ಪುಟ:ವೈಶಾಖ.pdf/೨೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨೩೨ ವೈಶಾಖ ಮುಗುಸಿ... ಲಕ್ಕ-ಕಳ್ಳ ಬೊಡ್ಡಿಹೈದ ಟಗರೂರಂಗೆ ಒಳ್ಳೆ ಸಿಕ್ಕೇನೆ ಆಯ್ತು. ಆದ್ರೆ, ಇವನ ಕಳ್ಳ ಯವಾರದಿಂದ, ಬೆಳೀತಿದ್ದ ಒಂದು ಚೆಂದುಳ್ಳಿ ಕುಡಿ ಕಮರೋಯ್ತಲ್ಲ, ಅಂತ ಪೇಚಾಡಿದ... ಟಗರೂರ ಮಾಡ್ತಿದ್ದ ಸಣ್ಣ ಪುಟ್ಟ ಕಳ್ಳತನಗಳಲ್ಲಿ ಗೆಪ್ತಿಗೆ ಬಂದೊ... ಅಡೆ ಆಕಿದ ಹೊಗೆಸೊಪ್ಪ ಪಲ್ಪಾಯಿಸಕ್ಕೆ ಯಾರ ಅಟ್ಟಲಾರೂ ಕರು, ಅಲ್ಲಿ ಅದಿನೈದು ಇಪ್ಪತ್ತೊ ಒಣಗಿದ್ದ ಹೊಗೆಸೊಪ್ಪ ಎಲೆಗಳ, ಚಡ್ಡಿ ವಳುಗಡೆ ಚೊರಕ ಮಾಡ್ತಿದ್ದ, ಕಾಸಕ್ಕೆ ಆಸೆಗೆ, ಯಾರ ಹೋಲ ಆದರೂ ಸೈ, ಯಾರೂ ಇಲ್ಲದಿದ್ದ ಸಮಯಕಾದು, ರಾಗಿ ತೆನೆ ಕಡಿಯೋದು-ಊರಿನಲ್ಲಿ ಇಂಗೇ ಯೇನಾರ ಅದು ಇದು ಚೆಲ್ಲರೆ ಕೆಲ್ಸ ಮಾಡ್ತಿದ್ದ. ಆದ್ರೆ ಎಲ್ಲಕಿಂತಲೂವೆ ಅಮ್ಮ ನಡುಸಿದ ಭಾರಿ ಹಿಕಮತ್ತು ಅಂದ್ರೆ, ಕರುರುಬರ ಕೆಸ್ತೂರಯ್ಯ ಅಟ್ಟಿ ಕೋಳಿ ಕದ್ದದ್ದು!... ಸುಮಾರು ನಾಕೈದು ತಿಂಗಳ ಇಂದಿನ ಮಾತು. ಒಂದು ಮುಚ್ಚಂಜೆನಾಗ, ಟಗರೂರ ಹೆಗಲ ಮ್ಯಾಲೆ ಒಂದು ಹಸಿಬೆ ಚೀಲ ಅಕ್ಕಂಡು ಹುಣಸೂರು ಪ್ಯಾಟ ಸಂಂದ ಊರೊಳಗೆ ಬಂದೋನು, ಹಲಗೇರಿ ಕಡೀಕೆ ವೊಂಟದ್ದ. ದಾರೀಲೆ ಕೆಸ್ತೂರಯ್ಯ ಅಟ್ಟಿ ಸಿಕ್ತು. ಆವತ್ತು ಸಂತೆ ಜಿನ ಅಲ್ವ?ಸಂತೆಗೋಗಿದ್ದ ಜನ ಹುಣಸೂರಿನಲ್ಲಿ ಅದು ಇದು ಸೂಟಗ ಸಂಬಾರಾಂತ ಯವಾರ ಮಾಡ್ತ ಊರಿಗಿನ್ನೂವೆ ಮರಳಿರನಿಲ್ಲ. ಕೆಸ್ತೂರಯ್ಯನ ಮನೆಯೋರು, ಅಮ್ಮ ಸುತ್ತಾಮುತ್ತಾಲ ಮನೆಯೋರು ಇನ್ನೂ ಊರು ಕಡೆ ದಾರೀಲಿ ಬತ್ತಾ ಇರಬೇಕು. ಅಟ್ಟಿ ವಳುಗಡೆ ಒಬ್ಬರೋ ಇಬ್ಬರೋ ಮುದುಕೀರು ಇದ್ದಿರಬೇಕು. ಅಲ್ಲಿ ಹೈಕಳು ಆಚೆ ಬೀದಿ ಮುಂದ ಮಾಳದಲ್ಲಿ ಆಡಿಕತ್ತ ಇದ್ದುವಂತೆ... ಟಗರೂರ ನ್ಯಾಡ - ಕೆಸೂರಯ್ಯನ ಅಟ್ಟಿಗೂ ನರಸಯ್ಯನ ಅಟ್ಟಿಗೂ ನಡುತಾವಿನ ಸೊಂಪಲಲ್ಲಿ ನಾಕೈದು ಕೋಳಿ ಮೇಯ್ತಿದ್ದೊ. ಟಗರೂರನಿಗೆ ಬಾಯಲ್ಲಿ ನೀರು ಕಿತ್ತುಗತ್ತು. ಊಟ ಮದ್ದಯ ಬಾವಿಗೆ ಅಂಟಿಗಂಡಂಗೆ ಯಾರೋ ಪುಣಾತ್ಮರು ಇಂದುಕೆ ಒಂದು ದೊಡ್ಡ ಕಲ್ಲು ದೋನಿ ಕೆತ್ತಿಸಿ ಇರಿಸಿದ್ದು, ಆ ಬಾವೀಲೆ ನೀರು ಸೇದೋ ಎಂಗಸರು ಗಂಡಸರು ಯಾರಾದರೂ ಸರಿ, ಸರ್ವೇ ಸಾದಾರಣಾಗಿ ತಮತಮ್ಮ ಅಟ್ಟಿಗೆ ನೀರು ಸೇದೋವಾಗ, ಒಂದು ಚರಿಗೆಯೊ ಏಡು ಚರಿಗೆಯೊ ನೀರ ಆ ಕಲ್ಲುದೋಣಿಗೆ ತಪ್ಪದೆ ಸುರಿದು ವೋಯ್ತಿದ್ದರು. ಸಕುತಿ ಇದ್ದೋರು ಮೂರು ನಾಕು ಚರಿಕೆ ಸುರಿಯಾದು ಉಂಟು. ಬಾಯಾರಿ ಬಂದ ಎಮ್ಮೆ ದನ ಕುಡೀಲೀಂತ ಇಂಗೆ ಸೇದಿ ಆಕೋರು. ಆ ನೀರ ಈ ಪ್ರಾಣಿಗಳ ಜ್ವ, ಹಕ್ಕಿಪಕ್ಷಿಗಳೂವೆ ಕುಡುದೋಯ್ತಿದ್ದೆ. ಅಂಗಾಗಿ, ಅ ಕಲ್ಲು ದೋಣಿಯ ನೀರು ಖಾಲಿ ಆಯ್ತಾನೆ