ಪುಟ:ವೈಶಾಖ.pdf/೨೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಮಗ್ರ ಕಾದಂಬರಿಗಳು ೨೩೩ ಇರನಿಲ್ಲ. ಟಗರೂರ ಸೀದ ಆ ಕಲ್ಲುದೋಣಿ ಅತ್ರ ವೋದ. ತನ್ನ ತಲೆಗೆ ಸುತ್ತಿದ್ದ ವಸ್ತ ತಗದು ಅದರಾಗಿ ಅದಿದ್ದ. ಆಮ್ಯಾಕೆ ಆ ವಸ್ತವ ಹಿಂಡಿ, ಅದ್ರ ಕೊಂಡೋಗಿ, ಮೆತ್ತಗೆ ಊಂಚಾಕ್ತ ಸ್ವಂಚಾಕ್ತ, ಆ ಕೋಳಿ ತಿರುಗಿದಂತೆ ತಿರುಗಿದಂತೆ ಇಂದಿಂದೆ ನಡುದು, ಸಮಯ ಕಾದು, ಬೋ ಹುನ್ನಾರಿಂದ ತಾನು ಇಡುದಿದ್ದ ವದ್ದೆ ಪಾವಡೇಯ ತಟಕ್ಕನೆ ಅದರ ಮಾಲೆ ದಬ್ಬಾಕಿದ. ವದ್ದೆ ಪಾವಡೆ ತನ್ನ ಮ್ಯಾಲೆ ಬೀಳ್ತಾನೂವೆ ಆ ಕೋಳಿ ಕಮಕ್ ಕಿಮಕ್ ಅನ್ನನಿಲ್ಲ. ತಕ್ಷಣ ಅಮಗೇ ಅದೂ ಎತ್ತಿ, ತನ್ನ ಹಸಿಬೆಚೀಲಕೆ ತುರಕಿ, ಆ ಚೀಲವ ತನ್ನ ಎಗಲ ಮ್ಯಾಕ್ಕೆ ಎಸೆದು ಕಳ್ಳ ಎಜ್ಜೆ ಆಕ್ತ ವೊಂಟ... ತನ್ನ ಗುಡ್ಡ ತಲುಪಿ, ಹಸಿಬೆ ಚೀಲದಿಂದ ಕೋಳಿಯ ಹೂಗೀಕೆ ತಗೀತ, “ತಕ್ಷಣೆ, ವೈನಾದ ಕೋಳಿ ತಂದಿಮ್ಮಿ... ನಾತ್ರೆಗೆ ಹೊಗುದಸ್ತಾಗಿ ಎಸರ ಮಾಡಿಕ್ಕು” ಅಂದ. ಹುಚ್ಚುಬೋರಿಗೆ ಎಲ್ಲಿಲ್ಲದ ಕುಸಾಮತ್ತಾಗಿ, “ಇದ ತರಕ್ಕೆ ಈಗೆಲ್ಲಿ ದುಡ್ಡು?” ಕ್ಯಾಳಿದ್ದು. “”ನನ್ನ ಯೋನಂತ ತಿಳುಕಂಬುಟ್ಟೆ?- ಯೇಣ್ಣಿ, ಒಂದು ಕೋಳಿ ತರಕ್ಕು ತಾಕತ್ತ ನಂಗೆ?”- ಕ್ವಾಪ ಬಂದೋನಂಗೆ ನಟನೆ ಮಾಡಿ, ಆಮ್ಯಾಕೆ ಬಿದ್ದು ಬಿದ್ದು ನಗಾಡ್ತ. - “ವೋಗೆ ಬೋರಿ. ನೀನೊಂದು ಪೆದ್ದುಗರ. ಈ ಕೋಳಿಗೆಲ್ಲ ದುಡ್ಡು ಸುರಿಯಕ್ಕೆ ನಾಯೇನ ದೊರೆ ಮೊಮ್ಮಗನ?” ಅಂದುದಕೆ, ಬೋರಿ “ಒಂದು ಕೋಳಿ ತರಕ್ಕೆ ಒಬ್ಬ ದೊರೆ ಮೊಮ್ಮಗನೆ ಆಗಬೇಕೆ?- ನೀ ಕುಡಿಯಾ ದುಡ್ಡಲ್ಲಿ ಉಳಿಕೆ ಮಾಡಿದ್ರೆ, ವಾರಕೊಂದು ಜಿನ ಆದ್ರೂ ನಮ್ಮ ಗುಡ್ಡಲ್ಲೂವೆ ಕೋಳಿ ಕಾರ ಆರೀನೇಬೈದು!...” ಅಂದ್ಲು. ಟಗರೂರ, “ಅಯ್ಯೋ ಪೆದ್ದಗರುವೆ, ಇದ್ದ ನಾ ದುಡ್ಡ ಕ್ವಿಟ್ಟು ತಂದೇಂತ ನೀ ತಿಳುಕಂಡ್ಯ?”- ನಕ್ಕು, “ಕ್ಯಾಳು, ಯೋಳ್ತಣಿ” ಅಂದು, ತಾನು ಆ ಕೋಳಿಯ ಎಂಗೆಹಾರಿಸಿ ತಂದೆ ಅನಾದ ಕಣ್ಣಿಗೆ ಕಟ್ಟೂವಂಗೆ ಇವರಿಸಿದನಂತೆ! ಇದರಿಂದ-ಏಟೊ ಜಿನ ಕಳುದ ಮ್ಯಾಲೆ ಇವೊತ್ತೊಂದು ಕೋಳಿ ತಿನೊ ಅವಕಾಶ ಸಿಕ್ಕಿಲ್ಲ ಅಂತಾವ, ಹುಚ್ಚುಬೋರಿಗೆ ಕುಸಿ ಆದರೂವೆ, ಮಗಳು ಚೆಲುವಿಗೆ ಮಾತ್ರ ಅವಳಯ್ಯನ ನಡತೆ ಇಸುಸನಿಲ್ಲವಂತೆ! “ಮಯ್ಯ ಮುರುದು ದುಡೀಬೇಕು. ಘನ್ನಬೇಕು. ಕದ್ದು ತಂದು ತಿನ್ನಾದು ನಂಗೇನೂ ಒಪ್ಪಿತ ಆಗ್ತಿಲ್ಲ”- ಕಡ್ಡಿ ಮುರಿದಂತೆ ಯೋಳಿದ್ದಂತೆ.