________________
೨೨೮ ವೈಶಾಖ ಕುಡೀತ ತೋಡಿಕಂಡಿದ್ರಂತೆ... ಇಂದಿನ ನಾನಾಗ ಭರ್ತಿ ಏರಿಸಿದ್ದ ಟಗರೂರ, ಸ್ವಾಮಿ ಅವನ ಗುಡ್ಡ ಬೆಚ್ಚಗೆ ಮಾಡಕ್ಕೆ ಅತ್ತಿದ್ರೂವೆ ಇನ್ನೂ ಬಿದ್ದೇ ಇದ್ದಂತೆ. ಎದ್ದು ಸ್ವಾಡಿದಾಗ ಆಗ್ಗೆ ಎಡತಿ ಹುಚ್ಚುಬೋರಿ, ಮಗಳು ಚೆಲುವಿ ಇಬ್ಬರೂವೆ ಕೂಲಿಕಂಬಳಕೆ ವೋಂಟೋಗಿದ್ರಂತೆ. ಮಡಿಕೇಲಿ ಅರ್ದಮುದ್ದೆ ಹಿಟ್ಟ ಇನ್ನಿಗೇ ಅಂತಾನೆ ಎಡತಿ ಮಡಗೋಗಿದ್ದು, ಹಿತ್ತಲಿಂದ ನಾಕು ಹರು ಮೆಣಸಿನಕಾಯಿ ಬುಡಸಿ ತಂದು ತಂಗಳಿಟ್ಟಿನ ಜತೆ ಕಡಕಂಡು ತಿಂದ, ನಿಶಾದಿಂದ ತಲೆ ಇನ್ನೂ ಸಿಡೀತಾನೆ ಇತ್ತು. ಎಂಗೂ ಕಂಬಳಕೋಗೊ ವೊತ್ತು ಮೀರು, ಊರೊಳೆ ತಿರುಕ್ಕಂಬಂದ್ರೆ ಈ ತಲೆ ಸಿಡ್ಡ ವಸಿ ತಪ್ಪಬೈದು ಅಂತ ವೊಂಟ. ಊರೊಳಗಿನ ಬೀದಿಗಳಲ್ಲಿ ಜನವೇ ಇಲ್ಲ. ಮುಕ್ಕಾಲುಪಾಲು ಗಂಡಸರು ಎಂಗಸರೆಲ್ಲ ಕೆಲ್ಸಕ್ಕೊಂಟೋಗಿದ್ರು, ತೆಳ್ಳತೆಳ್ಳಗೆ ಅಲ್ಲೊಬ್ಬು ಇಲ್ಲೊಬ್ಬು ಉಳಿದೋರು ತಮ್ಮತಮ್ಮ ಅಟ್ಟಿ ಕದ ಮುಚ್ಚಿ ವಳುಗೆ ಸೇರಿದ್ರು, ಯಾವ ಬೀದೀಲಿ ಕ್ವಾಡಿದ್ರೂವೆ ನಾಯಿಗಳ ಸಂಸಾರವೆ ವೊರತು ಒಂದು ನರಿಪಿಳ್ಳೆ ಸೈತ ಕಾಣಿಸ್ತಿರನಿಲ್ಲ.... ಟಗರೂರ ಆ ಬೀದೀಲಿ ಹೈಕ್ಕು ಈ ಬೀದೀಲಿ ಕಡದು ಪರಿವಾರದೋರ ಬೀದಿಗೆ ಬಂದಿದ್ರಂತೆ. ಆ ಬೀದಿಯೂ ಬಿಕೊ ಅಂತಿತ್ತು, ಅಂಗೆ ಅತ್ತಿತ್ತಾಗಿ ಕಣ್ಣಾಡಿಸ್ತ ಬಲ್ವಾಗ, ಟಗರೂರಿನಿಗೆ ಬಾಯಾಡಕ್ಕೆ ಯೇನಾರೂವೆ ಸಿಕ್ಕಿದೆ ವಾಸಿಯಾಗಿತ್ತಲ್ಲ ಅನ್ನಿಸ್ತಂತೆ. ಯಾವ ಅಟೀಲಿ ಕ್ಯಾಳಿದ್ರೆ ಸಿಕ್ಕಬೈದು ಅಂತ ಲೆಕ್ಕಾಚಾರ ಆಕ್ತ ಬತ್ತಾ ಇರೋನೂವೆ, ಎಂಕಿ ಅಟ್ಟಿ ಎದುರಾಗಿ, ಹುಂ- ಎಂಕಿ ಅಟ್ಟಿ ಅಂಗದೆ, ಅವಳು ಯಾವತ್ತೂವೆ ಈಳ್ಯದೆಲೆ ಹೊಗೆಸೊಪ್ಪು ವತ್ತಿರಿಸಿದಂಗೆ ಇದ್ದಾಳೆ. ನಾ ಕಾಳಿದಾಗ, ಒಂದೊಂದಿ ಜಿನ ಗ್ಯಾನ ಸುದ್ದಾಗಿದೆ. 'ಏನ್ನ ನನ್ನ ಹಳೇನ ಮಗನೆ, ಸಾಲ ಕ್ವಟ್ಟು ಮಡಗಿರೋನ ತರ ನಿಸೂರಾಗಿ ಬಂದು ಕ್ಯಾಳೀಓಯಲ್ಲ?' ಅಂತ ಹಟಿಗಿಸದೂವೆ, ಕಡೀಕೆ 'ಹು, ವೋಗ್ಲಿ ತಕ್ಕ' ಅಂತ ಕೂಗ್ತಿದ್ದು, ಆ ಆಸೆಯಿಂಧೆ ಟಗರೂರ ಎಂಕಿ ಅಟ್ಟಿ ಬಾಗಿಲ ಮುಂದೆ ಬಂದು ನಿಂತ. ಬಾಗಿಲು ಮುಚ್ಚಿತ್ತು. ವಕ್ಕಡೆ ಇರೋ ಜಗಲಿ ಮ್ಯಾಲೆ ಹೈಕಳು ಊಟಾನೂ ತಿಂಡೀನೊ ತಕ್ಕಂಡೋಗೊ ಟಿಪನ್ ಕರಾ ಯಾರೊ ಇಟ್ಟಂಗಿತ್ತು. ಯಾರಿರಬೈದು ಅಂತ ಯೋಚಿಸಿದೋನು, ಇನ್ಯಾರು ಎಂಕಿ ಹೈದನೆ ಇರಬೇಕು ಅಂದಕೋತ್ತ, ಮುಂದಕೋಗಿ ಅಟ್ಟಿಕದ ತಟ್ಟಿದ. ವಳುಖ್ಯಿಂದ ಯಾರೂ ಬಂದು ಕದ ತಗೀನಿಲ್ಲ. ಪುನಾ ಜೋನ್ನಿಂದ ತಟ್ಟಿದ. ವಳಗ್ನಿಂದ ಸದ್ದು ಸಮಾಚಾರವೇ ಇಲ್ಲ.... ಮತ್ತೆ ಮತ್ತೆ ತಟ್ಟ, ಏಟೋತ್ತಾದರೂ ಯಾರೂ ಕದ ತಗೀನೇ ಇಲ್ಲ. ನಿಂತ, ನಿಂತ, ನಿಂತ.