________________
ಸಮಗ್ರ ಕಾದಂಬರಿಗಳು ೨೩೧ ಸಾಕಾಯ್ತಂತೆ, ಅನುಮನಸೂ ಬಂತು. ಗುಲ್ಲೆಬ್ಬಿಸಿ, ಆಚೆ ಈಚೆ ಅಟ್ಟಲಿ ಅಪುರ್ಪಕೆ ಕೆಲಸಕ್ಕೋಗದೆ ವಳಗಡೇನೆ ಉಳುದಿದ್ದ ಮೂರು ನಾಕು ಎಂಗಸರ ಜಮಾಯಿಸಿದನಂತೆ... ಆ ಎಂಗಸರೂವೆ ತಟ್ಟಿದ್ರು, ಕೂಗಿದ್ರು. ಅವರಿಗೂ ಅಮಾನಸಾಯ್ತು- ಎಲ್ಲರೂವೆ ಕಡೀಕೆ ಅಟ್ಟಿಮ್ಯಾಲೆ ಹೃದಿಸಿದ್ದ ನಾಡ ಹೆಂಚ ತಗುದು ವಳೀಕೆ ಇಳುದು ಹಾಡಾದೆ ಸಮ ಅನೊ ತೀರ್ಮಾನಕ್ಕೆ ಬಂದರಂತೆ... ಆ ಪರ್ಕಾರ ಹಜಾಮರ ಜವರಯ್ಯನೆ ಅಟ್ಟಿ ಮ್ಯಾಕತ್ತಿ, ಹೆಂಚ ತಗುದು ವಳೀಕೆ ಇಳುದಂತೆ. ಇಳುದು ಸ್ವಾಡ್ತಾನಂತೆ-ಹೈದ ಹಲಗ, ತೊಟ್ಟಿ ಕಂಬಕ್ಕೆ ನ್ಯಾತು ಆಕಂಡಿ!- ವಸ್ತು ಯಾವಾಗ್ಲೋ ವೊಂಟೋಗಿರಬೇಕು.... ಮುಂದಿನ ಕದವ ತೆಗೆದನಂತೆ. ಹೊರಗಿದ್ದ ಎಂಗಸರೂ ಬಂದು ಸ್ವಾಡಿ ಎದೆ ಎದೆ ಬಡಕೊಂಡರಂತೆ... ಹೈದ ಸತ್ತೋದ ಸುದ್ದಿ ಅಲ್ಲಿ ಬಿದ್ದು ಇಲ್ಲಿ ಎದ್ದು ಟಗರೂರನ ಗುಡ್ಡನೂ ಮುಟ್ಟಕ್ಕೆ ವೋಟು ತಡೆಯೇನೂ ಆಗಿಲ್ಲ. ಆ ಸುದ್ದಿ ಕಿವಿಗೆ ಬಿದ್ದ ಕೃಣಕೆ, ಟಗರಂಗೆ ಮರದ ಜಾಗದಲ್ಲಿ ಕಟ್ಟಿರ ಕಚ್ಚಿದಂಗಾಯ್ತಂತೆ! ಮೊಖ ಕೆಟ್ಟು, ಸಂದಿ ಸಂದೀಲೂ ಬೆಮರು ಕಿತ್ತು ಹರಿಯಕ್ಕೆ ಸುರುವಾಯ್ತಂತೆ... ಟಗರೂರ ಹೆದರಿ ಹೆಪ್ಪಳಿಸೋಗಿ ಟಿಪನ್ ಕರಾರು ತಕ್ಕಂಡು ಸೀದ ಜಪ್ಪಯ್ಯನ ಮಟದ ಅಯ್ಯೋರ ಮಂದಕಿಟ್ಟು, “ಯಾನೊ ತಪ್ಪು ಮಾಡಿಬುಟ್ಟೆ, ಗುರುವೆ- ಹಾಳಾದ ಬಡ್ಡಿ ಹೆತ್ತ ಆಸೆ, ನನ್ನೊಡೆಯ ಎತ್ತಿಗಂಬಂದೆ... ಮಾತ್ರ ಇದ್ರಿಂದ ಹೈದ ಸಾಯ್ತಾನೇಂತ ತಿಳೀನಿಲ್ಲ, ಸಿವನೆ!... ಊರ ಯಜಮಾನ್ರಿಗೆ ಯೋಳಿ ನನ್ನ ತಟಾಯ್ಲಿ, ಬುದ್ದಿ..” ಸಿವಪಾದಪ್ಪನೋರ ಪದಕ್ಕೆ ಬಿದ್ದನಂತೆ. ಅಯ್ಯನೋರು, “ಇದರಾಗೆ ನಾನೇನೂ ಮಾಡಕ್ಕೆ ಬರಕ್ಕಿಲ್ಲ. ಒಂದು ಜೀವ ಕಳದೋಗದೆ. ಊರ ಯಜಮಾನ್ನು ಸೇರಿ ಈ ನ್ಯಾಯವ ಧರ್ಮಾಗಿ ತೀಮಾನ ಮಾಡಬೇಕು” ಅಂತ ಅಪ್ಪಣೆ ಕ್ವಟ್ಟು, ಅಲ್ಲೆ ಕುಂತಿದ್ದ ನಂಜೇಗೌಡರು, ಗಂಗಪ್ಪಾರು ಇಬ್ಬ ಕಡೀಕು ನ್ಯಾಡಿದ್ರಂತೆ... ಸರಿ ಮುಂದಕೆ ನಡೆದದ್ದೆಲ್ಲ ನಿಂಗೆ ಗ್ವತ್ತೇ ಅದೆ... ಯಜಮಾನ್ನು ಟಗರೂರಿನ ಗುಡ್ಡ ತಾವಿಕೆ ಬಂದು, ಅವನ ಮಗಳು ಚೆಲುವೀಯ ಕೆಲ್ಬದ ತಾವಿನಿಂದ ಕರಸಿ, ಅಬ್ಬಿಗೆ ಬೀರಬಿದ್ದು, ಸಾವ್ರ ರೂಪಾಯ ತಕ್ಕಂಡು ಆ ಎಣ್ಣ ನಾಮಧಾರಿಗಳ ಉದ್ದೂರಯ್ಯ ಅಟ್ಟಿ ಜೀತಕೆ ಕಳುಸಿದ್ದ, ನೀನೂವೆ ನನ್ನಂಗೇಯ ಸ್ವಾತ್ತ ನಿಂತಿದ್ಯಲ್ಲ? ಇಂಗೆ ಟಗರೂರ ದೋಸ್ತು ಮಲ್ಲೂವ ಪರಸಮಗ ಯೋಳಿ