ಪುಟ:ವೈಶಾಖ.pdf/೨೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಮಗ್ರ ಕಾದಂಬರಿಗಳು ೨೪೧ ಕಾಯ್ದೆ ಅಮರಿಕಂಡಾದು ಅಂತ ಜಟಪಟನೆ ಅದ್ರ ಮಸಣಕ್ಕೆ ತಟಾಯಿಸ್ಕೊ, ವೋಟೆಯ... ಇದ್ದ ದೊಡ್ಡದು ಮಾಡಬ್ಯಾಡಿ, ನಾನು ನಮ್ಮ ಊರಿನೋರ ಪಾಗಿ ಕಯ್ಯ ಮುಗುದು ಬೇಡಿಕತ್ತೀನಿ... ಇದರಿಂದ ನಮ್ಮೂರ ಮಾನವೇ ವೋಟೋಯ್ತದೆ...” ಎಂದು ಅಂಗಲಾಚಿದ. “ಹಂಗಾದರೆ-ನಿಮ್ಮೂರಲ್ಲಿ ಆ ಎಂಕಿ ಹೈದ ನೇಣು ಹಾಕೊಂಡದ್ದು, ಅದೆಲ್ಲ ಸುಳ್ಳಾ?... ಇಂತಾದೆಲ್ಲ ನಡೀಲೆ ಇಲ್ಲ ಅಂತೀರ, ಗೌಡರೆ?” “ಬೇಸಕ್ಕಾಗಿ, ನಡೀರ, ಬೇಕಾರೆ ಯಾವ ದ್ಯಾವರ ಮುಂದೆ ನಿಂತು ಬೇಕಾರೂ ಪ್ರಮಾಣ ಮಾಡ್ತೀನಿ.” “ಅಷ್ಟೆಲ್ಲ ತೊಂದರೆ ಯಾಕೆ?... ನೀವು ಪ್ರಮಾಣಾನು ಮಾಡಬೇಕಾಗಿಲ್ಲ. ಬೇರೆ ಯಾವ ತೊಂದರೇನೂ ತಕ್ಕೊಬೇಕಿಲ್ಲ... ಇದ್ದ ಪತ್ತೆ ಮಾಡಕ್ಕೆ ನಾನು ಬೇರೆ ಔಷಧಾನೆ ಇಟ್ಟಿದ್ದೀನಿ.” ನಂಜೇಗೌಡನ ಮಾತು ನಿಂತಿತು. ಶ್ಯಾನುಭೋಗರ ಮಡದಿ ಒಳಗಿನಿಂದ ಸನ್ನೆ ಮಾಡಿದ ಮೇರೆಗೆ, ಶ್ಯಾನು ಭೋಗರು ಎದ್ದು ಹೋಗಿ, ಬೆಳ್ಳಿ ತಟ್ಟೆಯನ್ನು ಈಸಿ ತಂದರು. ಅದರಲ್ಲಿ ಒಂದು ಚಿಪ್ಪು ಬೂದಿ ಬಾಳೆಹಣ್ಣು, ಕೆಂಪು ಬೂರಾ ಸಕ್ಕರೆ ಮತ್ತು ಬೆಳ್ಳಿಲೋಟದಲ್ಲಿ ಕಾಸಿದ ಹಾಲು. “ಬ್ಯಾರೆ ಔಷದಿ ಇಟ್ಟಿ~ ಅಂದಲ್ಲ- ಅಂಗಂದ್ರೇನ ಸೋಮಿ?” ಗಂಗಪ್ಪ ಧೈರ್ಯ ಮಾಡಿ ಕೇಳೇ ಬಿಟ್ಟ. ಗೂಳಪ್ಪ ಒಂದು ಸಲ ಗಂಗಪ್ಪ ನಿರ್ಲಕ್ಷ್ಯದಿಂದ ನೋಡಿ, ಎರಡು ಬಾಳೆಹಣ್ಣು ತಿಂದು, ಹಾಲು ಕುಡಿದು ಮುಗಿಸಿ ಎದ್ದ. ಶ್ಯಾನುಭೋಗರು ಗೂಳಪ್ಪ ಬಿಟ್ಟು ಬಾಳೆಹಣ್ಣುಗಳನ್ನು ಅವನ ಜತೆಗೆ ಬಂದಿದ್ದ ಪೇದೆಗೆ ಕೊಡಲು ಮರೆಯಲಿಲ್ಲ. - ಜಗಲಿಯಿಂದ ಇಳಿಯುತ್ತ, ಗಂಗಪ್ಪನತ್ತ ದೃಷ್ಟಿಹಾಯಿಸಿ, ಗೂಳಪ್ಪ “ಬ್ಯಾರೆ” ಔಷಧಿ ಯಾವದೂಂತ ನೀವೇನಪ್ಪ ಕೇಳಿದೋರು?... ಅದು ಬಲು ಸುಲಭದ ಔಷಧ- ಆ ಹುಡುಗನ ಹೆಣಾವ ಹೂಳಿರೋ ಜಾಗದಿಂದ ಆಗೆಸಿ ತೆಗಿಸ್ತೀನಿ. ಆಮೇಲೆ ಅದ್ರ ವೈದ್ಯರ ಪರೀಕ್ಷೆಗೆ ಗುರಿ ಮಾಡ್ತೀನಿ. ಆಗ ಆ ಹುಡುಗ ನಿಮ್ಮ ಇನ್ನೊಬ್ಬ ಯಜಮಾನ್ನು ಹೇಳಿದ ಹಾಗೆ- ನ್ಯೂಮೋನಿಯಾ ಜ್ವರದಿಂದ ಸತ್ತನೊ ಅಥವ ನನಗೆ ತಿಳಿದಬಂದಿರೊ ಹಾಗೆ ನೇಣುಹಾಕ್ಕೊಂಡು ಪ್ರಾಣ ಬಿಟ್ಟನೋ ಅನ್ನೋದು ನಿಖರವಾಗಿ, ಎಳ್ಳಷ್ಟು ಅನುಮಾನಕ್ಕೂ ಆಸ್ಪದವಿಲ್ಲದೆ ಪ್ರಕಟವಾಗುತ್ತದೆ” ಎಂದು ಹೇಳಿ, ಗಂಗಪ್ಪನೂ ಸೇರಿದಂತೆ ಅಲ್ಲಿದ್ದ