ವಿಷಯಕ್ಕೆ ಹೋಗು

ಪುಟ:ವೈಶಾಖ.pdf/೨೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಮಗ್ರ ಕಾದಂಬರಿಗಳು ೨೨೭ ಆಮ್ಯಾಕೆ ಗಂಗಪ್ಪ ಬಂದೋನು, “ಐನೂರ ಕ್ವಟ್ಟರೆ ತಕ್ಕಡೀನೆ ಏಳಕ್ಕಿಲ್ಲ. ಹೈದ ತೀರುಕಂಡದೆ. ಅಮ್ಮ ಮಣ್ಣು ಮಾಡಕ್ಕೆ ಅದರ ಅವ್ವನಿಗೆ ಕೂಡಬೇಕೊ ಬ್ಯಾಡವೊ?... ಅವಳೂ ಬಡವಿ, ಪಾಪ. ಇನ್ಯಾವ ಆದಾರ ಇದ್ದು ಅವಳೆ?... ಅದೆಲ್ಲ ಅಗಕ್ಕಿಲ್ಲ ಉದ್ದೂರಯ್ಯ, ನಿನ್ನತ್ರ ಇದ್ದರೆ ಸಾವ್ರ ರೂಪಾಯ ತಂದು ಕಡು. ಎಣ್ಣ ಕರಕೊಂಡೋಗು. ಇಲ್ಲ.. ನಿಂಗೆ ಆಗಕ್ಕಿಲ್ಲ ಅಂದ್ರೆ, ಬ್ಯಾರೆ ಇನ್ಯಾರಾರ ಅಣ ಕ್ವಡ್ತಾರೆ.” ಕೋವಿಲಿ ಸುಟ್ಟಂಗೆ ಯೋಳಿಜುಟ್ಟು, ಉದ್ದೂರಯ್ಯ ವಸಿ ವೊತ್ತು ವಳು ಅಳದೂ ಸುರದೊ ಕಡೀಕೆ, “ಊ, ಅಟ್ಟೇಲಿ ವೋಗಿ ನ್ಯಾಡ್ತೀನಿ, ಅಣ ಯೇನಾರ ಜಮಾ ಆದ್ರೆ ತತ್ತೀನಿ. ಅಲ್ಲೀಗಂಟ ತಡಕನ್ನಿ...” ಇಂಗಂದು ಎದ್ದೋದೋನು, ಕಣ್ಮುಚ್ಚಿ ಕಣ್ಮ ಬುಡೋರೊಲ್ಲೆ ಅಟ್ಟಿಯಿಂದ ಆಜರಾಗಿ, “ತಕ್ಕ ಗಂಗಪ್ತಾರೆ, ನನೆಡತಿ ಮೂಲೆ ಮುಡಕಲಲ್ಲಿ ಇಟ್ಟಿದ್ದ ಅಣವ ಕ್ವಡುದೇ ಇದ್ರೆ, ಇಟು ದುಡ್ಡು ಈ ಕ್ಷಣಕ್ಕೆ ಜ್ವತೆ ಮಾಡಕ್ಕಾಯ್ತಾ ಇರನಿಲ್ಲ ನಂಗೆ...? ಅಂತೇಳಿ, ಗಂಗಪ್ಪನ ಕೈಗೆ ಒಂದು ಸ್ರಾವ ಬೆಳ್ಳಿ ನಾಣ್ಯವ ಒಂದೊಂದಾಗಿ ಎಣಿಸಿ ಆಹ್ಲಾ, ನಾಣ್ಯಗಳ ನಂಜೇಗೌಡನ ಕಾಯ್ಕಿಗೆ ಕಟ್ಟು, ಗಂಗಪ್ಪ, “ನೀವೊಂದು ದಪ್ಪ ಎಣಿಸಿಬಿಡಿ, ನಂಜೇಗೌಡರೆ” ಅಂದ. ನಂಜೇಗೌಡ ಜ್ವಾಪಾನವಾಗಿ ಅಣವ ಇನ್ನೊಂದು ದಪ ಎಣಿಸಿ, ಅದನೂ ಚೌಕದಲ್ಲಿ ಕಟ್ಟಿಕಂಡು. “ಊ, ಈಗ ನೀನು ಎಣ್ಣ ಕರಕಂಡು ವೋಗಬೈದು, ಉದ್ದೂರಯ್ಯ” ಅಂದ. ಹುಚ್ಚಬೋರಿ, “ನಾ ಕಳಸಕ್ಕಿಲ್ಲ. ಕಳಸಕ್ಕಿಲ್ಲ”- ರಾದ್ದಾಂತ ಮಾಡಿದ್ದು. ಅದು ಯಾವ ಪರ್ಯೋಜನಕೂ ಬರನಿಲ್ಲ. ಅಲ್ಲಿದ್ದೋರೆಲ್ಲ ಅವಳಿಗೆ ಬುದ್ದಿ ಯೋಳಕ್ಕೆ ಸುರು ಮಾಡಿದರು. ಕಡೀಕೆ ಆ ಎಣ್ಣು ನಾಮಧಾರಿಗಳ ಉದ್ದೂರಮ್ಮ ಆಟ್ಟಿಗೆ ಕ್ವಿಂಡಲೇಬೇಕಾಯ್ತು! ಲಕ್ಕ ಇದ್ಯಾಕೆ ಇಂಗಾಯ್ತು ಎಂದು ತಲೆ ಕೆಡಿಸಿಕಂಡ. ಅವರಿವರ ಕೇಳಿ ವಸಿ ತೀಳಿತು. ಆದರೆ ಪೂರಾ ಇಚಾರ ತಿಳಿಸಿದೋನು ಟಗರೂರನ ದೋಸ್ತು ಮಲ್ಲೂವ, ಅದೂ ಮೂರುನಾಕು ಜಿನ ಕಳುದ ಬಳಿಕಾನೆ, ಪಂಚಾತಿ ಆದ ನಾನ ಟಗರೂರ ಮಲ್ಲೂವನ ಸಂಗಾಟ ರಾಚನ ಸರಾಪಿನ ಅಂಗಡೀಲಿ