________________
ಸಮಗ್ರ ಕಾದಂಬರಿಗಳು ೨೩೭ ವೋಗಿರಬೇಕು.” “ಅಂಗಾರೆ, ಟಗರೂರ ಡಬ್ಬಿ ಎತ್ತಿದ್ರಿಂದ ಯೇನೂವೆ, ಆ ಹೈದ ಸಾಯನಿಲ್ಲ ಅಂದಂಗಾಯ್ತು?” ಲಕ್ಕ ತನಗೆ ತಾನೆ ಮಾತಾಡಿಕಳೊತರ ಕ್ಯಾಳಿದ್ದ. “ಅದು ಹ್ಯಾಗಲಿ ಅಂದೆ ಆ ಮಾನಗೆಟ್ಟ ಯಜಮಾನು, ಆ ಹೈದ ಮಣ್ಣು ಮಾಡಕ್ಕೆ ಎಂಕಿ ಕಯ್ಯಲಿ ಬರಿ ನೂರು ರೂಪಾಯಿ ಕ್ವಟ್ಟು, ಉಳುಕೆ ಒಂಬಯನೂರು ರೂಪಾಯೂವೆ ಮಾದೇಶ್ವರನ ಗುಡಿ ಲಿಪೇರಿ ಮಾಡಿಸ್ತೀವಿಂತ ತಾವು ತಾನೆ ಅಂಚಿಕಂಡ್ರಲ್ಲ... ಈ ಅನ್ಯಾಯಕೆ ಯೇನು ಯೋಳೋದಪ್ಪ...” “ಅದ್ಯಾವ ಹೊಸ ಇಸ್ಯ ಬುಡು. ಕಾಲದಿಂದ್ದೂ ಇಂಗೇ ನಡದು ಬಂದದೆ. ಈ ಅನ್ಯಾಯದಲ್ಲಿ ಹುಟ್ಟಿ, ಈ ಅನ್ಯಾಯದಲ್ಲೆ ಬೆಳೀತಾ ಅದೆ, ನಮ್ಮ ಪಂಚಾತಿ...” ಲಕ್ಕನ ಮಾತ್ನಲ್ಲಿ ಸಂಕ್ಷದ ಜ್ವತ್ತತೆ ರೋಸವೂ ಬೆರುತ್ತಿತ್ತು. ಆದರೆ, ಉಳಿಕೆ ಒಂಬೈನೂರ ರೂಪಾಯಿಗಳನ್ನು ಹಂಚಿಕೊಳ್ಳುವಾಗ, ತನಗೆ ಬಂದ ಪಾಲು ಕಡಿಮೆ ಆಯ್ತು ಎಂದು ಕೋಟೆ ಬುಳ್ಳಪನಿಗೆ ಕೋಪ ಬಂದಿತು. ಪರಿವಾರದ ಜಾತಿ ಎಂಕಿಯ ಮಗ ಹಲಗ, ಸುಮಾರು ಹನ್ನೆರಡು ವರ್ಷದ ಬಾಲಕನು ಆತ್ಮಹತ್ಯೆ ಮಾಡಿಕೊಂಡು ಸತ್ತಿರುವುದಾಗಿಯೂ ಊರಿನ ಇತರೆ ಯಜಮಾನರು ಗೋಪ್ಯವಾಗಿ ಆ ಹಣವನ್ನು ಮಣ್ಣು ಮಾಡಿರುವುದಾಗಿಯೂ ಹುಣಸೂರು ಪೋಲೀಸು ಠಾಣೆಗೆ ಮೂಗರ್ಜಿ ಬರೆದ. ಒಡನೆಯೇ ಒಬ್ಬ ಪೋಲೀಸು ಪೇದೆಯೊಡನೆ ಸಬ್ಇಬ್‌ಸೆಕ್ಟರ್ ಗೊಳಪ್ಪ ದರುಮನಳ್ಳಿಗೆ ಒಂದು ಬೆಳಿಗ್ಗೆ ಹಾಜರಾದರು. ಸಬ್ ಇನ್‌ಸ್ಪೆಕ್ಟರ್ ಗೊಳಪ್ಪನವರು ಹಟಾತ್ತನೇ ಪ್ರತ್ಯಕ್ಷವಾದದ್ದು ದರುಮನಳ್ಳಿಯ ಜನರನ್ನು ದಿಗೃಮೆಗೊಳಿಸಿತು. ಗೊಳಪ್ಪನವರು ತಾವು ಬಂದ ಕಾರಣವನ್ನು ತಿಳಿಸದ ಬಳಿಕವಂತೂ ಊರಿನ ಮುಖಂಡರ ಜಂಘಾಬಲವೇ ಉಡುಗಿಹೋದಂತಾಯಿತು. ಗೂಳಪ್ಪ ಹೊದೆ ಹೊದೆ ಮೀಸೆಯ 'ಕಪೀನಿ' ಆಳು. ಎತ್ತರದಲ್ಲಿ ಕುಳ್ಳು, ಆದರೂ ತೋರವಾದ ಮಯ್ಯ, ಮೆಡ್ಡಗಣ್ಣು, ಖಾಕಿ ಪೋಷಾಕಿನ ವೈಖರಿಯಲ್ಲಿ, ಸಾಮಾನ್ಯರನ್ನು ಅದರಲ್ಲೂ ಹಳ್ಳಿಗಾಡಿನ ಮುಗ್ಧ ಮಂದಿಯನ್ನು ಭೀತಿ ಗೊಳಿಸುವ ವ್ಯಕ್ತಿತ್ವವನ್ನು ಆತನಿಗೆ ದಯಪಾಲಸಿದ್ದವು. ಗಳ ಪ್ರನ ಆಗಮನದಿಂದ ಎಲ್ಲರಿಗಿಂತ ವಿಶೇಷವಾಗಿ ಕಸಿವಿಸಗೊಂಡವರೆಂದರೆ ಶ್ಯಾನುಭೋಗ ಸೀತಾರಾಮಯ್ಯ, ಈತ ತಮ್ಮ ತಂದೆ