________________
೨೨೬ ವೈಶಾಖ ಈಸುಗಂಬಂದು ಅನ ಕಟ್ಟಬೇಕು ಕನ್ನ.” “ಈಗೇನು-ಇಲ್ಲೇ ಯೋನಿ. ನನ್ನೇ ಯಾರಾರು ಪುಣ್ಯಾತ್ಮರು ಜೀತಕಿರಿಸಿಕೊಂಡು ಈ ಅಣವ ಪಂಚಾತಿಗೆ ಕಟ್ಟಿಕೂಡ್ಲಿ. ನ್ಯಾ ಬ್ಯಾಡ ಅನ್ನಕ್ಕಿಲ್ಲ... ಬೇತುಗದ ಟಗರೂರ. “ನಿನ್ನ ಯಾರಲಾ ಅಪ್ಪಯ್ಯಾ ಇರುಸಿಕಳಾರು?... ಸಿಳ್ಳೆಕ್ಯಾತ್ಸಂಗೆ ಇದ್ದೀ. ನಿನ್ನ ಕಯ್ಲಿ ಯಾವ ಕೇಮೆ ಆದಾತು?... ನಿನ್ನ ಎಡತಿ ಹುಚ್ಚುಬೋರಿಗೂವೆ ಯಾರೂ ಆಪಾಟಿ ಆಣ ತೆರಕ್ಕಿಲ್ಲ. ಇನ್ನೂ ನಿನ್ನ ಮಗಳು ಚೆಲುವಿನ ಜೀತಕಿಟೆ ಯೇನಾರ ದೂರೀಬೈದು.” ಈ ಮಾತು ಮುಂದು ಮಾಡಿದೋನು ನಂಜೇಗೌಡ. ಮಗಳ ಜೀತಕಿರುಸು ಅಂದ ಕೂಡ್ಡೆ ಟಗರೂರ ಭೂಮಿಗೆ ಇಳುದೋದ. ಗುಡ್ಡ ವರೀಕಂಡು ನಿಂತಿದ್ದ ಹುಚ್ಚುಖೋರಿ ಮಾತ್ರ, “ಇರಾ ಒಂದು ಎಣ್ಣ, ಅದರಾಗು ಲಗ್ನಕ್ಕೆ ಬಂದಿರಾ ಎಣ್ಣ ಜೀತಕಿರಿಸಾದಾ?- ಈ ಹೂಟಕೆ ಬಿಲ್‌ಕುಲ್ ನ ವಪ್ಪನಾರಿ...” ಬಿಕ್ಕಾ ಬಿಕ್ಕಾ ಅಂದ್ಲು. - “ಅದಕೂ ವಪಕ್ಕಿಲ್ಲ. ಇದಕ್ಕೂ ವಪಕ್ಕಿಲ್ಲ, ಅಂದ್ರೆ ನಾವೇನ ಮಾಡಬೇಕು?... ಉಳುದಿರಾದು ಒಂದೇ ದಾರಿ. ಆ ಹೆಣವ ತಂದು ಇವರ ಗುಡ್ಡ ತಾವು ಕೆಡವೋದು! ವೋಟೇಯ”- ಇಂಗಂದೋರು ನಾಮಧಾರಿಗಳ ಉದ್ದೂರಯ್ಯ. “ಹಯ್ಯಯ್ಯೋ ಹಯ್ಯಯ್ಯೋ ಅಂಗೆ ಮಾತ ಮಾಡಬ್ಯಾಡಿ ಕನ್ನಯ್ಯನಿಮ್ಮ ಪಾದಕ್ಕೆಬೀಳೀನಿ.” ಹುಚ್ಚುಬೋರಿ ಚೀರಿದ್ದು. “ಅಂಗಾರೆ ಬುಡು. ನಮಗುಳಿದಿರಾದು ಅದೊಮದೆ ದಾರಿ, “- ಇಂಗಂದು ಗಂಗಪ್ಪ “ಊ ನಡೀರಪ್ಪ, ಇವನತ್ರ ಎಷ್ಟು ಮಾತಾಡಿದ್ರೂವೆ ಅಸ್ಟೇಯ”- ಅಂತ ಹೈಂಡೋರಂಗೆ ತಿರುಗಿದ. - “ಬ್ಯಾಡಿ, ಬ್ಯಾಡಿ, ಅಂಗೆ ಮಾಡಬ್ಯಾಡಿ, ನಿಂತುಗನ್ನಿ... ಇನ್ನೇನ ಮಾಡಾದು ನನ್ನ ಎಣ್ಣನೇ ಯಾರತ್ರನಾರೂ ಜೀತಕಿರುಸಿ ರೂಪಾಯಿ ತಂದು ಕಡ್ತೀನಿ, ವಸಿ ಜಿನತಡೀರಿ...” ಟಗರೂರ ಆಳ್ತಾ ಆಳ್ತಾ ಯೋಳ, ಹೊಂಟಿದ್ದೋರೆಲ್ಲ ನಿಂತುಗಂಡು, ನಾಮಧಾರಿಗಳ ಉದ್ದೂರಯ್ಯ, “ಅವಳ ನಾ ಜೀತಕಿಟ್ಟುಕೋತೀನಿ. ಆದ್ರೆ ಸಾವ್ರ ರೂಪಾಯ ಕ್ವಡಕ್ಕೆ ನಂಗ ಸಾಮರ್ತ್ಯ ಇಲ್ಲ. ನನ್ನತ್ರ ಐನೂರು ರೂಪಾಯಿ ಅದೆ. ವೋಟು ಬೇಕಾರೆ ಕೃಡ್ತೀನಿ” ಅಂದ. ಬಾಕಿ ಜಯಮಾನು ಯೆಲ್ಲಾರು ವಜ್ಯೋರಿಗೋಗಿ ಮಾತಾಡಿಕಂಡ್ರು.