿ ಸೇರಿದ್ದುದ್ದು ಊರ ನಡುತಾವಿನ ಚಾವಡೀಲಿ. ಈಗ ವೋಲಗೇರಿಗೇ ಯಾಕೆ ಬಂದವೆ, ಈ ಜಯಮಾನು?- ಯಾನೊ ಗನವಾದ ಇಸಯವೆ ಇರಬೈದು ಅಂದುಕೊತ್ತ, ಯಜಮಾನ್ನು ಜಮಾಯ್ದಿರೊ ಕಡೀಕೆ ವೋದ. - ಟಗರೂರ ತಲೆಯ ಮಂಡಿಗೆ ಹೆಟ್ಟಿ ಕುಕ್ಕರಿಸಿ ಕುಂತಿದ್ದ. ಅವನೆ ಮೂರು ಮಾರು ದೂರದಲ್ಲಿ ಗುತ್ತು ತಡಿಕೆ ವರಿಕ್ಕಂಡು ಅವ್ರ ಹೊಲತಿ ಹುಚ್ಚು ಬೊರಿ ಸ್ವಾಲೆ ಸೆರಗಿನ ತುದಿಯ ಉಂಡೆ ಮಾಡಿ ಬಾಯೋಳಿಕೆ ಸೆಕ್ಸಿ ದುಡಿಸಿದ್ದು. ಕೇಮೆಗೆ ಇನ್ನೂ ವೊಗದಿದ್ದ ಹೋಲಗೇರಿ ಎಂಗಸರು ತಂತಮ್ಮ ಗುಡ್ಲು ವಳಗ್ನಿಂದ ಇಣಿಕಿ ಪಣಿಕಿ ಕ್ವಾಡ್ತಿದ್ರು, ಮನಿಪಾರೆ ಹುಲ್ಲಿನಲ್ಲಿ ನಾಗರ ಸೆಡೆ ಮಾಡಿ ಆಡಿಕತ್ತಿದ್ದ ಹೈಕಳು ಆಡೋದ ನಿಲ್ಲುಸಿ, ಕಣ್ಣ ಅಗಲ್ಲಿ ಕ್ವಾಡ್ತಾ ನಿಂತಿದ್ದೊ. “ದಪಾ ದಪಾ ಅದೇ ಸೊಲ್ಲು. ಯೆಲ್ಲಿ ತರಾನೆ ಅಂದ್ರೆ, ಎಂಗಾರು ತರಬೇಕಪ್ಪ... ಆ ಹೈದ್ರ ಕ್ರಿಯಾದಿಗಳು ನಡೀಬ್ಯಾಡದ?” ಗಂಗಪ್ಪ ಜೋರು ಮಾಡ್ತಿದ!... ಟಗರೂರ ನಿದಾನಕೆ ತಲೆ ಎತ್ತಿ, ಪಟೇಲರ ಕಡೀಕೆ ತಿರುಗ್ಲ. “ಅದೇನ ಅಲ್ಪ ಸೊಲ್ಪ ದುಡ್ಡ ಪಟೆ?- ಸಾವ್ರ ರೂಪಾಯಿ!... ನಾ ಯೆಲ್ಲಿಂದ ತರಾನೆ?” - ಬೆದರಿ ಬೆದರಿ ಅವ್ರು ಮಾತಾಡ್ಡಾಗ, ಮಾರಮ್ಮ ಮುಂದಕೆ ಬಲಿ ಕ್ವಡಕೆ ತಂದು ನಿಲ್ಲಿಸ್ಟ ಕುರಿ ವದುರಾಡೊವಂಗೆ ತೋರು, ಲಕ್ಕಂಗೆ! “ಯೆಲ್ಲಿಂದ ತರಾನೆ, ಯಲ್ಲಿಂದ ತರಾನೆ- ಅಂತಾನೆ ಸತಾಯಿಸ್ತ ಕುಂತಿದೆ, ಈ ನ್ಯಾಯ ಸವೆಯಕ್ಕಿಲ್ಲ. ಯಾರ ಅಟ್ಟಲಾರೂ ಜೀತಕಿಸ್ತೀನಿ ಅಂತ