ಪುಟ:ವೈಶಾಖ.pdf/೨೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಮಗ್ರ ಕಾದಂಬರಿಗಳು ೨೩೫ ಜವರಯ್ಯ ಒಂದು ತಂತೇಲಿ ಹುಣಸೂರು ಪ್ಯಾಟೇಲಿ ಸಿಕ್ಕಿ, ಅಲ್ಲೀತನಕ ತನ್ನ ವೋಟೇಲೆ ಜ್ವಾಪಾನಾಗಿ ಬೀಗಮುದ್ರೆ ಆಕಿ ಇಟ್ಟುಗಂಡಿದ್ದ ಇಸ್ಯವ ತನ್ನತ್ರ ಗುಟ್ಟಾಗಿ, “ಇಗ ಯೋಳ್ಳಿರೊ ಇಸ್ಯವ ಯಾರ ಕುಟ್ಟಾರು ಯೋಳಿಬುಟ್ಟಿ ಕನಪು... ನಿನ್ನ ದಮ್ಮಯ್ಯ.... ನನ್ನ ವೊಟೇಲಿ ಈಟು ಕಾಲವೂ ಇದೂ ಎಂಗೋ ಇಟ್ಟುಕಂಡು ಕಾಲ ತಳ್ಳಿದೆ. ಇನ್ನು ಆಗಕ್ಕಿಲ್ಲ, ಯಾರ ಕುಟ್ಟಾರು ಯೋಳದೆ ಮೋದರೆ, ನಂಗೆ ವೊಟ್ಟೆ ಉಬ್ಬರಣೆ ಬಂದು ನಾ ಸತ್ತೇವೋಗೊದಂತೂ ನಿಚ್ಚಯ... ಅದುಕೆ, ನಿನ್ನ ತಾವು ಯೆಲ್ಲನೂ ಬಿಚ್ಚುತ್ತಾ ಇನ್ನಿ. ನೀನು ಬಾಕಿಯೋರಂಗೆ ಬಾಯಿಬಡುಕ ಅಲ್ಲ, ಯಾವ ಇಸ್ಕಾನಾರು ವೋಟೇಲೆ ಇಟ್ಟುಕತ್ತೀಯಾಂತ ಅನುಬೋಗದಿಂದ ತಿಳುಕಂಡೀಮ್ಮಿ...ಆದರೂವೆ, ತಲೆ ವೋಗೊ ಇಸ್ಯ. ಒಂದು ದಪ್ಪ ಪಂಚಾತೀಲಿ ತೀರ್ಮಾನ ಆಗಿ ಮುಗಿದೊಗದೆ, ಯಾರ ಕುಟ್ಟುವೆ ನೀ ಯೋಳಕ್ಕಿಲ್ಲ ಅಂತ ಭಾಸೆ ಕ್ವಟ್ಟರೆ, ನಾ ಯೋನಿ ಕ್ವಾಡಪ್ಪ” ಅಂದ. “ಜಡೆಮುನಿ ಆಣೆಗೂ ನಾ ಯೋಳಕ್ಕಿಲ್ಲ. ಅದೇನು ಯೋಳಿರಯ್ಯ”ಅಂತ ತಾನು ಭಾಸೆ ಕ್ವಟ್ಟಮ್ಯಾಲೆ ಜವರಯ್ಯ ಬಾಯಿ ಬಿಚ್ಚಿದ. ಜವರಯ್ಯಂಗೂ ಸತ್ತೋದ ಆ ಹೈದ ಹಲಗಂಗೂ ಬೋ ಚೆಂದ. ಯಾವ ಇಚಾರ ಆದರೂವೆ ಹಲಗ ಜವರಯ್ಯ ಅತ್ರ ಯೋಳಿಕೊಬೇಕು. ಅವು ಯಾರ ಸಂಗಾಟವೂ ಯೆಚ್ಚಾಗಿ ಸೀನೆಯ ಮಾಡಿಕರನಿಲ್ಲ- “ನಿನ್ನಂಗೆ ಗುಟ್ಟುಗಾರ ಕನೊ” ಇಲ್ಲೀತಂಕ ಅವ್ರ ಸಾವಿನ ಇಚಾರವಾಗಿ ಹಬ್ಬಿರಾ ಸುದ್ದಿಗೆ ಬುಡವೆ ಇಲ್ಲ. ದಿಟ್ಟವಾಗೂ ನಡದ್ದೇನಪ್ಪ ಅಂದ್ರೆ- ಇಂದುಕೆ ಒಂದು ಜಿನ, ದೇಸದಲ್ಲಿ ಯಾರೊ ಸತ್ತೋಗಿ, ಮಟಕ್ಕೋಗಿದ್ದ ಹೈಕಳೆಲ್ಲ ಉಪಾದ್ಯರು ರಜ ಕ್ವಿಟ್ಟು ಕಳಿಸಿಬುಟ್ಟಿದ್ರು, ಊರಿಗೆ ಬಂದ ಹಲಗ ತಮ್ಮ ಅಟ್ಟಿ ಮುಂಚೋರಿ ಕಡ ಆಕಿರೋದ ಕಂಡು, ಅವ್ವ ದಣಿದು ಬಂದು ಮನಗಿರಬೈದು, ಯಾಕೆ ಸುಮ್ಮಕೆ ಅವಳ ಯೋಳಿಸಬೇಕೂಂತ, ಹೈದ ಹಿತ್ತಲ ಬಾಗಿಲ ಚೋರಿ ಯೇನಾರ ತಗಿದಿದ್ದಾತ ಕ್ವಾಡಾನೆಂತ, ಅಲ್ಲಿಗೋಗಿ ಕದವ ಮೆತ್ತಗೆ ದಬ್ಬಿದನಂತೆ ಆ ಕದ ತಕ್ಕಂತೆ. ಎಂಕಿ ಆ ಕದ ಭದ್ರ ಮಡಾದ ಮರತು ಮನಗಿದ್ದಲು. ಹೈದ ವಳುಗೋಗಿ ಕ್ವಾಡ್ತದೆ... ಅವ್ವ ಹುಟ್ಟಿದ್ದ ಹುಟ್ಟಿದಂಗೇಯ ಬೆತ್ತಾನು ಬೆತ್ತಲೆ ಅಂಗಡಿ ಬಸಲಿಂಗು ಜತೆ ಬಿದ್ದು ಕಂಡವಳೆ!... ಹೈದ ಕಲ್ಲಾಗಿ ನಂತನಂತೆ!... ಅವೋನ್ನಿಂದ ಹೈದನ್ನ ಕಂಡರೆ ಎಂಕಿಗೆ ಹುಚ್ಚು ಕ್ವಾಪ, ಸಣ್ಣಪುಟ್ಟ ತಪ್ಪಿಗೆಲ್ಲ ಏಟು, ಬೆನ್ನಲ್ಲಿ ಬಾಸುಂಡೆ ಯೆಳೀದೇ ಇದ್ದ ಜಿನವೆ ಅಪರ್ಪ. ಅವಳ ಮಯೊಳಗೆ ಭೂತ ಕುಣಿಯಕ್ಕೆ ಸುರು ಆಗೋಯ್ತು . ಜಿನದಿಂದ ಜಿನಕೆ ಅಟ್ಟೇಲಿ ಅವಳ