ಪುಟ:ವೈಶಾಖ.pdf/೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಮಗ್ರ ಕಾದಂಬರಿಗಳು ಅನ್ನ, ಮೆಂತ್ಯದ ಹಿಟ್ಟಿನ ಗೊಜ್ಜು, ಪಡವಲಕಾಯಿ ಹುಳಿ ಇತ್ಯಾದಿಗಳನ್ನು ರುಕ್ಕಿಣಿ ಮೊನೆ ಬಾಳೆಯೆಲೆಯ ಮೇಲೆ ಬಡಿಸುತ್ತಿದ್ದಂತೆ ಶಾಸ್ತ್ರಿಗಳು ಗಾಯತ್ರಿ ಹೇಳಿ, ಪರಿಷೇಚನೆ ಮಾಡಿ, ಚಿತ್ತಾಹುತಿ ಇಟ್ಟು, ಉದಕಪ್ರಾಶನ ಮಾಡಿ ಮಂತ್ರೋಚ್ಚಾರಣೆಯೊಡನೆ ಊಟಕ್ಕೆ ಕೂತರು. ರುಕ್ಕಿಣಿಯು ಶಾಸ್ತ್ರಿಗಳು ಕೇಳಿದ್ದನ್ನು ಬಡಿಸಿ, ಅವರು ಊಟ ಮುಗಿಸಿ, ಆಪೋಶನ ತೆಗೆದುಕೊಂಡು ಗೌರವೇ ಅಪುಣ್ಯನಿಲಯಂ ಇತ್ಯಾದಿ ಹೇಳಿ, ಅನ್ನದಾತಾ ಸುಖೀಭವ, ಎನ್ನುತ್ತ ನೀರು ಬಿಟ್ಟು ಏಳುವವರೆಗೂ ಸೊಂಟಕ್ಕೆ ಸೆರಗು ಸೆಕ್ಕಿ ನಿಂತೇ ಇದ್ದಳು.

  • ಊಟ ಮುಗಿಸಿ ಶಾಸ್ತ್ರಿಗಳು ಹಜಾರದ ಮೂಲೆಗೆ ಹಾಸಿದ ಚಾಪೆಯ ಮೇಲೆ ಕುಳಿತು, ಸುತ್ತಿಟ್ಟ ಹಾಸಿಗೆಗೆ ಬೆನ್ನು ಕೊಟ್ಟು, ಕಾಲು ಚಾಚಿ, ಬೆಳ್ಳಿಯ ತಟ್ಟೆಯಲ್ಲಿ ರುಕ್ಕಿಣಿಯು ತಂದಿಟ್ಟ ಗೋಟಡಿಕೆಯನ್ನು ಬಾಯಿಗೆಸೆದು ಕಟುಂ ಕಟುಂ ಎಂದು ಅಗಿಯುತ್ತ, ವೀಳೆಯದೆಲೆಗೆ ಸುಣ್ಣ ಹಚ್ಚುತ್ತಿದ್ದ ಹಾಗೆ, “ಪರವಾಗಿಲ್ಲ, ಐವತ್ತರ ಮೇಲೆ ಆಗಿದ್ದರೂ ನಮ್ಮ ಅಯ್ಯನೋರ ಹಲ್ಲು ಇನ್ನೂ ಗಟ್ಯಾಗೇ ಅವೆ” ಎನ್ನುವ ಮಾತು ಕೇಳಿ, ಕತ್ತೆತ್ತಿ ಅಂಗಳದ ತುದಿಗಂಬಕ್ಕೆ ಆಂತು ಕೂತಿದ್ದ ವ್ಯಕ್ತಿಯನ್ನೆ ನಿರ್ಭಾವದಿಂದ ನೋಡಿದರು. ನಂಜೇಗೌಡ ಸಹಜವಾಗಿ ಮಾತಾಡಿದ್ದರೂ ಶಾಸ್ತಿಗಳು ಅವನ ಮಾತಿನಲ್ಲಿದ್ದ ಕೊಂಕನ್ನು ಗಮನಿಸಿದೆ ಇರಲಿಲ್ಲ. ಆದರೂ ಅವರು ಮೌನವಾಗಿಯೇ ಇದ್ದರು... ನಂಜೇಗೌಡ ಮಹಾ ಕಿತಾಪತಿ ಮನುಷ್ಯ, ತನಗೆ ವಿರೋಧವಾದರೆ ಊರಿಗೆ ಊರನ್ನೇ ಹೊತ್ತಿಸಿ ಬೇಯಿಸುವಂಥವನು. ಊರಿನಲ್ಲಿ ಯಾರೂ ಸುಖವಾಗಿರಬಾರದು. ತನ್ನನ್ನು ಮೀರಿ ಯಾರೂ ಬೆಳೆಯಬಾರದು. ಇದು ಅವನ ಚಾಳಿ. ತನ್ನ ಜುಬ್ಬದ ಜೇಬಿನಿಂದ ಒಂದು ಬೀಡಿಕಟ್ಟನ್ನು ಹೊರದೆಗೆದು ಒಂದು ಬೀಡಿಯನ್ನು ಹೊತ್ತಿಸುತ್ತ, ನಂಜೇಗೌಡ,

“ಈಗೊಂದು ಎಲ್ಲು ಜಿನದಿಂದ ಮಾಡ ಮೊಖ ಗಂಟಾಕಂಡೇ ಅದೆ. ಇಟ್ಟು ಅನೀನೂ ಕರೀನೇ ಇಲ್ಲ” ಎಂದ. “ಊರಿನಲ್ಲಿ ನಾವು ಹೇಗೆ ಆಡ್ತಾ ಇದೇವೋ ಮೋಡವೂ ಹಾಗೇ ಆಡ್ತಾ ಇದೆ-“ ಕಣ್ಣು ಸಣ್ಣದ್ದು ಮಾಡಿ ಶಾಸ್ತ್ರಿಗಳು ತೀಕ್ಷವಾಗಿ ನೋಡಿದರು. “ಯಾಕೆ ಸೋಮಿ ಅಂಗಂದೀರಿ?... ನಮ್ಮೂರು ಯೇನಾಗಿದ್ದರು?... ಪಗಡೆ ಆಡಿ ರಾಜ್ಯ ಸೋತ ಪಾಂಡವರು, ನಿಮ್ಮ ಗೈರೋವಂಗೆ, ವನವಾಸ ಹೂಂಟಾಗ, ನಮ್ಮೂರಿನಾಗೂ ವಸಿ ಜಿನ ತಂಗಿದ್ರು ಅಂತ ಯೇಳಕ್ಕಿಲ್ಲ?... ಅದುಕೇ ದರುಮರಾಯನ ಎಸನ್ನೇ ಕರೆದವಲ್ಲ ನಮೂಗ್ಗೆ- ದರುಮನಳ್ಳಿ, ದರುಮನಳ್ಳಿ ಅಂತಾವ!” O