________________
೨೩೬ ವೈಶಾಖ ರಾದ್ದಾಂತ ಎಚ್ಚಕತ್ತಿತ್ತೆ ಜ್ವರತು ಕಮ್ಮಿ ಆಗೊ ಸುಳುವೆ ಕಾಣನಿಲ್ಲ.... ನನ್ನ ಕುಟ್ಟೆ ಹೈದ, “ಇನ್ನು ನಂಗೆ ಬದುಕಕ್ಕೆ ಆಸ್ಯೆ ಇಲ್ಲ. ಜವರಪ್ಪ” ಅಂತ ಯೋಳಿಕತ್ತಾನೇ ಇತ್ತು. “ಚಿಕ್ಕೋನು ಮುಟ್ಟೋನು- ಅಂಗೆಲ್ಲ ಮಾತಾಡಬಾರು” ಅಂತ ನಾನು ಬದ್ದಿ ಯೋಳಿದೆ. ನನ್ನ ತಬ್ಬಿಕಂಡು ಗೋಳೇಂತ ಆಳ, ಒಂದು ಆಯಿತವಾರ ಸಂದೀನಾಗ ಕೆರೆ ಅತ್ರ ನಾವಿಬ್ರೇ ಇದ್ದಾಗ, ನಡದದ್ದೆಲ್ಲ ಮುಚ್ಚುವರೆಯಿಲೆ ಯೋಳಿ “ಇನ್ನು ಯಾವ ಆಸೆಗೆ ಬದುಕಬೇಕು? ನೀನೇ ಯೋಳು...” -ನನ್ನೇ ಕೇಳು... ನಿಂಗೂ ಸ್ವತ್ತಲ್ಲ, ನಿಷ್ಟುರಗಾರ ಹೈದ, ಮನಸ್ಸಿಗೇನಾರ ಬಂದ್ರೆ, ಅನ್ನ ಸಾದಿಸೋವಂತ ಗಂಡೇಯ. ನಾನೂವೆ ತಿಳಿದ ಬುದ್ದೀನೆಲ್ಲ ಯೆಚ್ಚ ಮಾಡಿ ಯೋಳೆ, ಅವು ನಂಗೆ ಯೋಳ ಕೊನೇ ಮಾತು ಏನಂತೀಯ?... “ನಿಂಗ್ಯಾಕೆ ಜನರಯ್ಯ, ಸುಮ್ಮಕೆ ಚಪಲ. ನಮಗೂ ನಮ್ಮವ್ವಂಗೂ ಇನ್ನು ಈ ಧರೇ ಮ್ಯಾಲೆ ರುಣತೀರೋಯ್ತು ...” ಹಲಗೆ ಇಂಗ ನನ್ನತ್ರ ಖೈಡಾಗಿ ಯೋಳಿದ್ದು ಮಂಗಳಾವರ ಬೈಗಿನಲ್ಲಿ. ಬದುವಾರ ಬೆಳಿಗ್ಗೆ ಎದ್ದೋನು ನ್ಯಾರವಾಗಿ ಅವರ ಅಟ್ಟಿ ತಾವಿಕೋದೆ. ಅಗ ಹಲಗ ಟಿಪನ್ ಕರಾರ ವೋರೀಕೆ ತಂದಿಟ್ಟೋನು, ಅದೇನು ಮನಸ್ಸು ಬಂತೋ, ಆತರಾತರಾಗಿ ಪುನಾ ಅಟ್ಟಿ ವಳೀಕೆ ಗುಡುಕ್ಕುನೋಗಿ ಕದ ಆಕ್ಕಂಡ, ಮಟದ ಹೈಕಳೆಲ್ಲ ಆಗ್ಗೆ ಊರಿಂದ ವೊಂಟು ಬರೋವಾಗ ದಾರೀಲೆ ಸಿಕ್ಕಿದ್ದೊ. ನಿಮ್ಮ ಜತೆ ಹಲಗ ಯಾಕೆ ಬರನಿಲ್ಲಾಂತ ಕೇಳೆ, ಅಟ್ಟಿಲಿ ವಸಿ ಕೇಮೆ ಅದೆ, ಅದ ಮುಗುಸಿ ಬತ್ತೀನಿ... ಆ ಹೈಕಳು ಯೋಳಿದ್ದಕೂ ನಾನು ಅಟ್ಟಿ ತಾವು ಕಂಡ ದುರಸ್ಕಕೂ ಚಾಟಿ ಆಯ್ತು. ಅಂಗೆ ಆತರಾಗಿ ಟಿಪನ್ ಕರಾರ ಹರೀಕಿಟ್ಟು ವಳೀಕೋದ ಹೈದನ ಚರ್ಯ ಕಂಡಮಾಲಂತೂ ನಂಗೆ ಪೂರಾ ಅನುಮನಸಾಯ್ತು. ದಡದಡನೋಗಿ ಕದ ತಟ್ಟಿದೆ. ಎಸರು ಎಡದು ಕೂಗ್ಗೆ, ವಳುದ್ರಿಂದ ಏಟೋತ್ತಾದರೂವೆ ಜವಾಬೆ ಬರವಿಲ್ಲ. ಅಂಗೇ ವಸಿವೊತ್ತು ನಿಂತಿದ್ದೋನು ಕದಕ್ಕೆ ಕಿವಿ ಕ್ವಿಟ್ಟು ನಿಂತೆ. ನಳುನ್ನಿಂದ ಗೊರ್ ಗೊರ್್ರ ಅಂತ ಸದ್ದು ಬತ್ತಿತ್ತು. ನಂಗೆ ಕಯ್ಯಕಾಲು ವದುರಕ್ಕೆ ಸುರು ಆಯ್ತು. ಇನ್ನು ಅಲ್ಲಿ ನಿಂತರೆ ನನ್ನ ಮ್ಯಾಲೆ ಬಂದಾತು ಅಂತ ಆ ಜಾಗದಿಂದ ಆ ಕ್ಷಣದಲ್ಲಿ ನಿಕಾಲಾದೆ.” ಬೆಪ್ಪಾಗಿ, ಜವರಯ್ಯ ಯೋಳ ಕೇಳ್ತಾ ನಿಂತಿದ್ದೋನು,
- ಅಂಗಾರೆ, ಟಗರೂರ ಆ ಡಬ್ಬಿ ಎತ್ತಕ್ಕೆ ಮುಂಚೆ ಹೈದ ಸತ್ತೋಗಿತ್ತು ಅನ್ನು?” ಅಂದ ಲಕ್ಕ,
“ಅಯ್, ಟಗರೂರ ಬರಕ್ಕೆ ಸುಮಾರು ವೊತ್ನಲ್ಲೆ ಆ ಹೈದ ಪ್ರಾಣ