________________
೨೩೦ ವೈಶಾಖ ಇರೊ ಒಬ್ಬಾನೊಬ್ಬ ಹೈದನೂ ಕೆಟ್ಟೋದಾನು ಅಂತಲೊ ಯಾನೊ ಸಣ್ಣದು ಪುಟ್ಟದಕ್ಕೆಲ್ಲ ತಪ್ಪು ಕಂಡಿಡುದು ವೋಗಿ ಬಂದು ವೋಗಿ ಬಂದು, ಈ ಹೈದ ಗಟ್ಟಿಸ್ತಾನೆ ಇದ್ದಂತೆ!- ಎದ್ದ ಹೃನ್ನಿಂದ ನಾ ಮೊಗ್ಗಲು ಕೊಡಾವರೆಗೂ ಹೈದ, ಅವ್ವನ ಕಯ್ಲಿ ಯಾವ ಗಳಿಗೇಲಿ ಏಟು ತಿನ್ನಬೇಕಾದತೊ ಅಂತ ಥರಥರನೆ ಪತುರುಗುತ್ತಾನೆ ಇರೋನಂತೆ... ಇಂಗಿರುವಾಗ ಯೇನಾಯ್ತಪ್ಪ ಅಂದರೆ, ಟಗರೂರ ತಿಳುಕಂಡ ರೀತಿ, ಏಂಕಿ ಅಟ್ಟಿನಳಾಗಡೆ ಜೋರ ಬಂದು ಮನಗಿರನಿಲ್ಲ. ಅವಳು ಯಾರದೊ ತಾಟದ ಕೆಲುಸಕ್ಕೊಗಿದ್ದಲು. ಅವಳ ಹೈದ ಹಲಗ, ಟಿಪನ್ ಕರಾರು ತಕ್ಕಂಡು ಸ್ಟೋರೀಕೆ ಬಂದೋನು, ಯಾವುದೋ ಪುಸ್ತಕ ಮರತೂ, ಇಲ್ಲ ಇತ್ತಲಿಗೆ ಅವರಸರಾಗೊ ಟಿಪನ್ ಕರಾರ ಜಗಲಿ ಮಾಲಿಟ್ಟು ಕದವ ವಳೀಕೆ ಎಳಕಂಡು ವೋಗವೆ- ವೋಟರಲ್ಲಿ ಟಗರೂರ ಅಲ್ಲಿಗೆ ಬಂದೋನು, ಜಗುಲಿ ಮ್ಯಾಲಿದ್ದ ಟೀಪನ್‌ಕರಾರ ಕಂಡು, ಅಸ್ಯಾಗಿ ಎತ್ತಿಗೊಂಬಂದವೆ?... ನಳುನ್ನಿಂದ ಪುಸ್ತಕ ತಕ್ಕಂಡು ಜ್ವರೀಕೆ ಬಂದು ನೌಆಡ್ತಾನೆ- ತಾನು ಜಗಲಿ ಮ್ಯಾಲಿಟ್ಟಿದ್ದ ಟಿಪನ್‌ಕರಾರು ಮುಮಗರಮಾಯ ಆಗದೆ!- ಆಗ ಮಾತ್ರ, ಹೈದಂಗೆ ಎದೆ ಒಡೆದೋಗಿರಬೇಕು... ತನ್ನವ್ವ ಕೂಲಿ ಮಾಡಿ ಕಾಸಿಗೆ ಕಾಸ ಗಂಟಾಕಿ ತಕ್ಕೊಟ್ಟಿರೊ ಟಿಪನ್ ಕರಾರ ಕಳದುಬುಟ್ಟು, ಅವ್ವಂಗೆ ಅದೇನಂತ ಮೊಖ ತೋರುಸ್ತಿ? ಅವಳು ನನ್ನ ಸುಮ್ಮಕೆ ಬುಟ್ಟಾಳ? ಚಮಡ ಸುಲುದು ಬುಡ್ತಾಳೆ ಅಂತೆಲ್ಲ ಅವ್ರ ಮನದಲ್ಲಿ ಮೂಡಿರಬೇಕು- ಅಟ್ಟಿ ವಳುಕ್ಕೋಗಿ ಮುಂದಿನ ಬಾಗಿಲ ತಾಪಾಳ ಪೆಟ್ಟಿ, ಹಗ್ಗ ತಕ್ಕಂಡು ಅಂಗಳದ ತೊಳೆಗೆ ನ್ಯಾತು ಆಕ್ಕಂಡಿರಬೇಕು.... ವಸಿ ಮೊತ್ತಾದ ಮ್ಯಾಲೆ ಹಜಾಮರ ಜವರಯ್ಯ 'ಹೈದನಿಗೆ ಚೌರ ಮಾಡಕ್ಕೆ ಯೋಳಿಲ್ಲ. ಯಾವತ್ತು ಬರಾನೆ?'- ಎಂಕಿಯ್ಯ ಕ್ಯಾಳಿ ವೋಗಾನೇಂತ ಅಟ್ಟಿ ತಾವಿಕೆ ಬಂದನಂತೆ. ಅಟ್ಟಿ ಕದ ಮುಚ್ಚಿತ್ತು. ಕದ ತಟ್ಟಿದನಂತೆ, ಕೂಗಿದನಂತೆ. ಮುನಾ ತಟ್ಟಿದನಂತೆ. ಯಾರೂ ಕದವ ತೆಗೀನಿಲ್ಲ. ಮತ್ತೆ ಊರಲ್ಲಿ ಅವರಿವರ ಅಟ್ಟಿ ತಟ್ಟಾಡಿ ಬಂದನಂತೆ. ಇನ್ನೂ ಕದ ಮುಚ್ಚೇ ಇತ್ತು. ಎಂಕಿ ಜ್ವರೀಕೋದ್ರೆ ಬೀಗ ಜಡಿದೇ ವೋಗಬೇಕು. ಹೈದ ಯೇನಾರ ಮಠದಿಂದ ಬ್ಯಾಗ ಬಂದರೆ ಇರಲೀಂತ ಒಂದು ಬೀಗದ ಕಯ್ಯ ಅವನ ತಾವೂ ಕಟ್ಟು, ಇನ್ನೊಂದ ತನ್ನ ತಾವು ಇಟ್ಟುಕಂಡು ಇಡ್ತಾ ಇದ್ದ ಇಸ್ಯಜವರಯ್ಯಂಗೂ ಗೈತ್ತಿತ್ತಂತೆ- ಮತ್ತೆ ವಳಾಗಡೆ ಈಟೋತ್ತು ಯಾರಿರೂರು?- ಚೋಜಿಗಾಗಿ ಒಂದೇ ಸಮಕೆ ಕದ ಕುಟ್ಟಿದನಂತೆ. ನಳುನ್ನಿಂದ ಯಾರೂವೆ ಹರ, ಸಿವ ಅನ್ನಲೇ ಇಲ್ಲ.... ತಟ್ಟಿ ತಟ್ಟಿ ಅವಸ್ಥೆ