ಪುಟ:ವೈಶಾಖ.pdf/೨೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಮಗ್ರ ಕಾದಂಬರಿಗಳು ೨೨೯ ಸಾಕಾಗೋಯ್ತು... ಎಂಕಿ ಜೋರಗಿರ ಬಂದು ಮನಗಿರ ಬೈದು, ಅವಳ ಹೈದ ಅವ್ರು ಕಲೀತಿರೊ ಮಠಕೋಗರಬೈದು... ಅದುಕೇ ಯಾರೂ ಬಂದು ಕದ ತಗೀತಾ ಇಲ್ಲ- ಅಂತ ಕರ್ತ ಮಾಡ್ಡ... ಆಂದರೆ ಜಗಲಿ ಮ್ಯಾಲಿರೊ ಟಿಪನ್‌ಕರಾರು ಯಾರು?... ಅವನದೆ ಇರಬೈದ? ಆ ವನೇನಾರ ಮರತ ಗಿರತು ವೋಗಿರಬೈದು?... ಥತ್ ಥತ್, ಯೇಲ್ಲಾರ ಉಂಟ?- ಆ ಹೈದ ಹಲಗ ಬೋ ಉಸಾರು. ಇಂಗೆಲ್ಲ ಬುಟ್ಟೋಗಕ್ಕಿಲ್ಲ... ಅಂಗಾರೆ ಯಾರದಿರಬೇಕು ಇದು? ಓಪನ್ ಕಾರರು ನ್ಯಾಡ್ತಾನೆ ಯೋಚಿಸ್ತಾ ಇದ್ದ. ಬೆಳಗಿನ ಪ್ರಬೇಲಿ ಆ ಇತ್ತಾಳೆ ಡಬ್ಬಿ ಜಗಲಿ ಮ್ಯಾಲೆ ಒಂಟಿಯಾಗಿ ಕುಂತು, ಟಗರೂರ ವಳುಗಡೆ ಮಿಗಿಲಾದ ಆಸೆ ಬತ್ತೀಯ ಮ್ಯಾಲೆ ಹೃತಿಸ್ತು... ತನ್ನ ಗುಡ್ಡಲ್ಲಿ ಯಾವತ್ತೂವೆ ಮಡಕೆ ಕುಡಕೆ ಸುಂಗಾರವೆ!- ತಣತಣಾಂತ ಹೃಳೆಯೊ ಇಂತಾ ಇತ್ತಾಳೆ ಪಾತ್ರೆ ಪದಾರ್ತ ತನ್ನಜ್ಜ ಮುತ್ತಜ್ಜರ ಕಾಲದಿಂದ್ಲವೆ ತಮ್ಮ ಗುಡ್ಲು ವಳೀಕೆ ಕಾಲಿಟ್ಟಿದ್ದೇ ಇಲ್ಲ!- ಯತೆ ಎದೇಲಿ ಒತ್ತಿಗಂಬಂತು. ಕಣ್ಣು, ಬಿದೀಲೆಲ್ಲ ಇಂದುಕೆ ಮುಂದುರೆ, ಎತ್ತಿತ್ತಾಗೂ ಹರಿದಾಡು: ಸುತ್ತಾ ಮುತ್ತಲ ಅಟ್ಟಿ ಕದಗಳೆಲ್ಲ ತಟ್ಟಿ ತಟ್ಟಿ ಸ್ವಾತ್ತು. ಒಬ್ಬರದಾರ ಸುಳುವೇ ಬ್ಯಾಡದ? ಬೀದಿ ಉದ್ದಕ್ಕೂ ವೋಟೇಯ- ಖುಲ್ಲಾ ಅಂದರೆ ಖುಲ್ಲಾ!... ಇತ್ತಾಳೆ ಪದಾರ್ತವ ಸ್ವಾಮಿ ಬಣ್ಣಬಣ್ಣ ಮಾಡಿ ಮಾಯದ ಬಲೆ ಬೀಸ್ತಿತ್ತು. ಮಂಕು ಕವಿದು ಟಗರೂರ ದಿಟ್ಟಿಸ್ತಾನೆ ಇದ್ದ. ತಣ್ಣಗೆ ಮ್ಯಲೆ ಹಂದಿ ಬಾಡು ಕಂಡು ಜೊಲ್ಲು ಸುರುಸೊ ತರ ಬಾಯಿಬುಟ್ಟ. ಇನ್ನು ತಡೆಯಕ್ಕಾಗನಿಲ್ಲ. ಇನ್ನೂ ಒಂದು ದಪ ಸುತ್ತಾಲು ಕಣ್ಣಾಡ್ಲಿ ಟಿಪನ್ ಕರಾರಿಗೆ ಕೈಯ್ಯ ಆಕ್ಷ. ಅಮ್ಮ ಎತ್ತಿಗತ್ತಿದ್ದಂಗೆ ಎದೆ ವಳಾಗಡೆ ಕ್ವಟ್ಟಣ ಕುಟ್ಟಕ್ಕೆ ಸುರುವಾಯ್ತು. ವೊದಿದ್ದ ದುಪಟವೊಳಗೆ ಮೊಗ ಸುತ್ತೋನಂಗೆ ಅದ್ರ ಸುತ್ತಿಕಂಡ. ತಲೆ ಬೊಗ್ಗುಸಿ ಮೆಲ್ಲಕೆ ಅಲ್ಲಿಂದ ಜಾರ... ಇಟೆಲ್ಲಾನೂವೆ ರಾಚನ ಸರಾಪಿನ ಅಂಗಡೀಲಿ ಕುಡೀತ ಕುಡೀತ ಟಗರೂರನೆ ಯೋಳಿದ್ರಂತೆ... ಗಂಡನ ಕಳಕಂಡು ಎಂಕಿ ಕಷ್ಟಪಟ್ಟು ಕೂಲಿ ನಾಲಿ ಮಾಡಿ ತನ್ನ ಒಬ್ಬನೆ ಮಗ ಹಲಗನ್ನ ಓದಿಸ್ತಿರನಿಲ್ವ?- ಆ ಹೈದ ಏಡು ಏಡೂವರೆ ಮೈಲಿ ಇರೊ ಮಿಡ್ಲಿಸ್ಕೂಲಿಗೆ ಊಟ ತಕ್ಕಂಡೋಗಕ್ಕೆ ಒಂದು ಟಿಪನ್ ಕರಾರು ತಕ್ಕೊಟ್ಟಿದ್ದಲು... ತನ್ನ ಸತ್ತೋದ ಗಂಡ ಕುಡುಕ. ಕುಡುದೂ ಕುಡುದೂ ಒಂದು ಅಮಾಸೆ ನಾತ್ರೀಲಿ ಗೊತಕ್ ಅಂದಿದ್ದ. ಅವನು ಬದುಕಿದ್ದಾಗಲೂ ಕಾಟವೇಯ, ಸತ್ತಾಗಲೂ ಕಾಟವೇ ಆಯ್ತು ಅವಳಿಗೆ.... ಆ ಗಂಡನ ಮಣ್ಣು ಮಾಡಬೇಕಾರೆ, ಅವಳು ತನ್ನ ಚಿನ್ನದ ಚೌಲಿ ಗೊಣಸ ಇಟ್ಟುಕಂಡು ಊಡೀಂತ ಊರಿನ ಮನೆ ಮನೆಗೂ ಇಟ್ಟಾಡಿ, ವಸಿ ಪರಿದಾಡಿದ್ದ?... ಆ ತಲೆಮಾಸಿದ ಗಂಡನ ತರ,